Site icon Vistara News

Shivamogga Airport : ಫೆ.27ರಂದು ಶಿವಮೊಗ್ಗ ಏರ್‌ಪೋರ್ಟ್‌ ಉದ್ಘಾಟನೆ; ಪ್ರಧಾನಿ ಮೋದಿ ಆಗಮನ

Shivamogga Airport

ಶಿವಮೊಗ್ಗ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು ಶಿವಮೊಗ್ಗ ವಿಮಾನ ನಿಲ್ದಾಣ ಲೋಕರ್ಪಣೆಗೆ ಸಿದ್ಧಗೊಂಡಿದೆ. ಫೆ.27 ರಂದು ಏರ್‌ಪೋರ್ಟ್‌ (Shivamogga Airport) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಉದ್ಘಾಟನೆ ದಿನದಂದು ಶಿವಮೊಗ್ಗದ ಏರ್‌ಪೋರ್ಟ್‌ಗೆ ಪ್ರಥಮವಾಗಿ ಪ್ರಧಾನಿ ಮೋದಿ ಅವರ ವಿಮಾನವೇ ಬಂದಿಳಿಯುವುದು ವಿಶೇಷವಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ, ಹೆಚ್ಚು ಉದ್ದದ ರನ್ ವೇ ಹೊಂದಿರುವ ಏಕೈಕ ವಿಮಾನ ನಿಲ್ದಾಣ ಎಂಬ ಖ್ಯಾತಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕಿದೆ. ಅಷ್ಟೇ ಅಲ್ಲ ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಕಡಿಮೆ ವೆಚ್ಚ ಅಂದರೆ ಕೇವಲ 449 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಗಿದಿರುವ ಏಕೈಕ ವಿಮಾನ ನಿಲ್ದಾಣವೆಂದೇ ಪ್ರಖ್ಯಾತಿ ಪಡೆದುಕೊಂಡಿದೆ.

ಇದನ್ನೂ ಓದಿ | Budget Session | ಫೆಬ್ರವರಿ 17ಕ್ಕೆ ಬೊಮ್ಮಾಯಿ ಸರ್ಕಾರದ ʼಚುನಾವಣಾ ಬಜೆಟ್‌ʼ

ಅಂದಹಾಗೆ, ಇದು, ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಕೂಸು ಕೂಡ. ಈ ವಿಮಾನ ನಿಲ್ದಾಣ ಕಾಮಗಾರಿ ಇದೀಗ ಮುಕ್ತಾಯದ ಹಂತ ತಲುಪಿದೆ. ಮುಂದಿನ ತಿಂಗಳು ಫೆ. 27ಕ್ಕೆ ಈ ವಿಮಾನ ನಿಲ್ದಾಣದಲ್ಲಿ ಪ್ರಪ್ರಥಮವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನವೇ ಇಳಿಸಲು ಯೋಜಿಸಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕಮಲದ ಹೂವಿನ ಆಕಾರ ಹೊಂದಿರುವ ಟರ್ಮಿನಲ್ ಕಟ್ಟಡಕ್ಕೆ ಫಿನಿಷಿಂಗ್ ಟಚ್ ನೀಡಲಾಗುತ್ತಿದೆ. ಮತ್ತೊಂದೆಡೆ ಎಟಿಸಿ ಕಟ್ಟಡ ಸೇರಿ ಫೈರ್ ಅಗ್ನಿಶಾಮಕ ಕಟ್ಟಡಗಳು, ನೀರಿನ ವ್ಯವಸ್ಥೆ ಮಾಡುತ್ತಿದ್ದು, ಏರ್‌ಪೋರ್ಟ್‌ಗೆ ಸಂಬಂಧಿಸಿದ ಯಂತ್ರಗಳು, ಕಂಪ್ಯೂಟರ್‌ಗಳು, ಟ್ರಾಲಿಗಳು ಬಂದು ಸೇರಿದ್ದು, ಟರ್ಮಿನಲ್ ಕಟ್ಟಡಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಸುಮಾರು 850 ಎಕರೆ ಪ್ರದೇಶದಲ್ಲಿ ರಾಜ್ಯದ ಅತ್ಯಂತ ಎರಡನೇ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗದ ಈ ವಿಮಾನ ನಿಲ್ದಾಣ ಕಾಮಗಾರಿಯನ್ನು ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ವೀಕ್ಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ವೇಳೆ ಪ್ರಧಾನಿ ಮೋದಿಯವರನ್ನು ಖುದ್ದು ಯಡಿಯೂರಪ್ಪನವರೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದ್ದರು.

ಡಿಜಿಸಿಎ ತಂಡ ಶೀಘ್ರದಲ್ಲಿಯೇ ಏರ್‌ಪೋರ್ಟ್‌ಗೆ ಭೇಟಿ ನೀಡಲಿದ್ದು, ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ವಿಮಾನ ಹಾರಾಟದ ಕಾರ್ಯಾಚರಣಗೆ ಆಸಕ್ತಿ ತೋರಿಸಿದೆ. ಈಗಾಗಲೇ, ಏರ್‌ಪೋರ್ಟ್‌ ಸಿಬ್ಬಂದಿಗೆ ಬೆಂಗಳೂರಿನಲ್ಲಿ ತರಬೇತಿ ಸಹ ನೀಡಲಾಗುತ್ತಿದ್ದು, ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗುತ್ತಿದೆ.

ಇದನ್ನೂ ಓದಿ | BJP Karnataka : ಫೆಬ್ರವರಿ ಅಂತ್ಯಕ್ಕೆ ನಾಲ್ಕೂ ದಿಕ್ಕುಗಳಿಂದ ಬಿಜೆಪಿ ಯಾತ್ರೆ; ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆ: ಕಟೀಲ್‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

Exit mobile version