ಶಿವಮೊಗ್ಗ: ವಿಶ್ವದ ಉನ್ನತ ವಿಜ್ಞಾನಿಗಳ (World Top Scientists) ಕುರಿತು ಅಮೆರಿಕಾದ (America) ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ದಪಡಿಸಿದ ಪಟ್ಟಿಯಲ್ಲಿ ಶಿವಮೊಗ್ಗದ ಡಾ.ಆರ್.ಎಸ್. ವರುಣ್ ಕುಮಾರ್ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ವಿವಿಯ ಪ್ರೊ. ಬಿ.ಸಿ ಪ್ರಸನ್ನ ಕುಮಾರ ಅವರ ಮಾರ್ಗದರ್ಶನದಲ್ಲಿ ಗಣಿತಶಾಸ್ತ್ರದ ಸಂಶೋಧನಾರ್ಥಿಯಾದ ಡಾ.ಆರ್.ಎಸ್.ವರುಣ್‌ಕುಮಾರ್ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2022 ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: Asian Games: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ
ಶಿವಮೊಗ್ಗದ ಪತ್ರಕರ್ತ, ಲೇಖಕ ಎನ್.ರವಿಕುಮಾರ್ (ಟೆಲೆಕ್ಸ್ ರವಿ) ಮತ್ತು ಶ್ರೀಮತಿ ಶಶಿಕಲಾ ದಂಪತಿಯ ಪುತ್ರರಾದ ಡಾ.ಆರ್.ಎಸ್.ವರುಣ್‌ಕುಮಾರ್ ಗಣಿತಶಾಸ್ತ್ರದ “ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ” ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು.ಪ್ರಸ್ತುತ ಬೆಂಗಳೂರಿನ ಅಮೃತಾನಂದಮಯಿ ವಿಶ್ವವಿದ್ಯಾಪೀಠಂ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: Ban vs Afg: ಬಾಂಗ್ಲಾದೇಶ – ಅಫಘಾನಿಸ್ತಾನ ಫೈಟ್ನಲ್ಲಿ ಗೆಲುವು ಯಾರಿಗೆ?
ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ಆರ್.ಎಸ್.ವರುಣ್‌ಕುಮಾರ್ ರವರನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಬಿ.ಡಿ. ಕುಂಬಾರ ಮತ್ತು ಆಡಳಿತ ವರ್ಗ ಹಾಗೂ ಅಮೃತಾನಂದಮಯಿ ವಿಶ್ವ ವಿದ್ಯಾಪೀಠಂ ನ ಕುಲಪತಿ ಶ್ರೀಮಾತಾ ಅಮೃತಾನಂದಮಯಿದೇವಿ ಅವರು ಅಭಿನಂದಿಸಿದ್ದಾರೆ.