Site icon Vistara News

Shivamogga News: ಗಿಳಿ ಬಳಸಿ ಜ್ಯೋತಿಷ್ಯ ಹೇಳುತಿದ್ದ ಇಬ್ಬರ ಬಂಧನ!

Arrest of two accused who were telling astrology using rose ringed parrots in ripponpet

ರಿಪ್ಪನ್‌ಪೇಟೆ: ಅಳಿವಿನಂಚಿನಲ್ಲಿರುವ ಗಿಳಿಯನ್ನು (Rose-ringed parakeet) ಬಳಸಿ ಜ್ಯೋತಿಷ್ಯ ಹೇಳುತಿದ್ದ ಇಬ್ಬರನ್ನು, ಸಾಗರ ವಲಯದ ಅರಣ್ಯ ಸಂಚಾರಿ ದಳದ ಪೊಲೀಸರು ರಿಪ್ಪನ್‌ಪೇಟೆಯ ಕೆರೆಹಳ್ಳಿ ಕ್ರಾಸ್ ಬಳಿ ಬಂಧಿಸಿದ್ದಾರೆ. ಆರೋಪಿಗಳಿಂದ ಅಪರೂಪದ ತಳಿಯ ಗಿಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಗರದ ಅರಣ್ಯ ಸಂಚಾರ ದಳದ ಪಿಎಸ್‌ಐ ವಿನಾಯಕ್ ಅವರ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ದಾಳಿ ನಡೆಸಲಾಯಿತು. ರಿಪ್ಪನ್‌ಪೇಟೆಯ ಕೆರೆಹಳ್ಳಿ ಕ್ರಾಸ್ ಬಳಿ ಜ್ಯೋತಿಷ್ಯ ಹೇಳುತಿದ್ದ ಇಬ್ಬರನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬೇರೆಯವರ ಜ್ಯೋತಿಷ್ಯ ಹೇಳುತ್ತಿದ್ದವರು ಈಗ ಕಂಬಿ ಎಣಿಸುತ್ತಿದ್ದಾರೆ!

ಇದನ್ನೂ ಓದಿ: Ranji Trophy: ಕರ್ನಾಟಕ ತಂಡ ಸೇರಿದ ವೇಗಿ ಪ್ರಸಿದ್ಧ್​ ಕೃಷ್ಣ

ಕಾರ್ಯಾಚರಣೆಯಲ್ಲಿ ಸಾಗರ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಪ್ರಮೋದಿನಿ, ಗಣೇಶ್, ಗಿರೀಶ್, ವಿಶ್ವನಾಥ, ಕೃಷ್ಣ , ದಿನೇಶ, ಮಹೇಶ್ ಪಾಲ್ಗೊಂಡಿದ್ದರು.

Exit mobile version