ಶಿವಮೊಗ್ಗ: ಗಂಡ-ಹೆಂಡತಿಯೆಂದು ಭದ್ರಾವತಿಯ ಹೆರಿಟೇಜ್ ರೆಸ್ಟೋರೆಂಟ್ ಕಂ ಲಾಡ್ಜ್ನಲ್ಲಿ ರೂಂ ಪಡೆದು ಜತೆಗೆ ಬಂದವನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅವರಿಬ್ಬರೂ ಪ್ರೇಮಿಗಳ ಎಂಬುದು ತನಿಖೆಯಿಂದ ಗೊತ್ತಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ.
ಜಾವಗಲ್ ಗ್ರಾಮದ ಲಾರಿ ಚಾಲಕ ಪರ್ವೇಜ್ (28) ಮತ್ತು ಆಯೇಷಾ ತಾವಿಬ್ಬರೂ ದಂಪತಿಯಾಗಿದ್ದು, ನಮ್ಮ ಬ್ಯಾಗ್ ಕಾಣೆಯಾಗಿದೆ. ಒಂದು ರಾತ್ರಿಗೆ ರೂಂ ಬೇಕೆಂದು ಗುರುವಾರ (ಜ.೧೨) ರಾತ್ರಿ 11 ಗಂಟೆಗೆ ಲಾಡ್ಜ್ನಲ್ಲಿ ರೂಂ ಮಾಡಿದ್ದರು. ಬೆಳಗಿನ ಜಾವ ರೂಮಿನಿಂದ ಹೊರಬಂದ ಆಯೇಷಾ, ಬ್ಯಾಗ್ ಸಿಕ್ಕ ಮಾಹಿತಿ ಬಂದಿದ್ದು, ಗಂಡ ಮದ್ಯ ಸೇವಿಸಿ ಮಲಗಿರುವುದಾಗಿ ಹೇಳಿ ತೆರಳಿದ್ದಳು. ಬೆಳಗ್ಗೆ 11 ಗಂಟೆಗೆ ಲಾಡ್ಜ್ ಸಿಬ್ಬಂದಿ ಕಿಟಕಿ ಮೂಲಕ ಒಳಗೆ ನೋಡಿದಾಗ ಪರ್ವೇಜ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಬಂದಿತ್ತು.
ಇದನ್ನೂ ಓದಿ | Shivamogga News | ಲಾಡ್ಜ್ನಲ್ಲಿ ವ್ಯಕ್ತಿಯ ಕೊಲೆ: ಹತ್ಯೆ ಮಾಡಿರುವ ಪತ್ನಿ ಹಾಸನದಲ್ಲಿ ಪೊಲೀಸರಿಗೆ ಶರಣಾಗತಿ
ಪರ್ವೇಜ್ ಹಾಸನ ಜಿಲ್ಲೆಯ ಜಾವಗಲ್ ನಿವಾಸಿಯಾಗಿದ್ದ. ಅಯೇಷಾ ಚನ್ನಪಟ್ಟಣದವಳಾಗಿದ್ದಾಳೆ. ಮೃತನ ತಾಯಿ, ತಂಗಿ ಲಾಡ್ಜ್ಗೆ ಭೇಟಿ ನೀಡಿದ್ದು, ತನ್ನ ಮಗನನ್ನು ಮೋಸದಿಂದ ಕೊಲೆ ಮಾಡಿರುವುದಾಗಿ ತಾಯಿ ಶಕೀಲಾ ಆರೋಪಿಸಿದ್ದಾರೆ.
ನನ್ನ ಬಳಿ ಒಂದೂವರೆ ಲಕ್ಷ ರೂಪಾಯಿ ಹಣವಿದೆ. ಬೇರೆ ಮನೆ ಮಾಡುತ್ತೇನೆ. ನನ್ನ ಜತೆ ಇದ್ದುಬಿಡು ಎಂದು ನಂಬಿಸಿ ಕರೆಸಿದ್ದಾಳೆ. ಇಲ್ಲಿಗೆ ಬರುವ ಮುಂಚೆ ಮಗನ ಸಿಮ್ ಅನ್ನು ತುಂಡು ಮಾಡಿ ಕರೆದುಕೊಂಡು ಬಂದಿದ್ದಾಳೆ ಎಂದು ತಾಯಿ ಶಕೀಲಾ ಆರೋಪಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Hombale Films | ಹೊಂಬಾಳೆ ಮೊದಲ ಮಲಯಾಳಂ ಫಿಲ್ಮ್ ʻಧೂಮಂʼ ಸಿನಿಮಾ ಚಿತ್ರೀಕರಣ ಮುಕ್ತಾಯ