Site icon Vistara News

Shivamogga News : ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಕಾರಣ: ಆರಗ ಜ್ಞಾನೇಂದ್ರ

Congratulatory meeting by former minister Araga Jnanedra

ರಿಪ್ಪನ್‌ಪೇಟೆ: ಗೃಹ ಸಚಿವನಾಗಿ (Home Minister) ರಾಜ್ಯ ಸುತ್ತಿದರೂ ಕೂಡ ಕ್ಷೇತ್ರದ ಮತದಾರರ (Voters) ಮತ್ತು ಕಾರ್ಯಕರ್ತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ, ಜನರೊಂದಿಗೆ ಬೆರತು ಪ್ರೀತಿ ವಿಶ್ವಾಸದಿಂದಿರುವುದಕ್ಕೆ ನನ್ನನ್ನು ಮರು ಅಯ್ಕೆ ಮಾಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆದ್ದಾರಿಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Washington Sundar: ವಾಷಿಂಗ್ಟನ್​ ಸುಂದರ್​ ಟ್ವಿಟರ್​ ಖಾತೆ ಹ್ಯಾಕ್; ಪೋಸ್ಟ್​ನಲ್ಲಿ ಏನಿದೆ?

ಹಾವು ಮುಂಗುಸಿಯಂತಿದ್ದ ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ ಗೌಡ ಚುನಾವಣೆಯ ಸಂದರ್ಭದಲ್ಲಿ ಜೋಡೆತ್ತುಗಳಾಗಿ ಒಂದೇ ಹಾರಕ್ಕೆ ಕೊರಳು ಒಡ್ಡಿದರೂ ಕೂಡ ಕ್ಷೇತ್ರದ ಮತದಾರರು ನನ್ನ ಕೈಬಿಡದೆ ಗೆಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರ ಋಣವನ್ನು ನಾನು ತೀರಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ ಎಂದ ಅವರು, 60 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತದಾರರಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳೇನು ಇರಲ್ಲಿಲ್ಲ, ಗ್ಯಾರಂಟಿ ಕಾರ್ಡ್ ಮೂಲಕ ಮತದಾರರಿಗೆ ಆಸೆ ತೋರಿಸುವ ದುಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ ಎಂದರು.

ಇದನ್ನೂ ಓದಿ: 200 ಯುನಿಟ್‌ ಫ್ರೀ ಕೊಡಿ ಅನ್ನುವವರಿಗೆ ವಿವೇಕ ಇದೆಯಾ? ಈಗೆಷ್ಟು ಬಳಸ್ತಿದ್ದಾರೋ ಅಷ್ಟೇ ಬಳಸಬೇಕೆಂದ ಸಿದ್ದರಾಮಯ್ಯ

ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ದೊಡ್ಡಣ್ಣನಂತಿರುವ ಅಮೇರಿಕ ಸೇರಿದಂತೆ ಇತರ ರಾಷ್ಟ್ರಗಳು ಹಾಡಿ ಹೊಗಳುವ ಮೂಲಕ ಗೌರವ ತೋರಿಸುತ್ತಿದ್ದರೆ, ನಮ್ಮ ದೇಶದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರು ವಿದೇಶದಲ್ಲಿ ದೇಶದ ಪ್ರಧಾನಿಯ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವುದು ಅವರ ಪಕ್ಷದ ಘನತೆ, ಗೌರವವನ್ನು ಬಿಂಬಿಸುತ್ತದೆ ಎಂದರು. ನಾಡಿನ ಮತದಾರರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷದ ನಾಟಕ ಗೊತ್ತಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಅಭಿವೃದ್ದಿ ಕಾರ್ಯಗಳಿಗೆ ಹಿಂದಿನ ಸರ್ಕಾರ ಬಿಡುಗಡೆ ಮಾಡಿದಂತಹ ಅನುದಾನವನ್ನು ತಡೆಹಿಡಿದಿರುವುದರಿಂದ ಕ್ಷೇತ್ರದಲ್ಲಿ 200 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾರ್ಯಗಳಿಗೆ ಭಾರಿ ಹಿನ್ನಡೆಯಾಗಿದೆ ಎಂದ ಅವರು, ಏನೇ ಅದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ವಿರೋಧ ಪಕ್ಷದಲ್ಲಿದ್ದರೂ ಕೂಡಾ ಅಭಿವೃದ್ದಿಯೇ ನಮ್ಮ ಮೂಲದ್ಯೇಯವಾಗಿದ್ದು ಅದನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನವೀನ್ ಹೆದ್ದೂರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಮ್ಮ,, ಉಪಾಧ್ಯಕ್ಷೆ ಲಲಿತಾ ಪುಂಡಲೀಕ್, ಪಕ್ಷದ ಮುಖಂಡರಾದ ಕಲ್ಲೂರು ನಾಗೇಂದ್ರ, ಕಲ್ಲೂರು ಆದರ್ಶ ಗೌಡ, ರಾಮಪ್ಪ, ಕುಮಾರಸ್ವಾಮಿ, ಕಗ್ಗಲಿ ಲಿಂಗಪ್ಪ , ವಿಶು, ಗಿರೀಶ್ ಜಂಬಳ್ಳಿ ಇತರರು ಹಾಜರಿದ್ದರು.

Exit mobile version