ಶಿವಮೊಗ್ಗ: “ಮುಂಬರುವ ಚುನಾವಣೆಯಲ್ಲಿ (Karnataka election 2023) ಗೆಲ್ಲಲು ಜನರ ವಿಶ್ವಾಸ ಗಳಿಸುವುದೇ ನನ್ನ ಸ್ಟ್ಯಾಟರ್ಜಿ” ಎಂದು ಸೊರಬ ಕ್ಷೇತ್ರದ ವಿಧಾನ ಸಭಾ ಚುನಾವಣಾ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಗುರುವಾರ (ಮಾ.2) ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್, ಜನರ ವಿಶ್ವಾಸ ಗಳಿಸಲು ಹೊರಟಿದೆ.. ಬಿಜೆಪಿಯವರು ಬರೀ ಸುಳ್ಳು, ಮೋಸ, ಧರ್ಮದ ಹೆಸರಿನಲ್ಲಿ, ಹಲಾಲ್ ಹೆಸರಿನಲ್ಲಿ ರಾಜಕೀಯ ಮಾಡುತ್ತಾ, ಅಮಾಯಕರ ಪ್ರಾಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಜನರು ಕೂಡ ಕಾಂಗ್ರೆಸ್ಸೇ ಚೆನ್ನಾಗಿತ್ತು ಎಂದು ಹೇಳುತ್ತಿದ್ದು, ಬಿಜೆಪಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳುತ್ತಿದ್ದಾರೆ” ಎಂದರು.
ಇದನ್ನೂ ಓದಿ: Viral News : ರಸ್ತೆ ಮೇಲೆ ಜಗಳವಾಡಿದ್ದ ವ್ಯಕ್ತಿಗೆ ಗಿಡ ನೆಟ್ಟು ನಮಾಜ್ ಮಾಡಲು ಆದೇಶಿಸಿದ ನ್ಯಾಯಾಲಯ!
“ನಾನು ಪಕ್ಷ ಮತ್ತು ವ್ಯಕ್ತಿಯ ಮೇಲೆ ಸ್ಪರ್ಧೆ ನಡೆಸುತ್ತೇನೆ. ಆದರೆ, ಸ್ಪರ್ಧೆ ನನ್ನ ಸಹೋದರನ ಮೇಲೆ ಎಂದು ನಾನು ಹೇಳುವುದಿಲ್ಲ. ದಯಮಾಡಿ ಮಾಧ್ಯಮದವರು, ಅಣ್ಣ-ತಮ್ಮನ ಸ್ಪರ್ಧೆ ಎಂದು ಬರೆಯಬೇಡಿ ಎಂದು ಮಧು ಬಂಗಾರಪ್ಪ ಮನವಿ ಮಾಡಿಕೊಂಡರು. ಒಬ್ಬ ಕೆಟ್ಟ ವ್ಯಕ್ತಿ, ಜನಪ್ರತಿನಿಧಿ, ಸರ್ಕಾರದ ಆಸ್ತಿ ಮಾರಾಟ ಮಾಡಲು ಹೊರಟಿರುವ ಒಬ್ಬ ಬಿಜೆಪಿ ಶಾಸಕನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಆರೋಪಿಸಿದರ. ಮುಂದೆ ಯಾವಾಗಲೂ ಮಾಧ್ಯಮಗಳು ನಮ್ಮನ್ನು ಅಣ್ಣ-ತಮ್ಮ ಎಂದು ಕರೆಯಬೇಡಿ ಎಂದು ಮನವಿ ಮಾಡಿದರು.
“ಸೊರಬ ಶಾಸಕರು ತಹಸೀಲ್ದಾರ್ ಕಚೇರಿಯ ಕೋಟ್ಯಂತರ ರೂ. ಬೆಲೆ ಬಾಳುವ ನಾಟಾವನ್ನು ಅಕ್ರಮವಾಗಿ ಸಾಗಿಸಿದ್ದಾರೆ. ಇಂತಹ ಕಳ್ಳರನ್ನು ದೂರವಿಟ್ಟು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: Nagaland Election: ನಾಗಾಲ್ಯಾಂಡ್ನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಮಹಿಳೆಯರು; ಇತಿಹಾಸ ಸೃಷ್ಟಿ