Site icon Vistara News

Shivamogga News | ರಾಜ್ಯದ 224 ಕ್ಷೇತ್ರಗಳಲ್ಲೂ ಆಪ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು: ಭಾಸ್ಕರ್ ರಾವ್

Aam Aadmi shivamogga

ಶಿವಮೊಗ್ಗ : ರಾಜ್ಯದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್ ತಿಳಿಸಿದ್ದಾರೆ.

10 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವು ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು, ದೆಹಲಿ ಹಾಗೂ ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಉತ್ತಮ ಆಡಳಿತ ನೀಡುತ್ತಿರುವುದರಿಂದ ಜನರ ವಿಶ್ವಾಸಗಳಿಸಿದೆ. ಇತ್ತೀಚೆಗೆ ನಡೆದ ಗುಜರಾತ್, ಗೋವಾ ರಾಜ್ಯದ ಚುನಾವಣೆಯಲ್ಲೂ ನಮ್ಮ ಪಕ್ಷ ಖಾತೆ ತೆರೆದಿದೆ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಕರ್ನಾಟಕ ಸೇರಿದಂತೆ ಮುಂಬರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಸ್ಪರ್ಧಿಸಲಿದೆ ಎಂದರು.

ರಾಜ್ಯದಲ್ಲಿ ರಾಜಕೀಯ ನಾಯಕರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ ಕಬಡ್ಡಿ ಆಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪಕ್ಷ ಕೀಳುಮಟ್ಟದಲ್ಲಿ ರಾಜಕೀಯ ಮಾಡುವುದಿಲ್ಲ. ಜನರ ತೆರಿಗೆಯಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ನಿಭಾಯಿಸಿ ಮುಂದಿನ ಪೀಳಿಗೆಯ ದೃಷ್ಟಿಯಿಂದ ಕಾರ್ಯನಿರ್ವಹಿಸಲಿದೆ ಎಂದರು.

ಇದನ್ನೂ ಓದಿ | Programme Code | ಕಾರ್ಯಕ್ರಮ ಸಂಹಿತೆ ಪಾಲಿಸಲು ಟಿವಿ ಚಾನೆಲ್‌ಗಳಿಗೆ ಕೇಂದ್ರ ತಾಕೀತು

ಭಾಸ್ಕರ್ ರಾವ್ ಎದುರಲ್ಲೇ ಆಪ್ ಮುಖಂಡನ ರಂಪಾಟ
ಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಭಾಸ್ಕರ್ ರಾವ್ ಸಮ್ಮುಖದಲ್ಲೇ ಶಿವಮೊಗ್ಗ ನಗರ ಕ್ಷೇತ್ರದ ಆಕಾಂಕ್ಷಿ, ಆಪ್ ಮುಖಂಡ ಕಿಶನ್ ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಶಿವಮೊಗ್ಗದ ಜುವೇಲ್ ರಾಕ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಬೇರೆಯವರು ಆಕಾಂಕ್ಷಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಕಿಶನ್‌, ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

“ನಾನೂ ಒಬ್ಬ ಪಕ್ಷದ ಅಭ್ಯರ್ಥಿ ಆಕಾಂಕ್ಷಿ, ನನಗೆ ಪತ್ರಿಕಾಗೋಷ್ಠಿ ಬಗ್ಗೆ ಮಾಹಿತಿ ನೀಡಿಲ್ಲ. ಐದಾರು ಕಡೆ ಹೋಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೂ ನನಗೆ ಗೌರವ ಕೊಟ್ಟಿಲ್ಲ. ರಾಜ್ಯದ ನಾಯಕರು ಬಂದಾಗ ನಮಗೆ ಮಾಹಿತಿ ನೀಡಿಲ್ಲ. ರಾಜ್ಯದ ನಾಯಕರು ನೀವು ಇದನ್ನೆಲ್ಲ ಮೊದಲು ಸರಿಪಡಿಸಿ” ಎಂದು ಭಾಸ್ಕರ್ ರಾವ್‌ಗೆ ಕಿಶನ್ ನೇರವಾಗಿ ಹೇಳಿದರು.

ಇದನ್ನೂ ಓದಿ | Social media post | ಜಾಲತಾಣದಲ್ಲಿ ಸಚಿವ ಸುನಿಲ್‌ ಕುಮಾರ್‌ ಅವಹೇಳನ: ಆರೋಪಿಗಳಿಗೆ ದಂಡ, ಕ್ಷಮೆ ಯಾಚನೆಗೆ ಸೂಚನೆ

Exit mobile version