ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಸರ್ಕಾರದ ಹಣ ಖರ್ಚು ಮಾಡಿ ಲೇಔಟ್ವೊಂದರಲ್ಲಿ ರಸ್ತೆ ಡಾಂಬರೀಕರಣ, ವಿದ್ಯುತ್ ಸಂಪರ್ಕ ಕಾಮಗಾರಿ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಡೀಲ್ ಮಾಡಿಕೊಂಡು ಸರ್ಕಾರಕ್ಕೆ ಟೋಪಿ ಹಾಕಿರುವುದು ಮೇಲ್ನೋಟಕ್ಕೆ ಬಯಲಾಗಿದೆ. ಈ ಗೋಲ್‌ಮಾಲ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. ೧೬ರ ಮಲವಗೊಪ್ಪ ಕೆರೆಗೆ ಹೋಗುವ ರಸ್ತೆ ಡಾಂಬರೀಕರಣ ಸೇರಿದಂತೆ ಮೂರು ಕಾಮಗಾರಿಗಳಿಗೆ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 29.17 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಆದರೆ ಗುತ್ತಿಗೆದಾರ ವಾರ್ಡ್ ನಂ.15ರ ಕೆರೆ ರಸ್ತೆ ಮಾಡುವ ಬದಲು ವಾರ್ಡ್ ನಂ.16ರ ಖಾಸಗಿ ಲೇಔಟ್ ರಸ್ತೆಗೆ ಡಾಂಬರೀಕರಣ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ವಾರ್ಡ್ ನಂ.15ರ ಪಾಲಿಕೆ ಸದಸ್ಯರ ಕೃಪಾಕಟಾಕ್ಷವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನು ಓದಿ | Bommai College Days | ಲಾಸ್ಟ್ ಬೆಂಚ್ ಜೀವನವೇ ಬೆಸ್ಟ್! ಕಾಲೇಜ್ ಕ್ಯಾಂಪಸ್ ಮಿಸ್ ಮಾಡ್ಕೋತೀನಿ ಎಂದ ಸಿಎಂ ಬೊಮ್ಮಾಯಿ
ಸ್ಥಳೀಯರ ದೂರಿನ ಅನ್ವಯ ಬುಧವಾರ (ಜ.೧೮) ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ನೇತೃತ್ವದ ಪಾಲಿಕೆ ಸದಸ್ಯರ ತಂಡಕ್ಕೆ ಗೋಲ್‌ಮಾಲ್ ವಿಷಯ ಗೊತ್ತಾಗಿದೆ. ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ ಮತ್ತಿತರರು ಅಧಿಕಾರಿಗಳ ವಿರುದ್ಧ ಗರಂ ಆದರು. ಖಾಸಗಿ ಲೇಔಟ್‌ಗೆ ಡಾಂಬರೀಕರಣ ಅಷ್ಟೇ ಅಲ್ಲ, ಪಾಲಿಕೆಯ ಅನುದಾನದಲ್ಲೇ ಕಂಬಗಳನ್ನು ನೆಟ್ಟು ಲೇಔಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ನಡೆದಿದೆ. ಚಾನಲ್ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಲಾಗುತ್ತಿದೆ ಎಂದೂ ಸ್ಥಳೀಯರು ಆರೋಪಿಸಿದರು.
ಇದನ್ನೂ ಓದಿ | Gowri murder | ಗೌರಿ ಹತ್ಯೆ ಪ್ರಕರಣದ ಕೆಲವೊಂದು ಸಾಕ್ಷಿಗಳ ಗೌಪ್ಯ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಆರಂಭ
ಒಂದು ಲೇಔಟ್ ಅಂತಿಮವಾಗಿ ಅನುಮೋದನೆ ಸಿಗಬೇಕಾದರೆ ಆ ಲೇಔಟ್ನಲ್ಲಿ ರಸ್ತೆ, ಯುಜಿಡಿ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯವನ್ನು ಮಾಲೀಕರು ಮಾಡಬೇಕು. ಆಗ ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡುತ್ತದೆ. ಆ ನಂತರ ಪಾಲಿಕೆಗೆ ಹಸ್ತಾಂತರ ಮಾಡಬೇಕು. ಆದರೆ, ಇಲ್ಲಿ ಕೆಲ ಖಾಸಗಿ ಲೇಔಟ್ ಮಾಲೀಕರು ಏನೂ ಮಾಡಿಲ್ಲ. ಸೈಟ್ ಕೂಡ ಆಗಿಲ್ಲ. ಇನ್ನೂ ನಿರ್ಮಾಣ ಹಂತದಲ್ಲಿರುವಾಗಲೇ ರಸ್ತೆ, ವಿದ್ಯುತ್ ಕಾಮಗಾರಿ ಪಾಲಿಕೆಯಿಂದಲೇ ನಡೆಯುತ್ತಿದೆ. ಅದೂ ಬೇರೆ ವಾರ್ಡ್‌ಗೆ ಮಂಜೂರಾಗಿದ್ದ ಅನುದಾನದಲ್ಲಿ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | Pathaan Film | ಮೊಣಕಾಲು ನೋವಿದ್ದರೂ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಾರುಖ್: ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್!