Site icon Vistara News

Shivamogga Clash | ಚೂರಿ ಇರಿತ ಆರೋಪಿಗಳು 2 ದಿನ ಪೊಲೀಸ್‌ ಕಸ್ಟಡಿಗೆ

Shivamogga Clash

ಶಿವಮೊಗ್ಗ: ನಗರದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಾವರ್ಕರ್‌ ಫ್ಲೆಕ್ಸ್ ಹಾಗೂ ಟಿಪ್ಪು ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆ (Shivamogga Clash) ಸಂಬಂಧ ಪ್ರೇಮ್‌ ಸಿಂಗ್‌ ಎಂಬ ಯುವಕನಿಗೆ ಚೂರಿ ಇರಿತ ಮಾಡಿದ್ದ ಪ್ರಕರಣದ ಮೂವರು ಆರೋಪಿಗಳನ್ನು ಎರಡು ದಿನ ಪೊಲೀಸ್‌ ವಶಕ್ಕೆ ನೀಡಿ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಚೂರಿ ಇರಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ 18ರ ಸಂಜೆ 5ರವರೆಗೆ ಆರೋಪಿಗಳು ಪೊಲೀಸರ ವಶದಲ್ಲಿರಲಿದ್ದಾರೆ. ಪೊಲೀಸರು 5 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಇನ್ನೊಬ್ಬ ಆರೋಪಿ ಕಾಲಿಗೆ ಗುಂಡು ತಗುಲಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ | Shimogga Clash| ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ಯಾಕೆ? ಪ್ರಚೋದಿಸಲು ಅಲ್ವೆ ಎಂದ ಸಿದ್ದು

Exit mobile version