Washington Sundar: ವಾಷಿಂಗ್ಟನ್​ ಸುಂದರ್​ ಟ್ವಿಟರ್​ ಖಾತೆ ಹ್ಯಾಕ್; ಪೋಸ್ಟ್​ನಲ್ಲಿ ಏನಿದೆ? - Vistara News

ಕ್ರಿಕೆಟ್

Washington Sundar: ವಾಷಿಂಗ್ಟನ್​ ಸುಂದರ್​ ಟ್ವಿಟರ್​ ಖಾತೆ ಹ್ಯಾಕ್; ಪೋಸ್ಟ್​ನಲ್ಲಿ ಏನಿದೆ?

ವಾಷಿಂಗ್ಟನ್​ ಸುಂದರ್​ ಅವರ ಟ್ವಿಟರ್​ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್​ ಮಾಡಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

VISTARANEWS.COM


on

washington sundar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​: ಭಾರತ ಕ್ರಿಕೆಟ್​ ತಂಡದ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ ಅವರ ಟ್ವಿಟರ್​ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಅವರ ಅಧಿಕೃತ ಟ್ವಿಟರ್​ ಖಾತೆ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಹ್ಯಾಕ್​ ಮಾಡಿದ ಅವರ ಟ್ವಿಟರ್​ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಒಟ್ಟು ಇದುವರೆಗೆ ವಾಷಿಂಗ್ಟನ್ ಸುಂದರ್ ಅವರ ಖಾತೆಯಿಂದ 3 ಪೋಸ್ಟ್‌ಗಳನ್ನು ಮಾಡಲಾಗಿದೆ. ತಮ್ಮ ಟ್ವಿಟರ್​ ಹ್ಯಾಕ್​ ಆದ ವಿಷಯ ತಿಳಿದ ಕೂಡಲೇ ವಾಷಿಂಗ್ಟನ್​ ಸುಂದರ್​ ಅವರು ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳನ್ನು ಬ್ಲಾಕ್​ ಮಾಡಲಾಗಿದೆ. ಜತೆಗೆ ತಮ್ಮ ಟ್ವಿಟರ್​ ಖಾತೆ ಹ್ಯಾಕ್​ ಆಗಿರುವ ವಿಚಾರವನ್ನು ಸ್ವತಃ ವಾಷಿಂಗ್ಟನ್ ಖಚಿತ ಪಡಿಸಿದ್ದು ಇದರಲ್ಲಿ ಪೋಸ್ಟ್​ ಆದ ಯಾವುದೇ ಲಿಂಕ್​ಗಳನ್ನು ಕ್ಲಿಕ್​ ಮಾಡಬೇಡಿ ಎಂದು ಹೇಳಿದ್ದಾರೆ.

ಕ್ರಿಕೆಟಿಗರ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲೇನಲ್ಲ ಇದಕ್ಕೂ ಮೊದಲು ಆಲ್​ರೌಂಡರ್ ಕೃನಾಲ್ ಪಾಂಡ್ಯ ಅವರ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್‌ಕಾಯಿನ್ ಬಗ್ಗೆ ಮಾಹಿತಿ ನೀಡುವ ಲಿಂಗ್​ಗಳನ್ನು ಅಪ್​ಡೇಟ್ ಮಾಡಿದ್ದರು. ಇದೇ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಕೂಡ ಹ್ಯಾಕ್ ಮಾಡಲಾಗಿತ್ತು.

ಇದನ್ನೂ ಓದಿ IPL 2023 : ಮಾಲ್ಡೀವ್ಸ್​​ನಲ್ಲಿ ಶರ್ಟ್​ ಬಿಚ್ಚಿ ಸಿಕ್ಸ್​​ ಪ್ಯಾಕ್​ ತೋರಿಸಿದ ಐಪಿಎಲ್​ ಸ್ಟಾರ್ ರಿಂಕು ಸಿಂಗ್

ಗಾಯದಿಂದಾಗಿ ವಾಷಿಂಗ್ಟನ್​ ಸುಂದರ್​ ಅವರು ಈ ಬಾರಿಯ ಐಪಿಎಲ್​ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಸನ್​ರೈಸರ್ಸ್​ ಹೈದಾರಾಬಾದ್​ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮುನ್ನ ಆರ್​ಸಿಬಿ ಪರ ಅವರು ಆಡಿದ್ದರು. ಸದ್ಯ ಅವರು ಗಾಯದಿಂದ ಚೇತರಿಕೆ ಕಾಣುತ್ತಿದ್ದು ಮುಂಬರುವ ಸರಣಿಗಳಲ್ಲಿ ಭಾರತ ತಂಡದ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಸನ್​ರೈಸರ್ಸ್ ತಂಡದ ದಾಖಲೆಗಳ ಸುರಿಮಳೆಯ ಪಟ್ಟಿ ಹೀಗಿದೆ

IPL 2024: ಹೈದರಾಬಾದ್​ ತಂಡ ಇದೇ ಆವೃತ್ತಿಯ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈ ದಾಖಲೆಯನ್ನು ಮತ್ತೆ ತಿದ್ದಿ ಬರೆದಿದೆ. ಡೆಲ್ಲಿ ವಿರುದ್ಧ 10 ಓವರ್​ಗೆ 4 ವಿಕೆಟ್​ಗೆ 158 ರನ್​ ಬಾರಿಸಿ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿತು.

VISTARANEWS.COM


on

IPL 2024
Koo

ನವದೆಹಲಿ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಗರಿಷ್ಠ ಮೊತ್ತವನ್ನು ಬಾರಿಸುವ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಸನ್​ರೈಸರ್ಸ್ ಹೈದರಾಬಾದ್​(Sunrisers Hyderabad) ತಂಡ ಶನಿವಾರದ ಡೆಲ್ಲಿ(Delhi Capitals) ವಿರುದ್ಧದ ಪಂದ್ಯದಲ್ಲಿಯೂ 250ರ ಗಡಿ ದಾಡಿ ಹಲವು ದಾಖಲೆಯನ್ನು ನಿರ್ಮಿಸಿದೆ. ಹೈದರಾಬಾದ್​ ಬರೆದ ದಾಖಲೆಗಳ ಪಟ್ಟಿ ಇಂತಿದೆ.

​ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು


22 ಸಿಕ್ಸರ್​, ಡೆಲ್ಲಿ ಕ್ಯಾಪಿಲ್ಸ್​ ವಿರುದ್ಧ (2024)

22 ಸಿಕ್ಸರ್​, ಆರ್​ಸಿಬಿ ವಿರುದ್ಧ(2024)

ಫ್ರಾಂಚೈಸಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 250+ ರನ್​


ಸನ್​ರೈಸರ್ಸ್ ಹೈದರಾಬಾದ್​- 3 ಬಾರಿ

ಸರ್ರೆ-3 ಬಾರಿ

ಆರ್​ಸಿಬಿ-2 ಬಾರಿ

ಸೋಮರ್‌ಸೆಟ್-2 ಬಾರಿ

ಯಾರ್ಕ್​ಶೈರ್-2 ಬಾರಿ

ಇದನ್ನೂ ಓದಿ IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

ಐಪಿಎಲ್​ನಲ್ಲಿ 10 ಓವರ್​ಗೆ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​ 158/4. ಡೆಲ್ಲಿ ವಿರುದ್ಧ(2024)

ಸನ್​ರೈಸರ್ಸ್​ ಹೈದರಾಬಾದ್ 148/2. ಮುಂಬೈ ಇಂಡಿಯ್ಸ್​ ವಿರುದ್ಧ(2024)

ಮುಂಬೈ ಇಂಡಿಯನ್ಸ್​ 141/2. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ(2024)

ಕೆಕೆಆರ್​ 135/1. ಡೆಲ್ಲಿ ವಿರುದ್ಧ (2024)

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ ಹೈದರಾಬಾದ್​ ತಂಡದ ಪ್ರಮುಖ ಹೈಲೆಟ್ಸ್​ ಆಗಿತ್ತು. ಅಭಿಷೇಕ್​ ಶರ್ಮ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ.

Continue Reading

ಕ್ರೀಡೆ

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

SRH vs DC: ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸುವ ಮೂಲಕ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಯಿತು.

VISTARANEWS.COM


on

SRH vs DC
Koo

ನವದೆಹಲಿ: ಶನಿವಾರದ ಐಪಿಎಲ್(IPL 2024) ಪಂದ್ಯದಲ್ಲಿ​ ಡೆಲ್ಲಿ ಕ್ಯಾಪಿಟಲ್ಸ್(SRH vs DC)​ ವಿರುದ್ಧ ರನ್​ ಮಳೆಯನ್ನೇ ಸುರಿಸಿದ ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡ ಐಪಿಎಲ್​ನಲ್ಲಿ ಹಲವು ದಾಖಲೆಯನ್ನು ತನ್ನ ಹೆಸರಿಗೆ ಬರೆದಿದೆ. ಆರಂಭದಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ ಎಂಬ ಹೆಗ್ಗಳಿಗೆ ಪಾತ್ರವಾದ ಬಳಿಕ 10 ಓವರ್​ನಲ್ಲಿ ಗರಿಷ್ಠ ರನ್​ ಪೇರಿಸಿದ ತನ್ನದೇ ದಾಖಲೆಯನ್ನು ತಿದ್ದಿ ಬರೆದಿದೆ.

10 ಓವರ್​ನಲ್ಲಿ ಗರಿಷ್ಠ ಮೊತ್ತ


ಹೈದರಾಬಾದ್​ ತಂಡ ಇದೇ ಆವೃತ್ತಿಯ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈ ದಾಖಲೆಯನ್ನು ಮತ್ತೆ ತಿದ್ದಿ ಬರೆದಿದೆ. ಡೆಲ್ಲಿ ವಿರುದ್ಧ 10 ಓವರ್​ಗೆ 4 ವಿಕೆಟ್​ಗೆ 158 ರನ್​ ಬಾರಿಸಿ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿತು. ಅಚ್ಚರಿ ಎಂದರೆ ಈ ಬಾರಿಯ ಐಪಿಎಲ್​ನಲ್ಲೇ 10 ಓವರ್​ನಲ್ಲಿ ಗರಿಷ್ಠ ರನ್​ ದಾಖಲೆ ನಿರ್ಮಾಣವಾದದ್ದು.

ಐಪಿಎಲ್​ನಲ್ಲಿ 10 ಓವರ್​ಗೆ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​ 158/4. ಡೆಲ್ಲಿ ವಿರುದ್ಧ(2024)

ಸನ್​ರೈಸರ್ಸ್​ ಹೈದರಾಬಾದ್ 148/2. ಮುಂಬೈ ಇಂಡಿಯ್ಸ್​ ವಿರುದ್ಧ(2024)

ಮುಂಬೈ ಇಂಡಿಯನ್ಸ್​ 141/2. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ(2024)

ಕೆಕೆಆರ್​ 135/1. ಡೆಲ್ಲಿ ವಿರುದ್ಧ (2024)

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸುವ ಮೂಲಕ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಯಿತು. ಇದಕ್ಕೂ ಮುನ್ನ ದಾಖಲೆ ಕೆಕೆಆರ್​ ತಂಡದ ಪರ ಇತ್ತು. ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ 2017ರಲ್ಲಿ ನೋಲಾಸ್​ಗೆ 105 ರನ್​ ಬಾರಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ. ಪವರ್​ ಪ್ಲೇಯಲ್ಲಿ ಮೊದಲ ಬಾರಿಗೆ 100ರನ್​ ಗಡಿ ದಾಡಿದ ದಾಖಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ 2 ವಿಕೆಟ್​ಗೆ ಭರ್ತಿ 100ರನ್​ ಬಾರಿಸಿತ್ತು.

ಇದನ್ನೂ ಓದಿ IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಅಭಿಷೇಕ್​-ಹೆಡ್​ ಬೊಂಬಾಟ್​ ಬ್ಯಾಟಿಂಗ್​


ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ ಹೈದರಾಬಾದ್​ ತಂಡದ ಪ್ರಮುಖ ಹೈಲೆಟ್ಸ್​ ಆಗಿತ್ತು. ಅಭಿಷೇಕ್​ ಶರ್ಮ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ.

Continue Reading

ಕ್ರೀಡೆ

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

IPL 2024: ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(Travis Head) ಮತ್ತು ಅಭಿಷೇಕ್​ ಶರ್ಮ(Abhishek Sharma) ಅವರ ವಿಸ್ಫೋಟಕ ಬ್ಯಾಟಿಂಗ್​ನಿಂದ ಸನ್​ರೈರ್ಸ್​ ಹೈದರಾಬಾದ್(Sunrisers Hyderabad)​ ತಂಡ ಐಪಿಎಲ್​(IPL 2024) ಜತೆಗೆ ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಏರ್ಪಟ್ಟ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ಹೈದರಾಬಾದ್​ ತಂಡ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸಿತು. ಇದು ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ದಾಖಲಾದ ಮೊದಲ ಅತ್ಯಧಿಕ ರನ್​ ಗಳಿಕೆಯಾಗಿದೆ.

ಇದಕ್ಕೂ ಮುನ್ನ ದಾಖಲೆ ಕೆಕೆಆರ್​ ತಂಡದ ಪರ ಇತ್ತು. ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ 2017ರಲ್ಲಿ ನೋಲಾಸ್​ಗೆ 105 ರನ್​ ಬಾರಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ. ಪವರ್​ ಪ್ಲೇಯಲ್ಲಿ ಮೊದಲ ಬಾರಿಗೆ 100ರನ್​ ಗಡಿ ದಾಡಿದ ದಾಖಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ 2 ವಿಕೆಟ್​ಗೆ ಭರ್ತಿ 100ರನ್​ ಬಾರಿಸಿತ್ತು.

ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡ


ಹೈದರಾಬಾದ್​- 125/0. ಡೆಲ್ಲಿ ವಿರುದ್ಧ(2024)

ಕೆಕೆಆರ್​-105/0. ಆರ್​ಸಿಬಿ ವಿರುದ್ಧ(2017)

ಚೆನ್ನೈ-100/2. ಪಂಜಾಬ್​ ವಿರುದ್ಧ(2014)

ಚೆನ್ನೈ-90/0. ಮುಂಬೈ ವಿರುದ್ಧ(2015)

ಕೆಕೆಆರ್​-88/1. ಡೆಲ್ಲಿ ವಿರುದ್ಧ(2024)

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮ ಅವರು ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ನಾಟಕೀಯ ಕುಸಿತ ಕಂಡಿತು. ಐಡೆನ್​ ಮಾರ್ಕ್ರಮ್​(1) ಮತ್ತು ಹೆನ್ರಿಚ್​ ಕ್ಲಾಸೆನ್​(15) ರನ್​ ಗಳಿಸಿ ನಿರಾಸೆ ಮೂಡಿಸಿದರು.

Continue Reading

ಕ್ರೀಡೆ

IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

IPL 2024: ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

VISTARANEWS.COM


on

IPL 2024
Koo

ಲಕ್ನೋ: ಎಲ್ಲ ತಂಡದ ಕೋಚ್​ಗಳು ಪಂದ್ಯವೊಂದರಲ್ಲಿ ಉತ್ತಮವಾಗಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ನಡೆಸಿದರೆ ಅಂತಹ ಆಟಗಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸುವುದು ವಾಡಿಕೆ. ಆದರೆ, ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌(Jonty Rhodes) ಅವರು ಕ್ಯಾಚ್​ ಕೈಚೆಲ್ಲಿದ ದೀಪಕ್​ ಹೂಡಾಗೆ(Deepak Hooda) ಮೆಚ್ಚುಗೆ ಜತೆಗೆ ಬೆಸ್ಟ್​ ಫೀಲ್ಡರ್​ ಅವಾರ್ಡ್ ನೀಡಿ(IPL 2024) ಗೌರವಿಸಿದ್ದಾರೆ. ಹೌದು, ಇದಕ್ಕೆ ಕಾರಣ ಧೋನಿ ಅವರ ಬ್ಯಾಟಿಂಗ್​ ಭಯ.

ರವೀಂದ್ರ ಜಡೇಜಾ ಅವರ ಸುಲಭದ ಕ್ಯಾಚ್ ಅನ್ನು ದೀಪಕ್ ಹೂಡಾ ಬೌಂಡರಿ ಲೈನ್​ನಲ್ಲಿ ಕೈ ಚೆಲ್ಲಿ ಸಿಕ್ಸರ್​ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ಬೆಸ್ಟ್​ ಫೀಲ್ಡಿಂಗ್​ ನಡೆಸಿದ ಲಕ್ನೋ ತಂಡದ ಆಟಗಾರನಿಗೆ ಡ್ರೆಸಿಂಗ್​ ರೂಮ್​ನಲ್ಲಿ ಜಾಂಟಿ ರೋಡ್ಸ್‌ ಅವರು ಮ್ಯಾಜಿಕ್ ಮೈಕ್ ಎನ್ನುವ ಹೆಸರಿನ ಗೊಂಬೆಯೊಂದನ್ನು ನೀಡಿ ಗೌರವಿಸುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಜಾಂಟಿ ಈ ಪ್ರಶಸ್ತಿಯನ್ನು ಕ್ಯಾಚ್​ ಬಿಟ್ಟ ದೀಪಕ್​ ಹೂಡಾಗೆ ನೀಡಿದರು. ಈ ವೇಳೆ ಸಹ ಆಟಗಾರರು ಸೇರಿ ಹೂಡಾಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಇದನ್ನೂ ಓದಿ IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ದೀಪಕ್​ ಹೂಡಾಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಏಕೆಂದು ಕೂಡ ಜಾಂಟಿ ವಿವರಿಸಿದರು. ಒಂದೊಮ್ಮೆ ಹೂಡಾ ಅವರು ಜಡೇಜಾ ಕ್ಯಾಚ್​ ಹಿಡಿಯುತ್ತಿದ್ದರೆ ಧೋನಿ ಬೇಗನೆ ಕ್ರೀಸ್​ಗೆ ಆಗಮಿಸುತ್ತಿದ್ದರು. ಇದನ್ನು ಹೂಡಾ ತಡೆದಿದ್ದಾರೆ. ಇದಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡುತ್ತೇನೆ ಎಂದರು.

“ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ರೋಡ್ಸ್ ಹೇಳಿದರು. ಈ ವಿಡಿಯೊ ವೈರಲ್​ ಆಗಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

Continue Reading
Advertisement
IPL 2024
ಕ್ರೀಡೆ1 min ago

IPL 2024: ಸನ್​ರೈಸರ್ಸ್ ತಂಡದ ದಾಖಲೆಗಳ ಸುರಿಮಳೆಯ ಪಟ್ಟಿ ಹೀಗಿದೆ

Crime Scene
ಶಿವಮೊಗ್ಗ38 mins ago

Murder Case: ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಕೊಂದ ದುಷ್ಕರ್ಮಿಗಳು

SRH vs DC
ಕ್ರೀಡೆ58 mins ago

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

Lok Sabha Election
Lok Sabha Election 202460 mins ago

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Viral Video
ವೈರಲ್ ನ್ಯೂಸ್1 hour ago

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಹರಿಹರಪುರ ಧರ್ಮಸಭೆ
ಚಿಕ್ಕಮಗಳೂರು1 hour ago

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

Kunwar Sarvesh Singh
ದೇಶ1 hour ago

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

IPL 2024
ಕ್ರೀಡೆ2 hours ago

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

Prajadhwani 2 Lok Sabha election campaign meeting at KR Nagar
ಮಂಡ್ಯ2 hours ago

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Uttara Kannada Lok Sabha Constituency BJP Candidate Vishweshwara Hegde Kageri latest Statement
ಉತ್ತರ ಕನ್ನಡ2 hours ago

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ6 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20246 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20248 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ10 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ11 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌