Site icon Vistara News

Shivamogga News: ಕಾರ್ಯಕರ್ತರೊಂದಿಗೆ ಸೋಲಿನ ಪರಾಮರ್ಶೆ ಮಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ

Former MLA Harathalu Halappa discussed with party activists

ರಿಪ್ಪನ್‌ಪೇಟೆ: ಈಚೆಗೆ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ (Karnataka election 2023) ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಆಭಿವೃದ್ಧಿ ಕಾಮಗಾರಿಗಳು (Development works) ಸೇರಿದಂತೆ ಹತ್ತುಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದರೂ ಕೂಡಾ ಕ್ಷೇತ್ರದಲ್ಲಿ ಪಕ್ಷದ ಹಿನ್ನಡೆಗೆ ಕಾರಣವೇನು ಎಂಬುದರ ಕುರಿತು ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಹರತಾಳು ಹಾಲಪ್ಪ ಪರಾಮರ್ಶೆ ನಡೆಸಿದರು.

ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನೆಡೆಸಿದ ಅವರು, ಮುಂದಿನ ಜಿ.ಪಂ, ತಾ.ಪಂ., ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಅಕಾಂಕ್ಷಿಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಭದ್ರತೆಗೆ ಸೇನೆ, ಅರೆಸೇನಾ ಪಡೆ ನಿಯೋಜನೆ, ಮರಳಿದ ಕರ್ಫ್ಯೂ

ಕಾರ್ಯಕರ್ತರು ಮತದಾರರೊಂದಿಗೆ ಇಂದಿನಿಂದಲೇ ಬಿಜೆಪಿ ಪಕ್ಷದ ಕಾರ್ಯಗಳ ಕುರಿತು ಮನವರಿಕೆ ಮಾಡುವಂತೆ ಇದೇ ವೇಳೆ ತಿಳಿಸಿದರು.

ನಮ್ಮ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಗಲಿರುಳು ನನ್ನ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಈಗ ನನ್ನ ಸೋಲಿನಿಂದ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಮೂಲಕ ಸೋಲಿಗೆ ಪ್ರತ್ಯುತ್ತರ ನೀಡುವ ಶಕ್ತಿ ನಮಗಿದೆ ಎಂದರು.

ಇದನ್ನೂ ಓದಿ: Adani Stocks surge : ಅದಾನಿ ಗ್ರೂಪ್‌ ಷೇರುಗಳ ದರ ಜಿಗಿತ, ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮೆಣಸೆ ಆನಂದ, ಎಂ.ಸುರೇಶ್‌ಸಿಂಗ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ ನಾಗರಾಜ್, ಎನ್.ಸತೀಶ್, ಮಂಜುಳಾ ಕೇತಾರ್ಜಿರಾವ್, ತರಕಾರಿ ಯೋಗೇಂದ್ರಗೌಡ, ಪಿ.ರಮೆಶ್, ಪರಮೇಶ ಹೊನ್ನಕೊಪ್ಪ, ಮಹೇಶ್, ಸಾಜಿ, ರಾಮಚಂದ್ರ, ಉದ್ಯಮಿ ಎಲ್.ನಾಗರಾಜ್ ಶೆಟ್ಟಿ, ಸುಂದರೇಶ್, ಮಲ್ಲಿಕಾರ್ಜುನ, ಸತೀಶ್ ಕಿಣಿ ಹೂವಪ್ಪ, ಕೀರ್ತಿ ಗೌಡ ಇತರರು ಹಾಜರಿದ್ದರು.

Exit mobile version