Site icon Vistara News

Shivamogga News: ಶಿವಮೊಗ್ಗ ಏರ್‌ಪೋರ್ಟ್‌ಗೆ ಯಾರ ಹೆಸರಾದರೂ ಇಡಲಿ, ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿಕೆಶಿ

D K Shivakumar shivamogga

#image_title

ಶಿವಮೊಗ್ಗ: ‘ʻಫೆಬ್ರವರಿ ೨೭ರಂದು ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ (Shivamogga News) ವಿಮಾನ ನಿಲ್ದಾಣಕ್ಕೆ ಬಿ.ಎಸ್‌. ಯಡಿಯೂರಪ್ಪನವರ ಹೆಸರಿಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನಾದರೂ ಇಡಲಿ. ಆದರೆ, ಜಮೀನು ಕಳೆದುಕೊಂಡವರಿಗೆ ಮೊದಲು ಪರಿಹಾರ ನೀಡಲಿʼ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ (ಫೆ.೯) ಮಾತನಾಡಿದ ಅವರು, ʻವಿಐಎಸ್ಎಲ್ ವಿಚಾರವಾಗಿ ನಾವು ಬುಧವಾರ (ಫೆ.೮) ನೀಡಿರುವ ಹೇಳಿಕೆಗೆ ಬದ್ಧರಾಗಿದ್ದೇವೆ. ಈ ಕಾರ್ಖಾನೆಯನ್ನು ಮುಚ್ಚಬಾರದು, ಸರ್ಕಾರವೇ ನಡೆಸಬೇಕು. ಅವರಿಂದ ಸಾಧ್ಯವಾಗದಿದ್ದರೆ, ನಮ್ಮ ಸರ್ಕಾರ ಬಂದು ಆ ಕೆಲಸ ಮಾಡಲಿದೆ. ಬಿಜೆಪಿಯವರು ಖಾಸಗೀರಣದ ತೀರ್ಮಾನ ಕೈಬಿಟ್ಟು, ಕೇಂದ್ರ ಸಚಿವರು ಕೊಟ್ಟ ಮಾತಿನಂತೆ 6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿಸಿ, ನಿಗದಿ ಮಾಡಲಾಗಿರುವ ಗಣಿ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಿ’ ಎಂದರು.

ಇದನ್ನೂ ಓದಿ: Pm Modi Rajya Sabha Speech Live: ಮಲ್ಲಿಕಾರ್ಜುನ್​ ಖರ್ಗೆ ಖಾತೆ ಬಂದ್​ ಆಗಿದೆ ಎಂದ ಪ್ರಧಾನಿ ಮೋದಿ

‘ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಅಮಿತ್ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದು, ಇತ್ತೀಚೆಗೆ ಪ್ರಧಾನಿ ನರೇದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆʼ ಎಂದು ಹೇಳಿದರು.

ʼಬಿಜೆಪಿಯವರು ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಈ ಬಗ್ಗೆ ಮೊದಲು ಅವರು ಉತ್ತರ ನೀಡಲಿ. ಅವರಿಂದ ಯಾವ ತಪ್ಪಾಗಿತ್ತು ಎಂದು ಅಧಿಕಾರ ಕಿತ್ತುಕೊಂಡಿರಿ? ಎಂದು ಜನರಿಗೆ ಮಾಹಿತಿ ನೀಡಿ’ ಎಂದು ತಿಳಿಸಿದರು.

ಇದನ್ನೂ ಓದಿ: Areca News : ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಬರುವ ಅಮಿತ್‌ ಶಾ ಅಡಿಕೆ ಬೆಳೆಗಾರರಿಗೆ ನೀಡುವ ಸಿಹಿ ಸುದ್ದಿ ಏನು?

ಇಡಿ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ‘ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ವಿಚಾರವಾಗಿ ನಾವು ಈ ಹಿಂದೆ ಇಡಿ ಅಧಿಕಾರಿಗಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೂ ಈಗ ಮತ್ತೆ ವಿಚಾರಣೆಗೆ ನೋಟಿಸ್ ನೀಡಿದ್ದಾರೆ. ಇನ್ನು ಸಿಬಿಐ ಮೂಲಕ ಮಗಳ ಕಾಲೇಜಿನ ಶುಲ್ಕದ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಅವರ ಮುಂದೆ ಬಹಳ ದೊಡ್ಡ ಕೆಲಸಗಳಿವೆ. ಅವುಗಳನ್ನು ಮಾಡುವುದನ್ನು ಬಿಟ್ಟು ಮಗಳ ಕಾಲೇಜಿನ ಶುಲ್ಕ ಪಾವತಿ ವಿಚಾರವಾಗಿ ತನಿಖೆ ಮಾಡುತ್ತಿದ್ದಾರೆ. ಈ ಬಗ್ಗೆ ಸಿಬಿಐಗೆ ಪತ್ರ ಬರೆದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ’ ಎಂದರು.

ʼಮಂತ್ರಿ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಪೇಚಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತಾಡುತ್ತಿದ್ದಾರೆ. ಆರೋಗ್ಯ ಸಚಿವರಿಗೆ ಶಿಫಾರಸು ಮಾಡಿ ಚಿಕಿತ್ಸೆ ಕೊಡಿಸಲಿʼ ಎಂದು ಸಲಹೆ ನೀಡಿದರು.

ʼಕೆಲವರಿಗೆ ನನ್ನ ಬಗ್ಗೆ ಮಾತನಾಡಿದರೆ ಮಾತ್ರ ಅವರ ಪಕ್ಷದಲ್ಲಿ ಮಾರ್ಕೆಟ್ ಇರುತ್ತದೆ. ಇಲ್ಲದಿದ್ದರೆ ಅವರ ಪಕ್ಷದಲ್ಲೇ ಅವರನ್ನು ಮಾತನಾಡಿಸುವುದಿಲ್ಲ’ ಎಂದು ಟೀಕಿಸಿದರು.

ಇದನ್ನೂ ಓದಿ: Leopard trapped : ಮೈಸೂರು ಜಿಲ್ಲೆಯಲ್ಲಿ ನಾಲ್ಕು ವರ್ಷದಲ್ಲಿ 64 ಚಿರತೆ ಸೆರೆ! ಬೋನಿಗೆ ಬಿದ್ದವುಗಳನ್ನು ಏನ್ಮಾಡ್ತಾರೆ?

Exit mobile version