Site icon Vistara News

Karnataka Election | ಅಭ್ಯರ್ಥಿ ಆಯ್ಕೆಗೆ ಸರ್ವೆ; ಹೆಚ್ಚು ಒಲವಿರುವವರಿಗೆ ಟಿಕೆಟ್‌ ಎಂದ ಮಾಜಿ ಸಿಎಂ ಯಡಿಯೂರಪ್ಪ

BS Yediyurappa shivamogga

ಶಿವಮೊಗ್ಗ: ಮುಂಬರುವ ವಿಧಾನ ಸಭೆ ಚುನಾವಣೆಯ(Karnataka Election) ಅಭ್ಯರ್ಥಿ ಆಯ್ಕೆ ಸಂಬಂಧ ಹೈಕಮಾಂಡ್‌ನಿಂದ ಸರ್ವೆ ನಡೆಯುತ್ತಿದೆ. ರಾಜ್ಯದಿಂದಲೂ ಸಮೀಕ್ಷೆ ಆಗುತ್ತಿದೆ. ಯಾರ ಪರವಾಗಿ ಹೆಚ್ಚು ಒಲವಿರುತ್ತದೋ ಅವರಿಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿಯಾದ ಭದ್ರಾವತಿಯ ವಿವಿಧ ಸಮುದಾಯಗಳ ಮುಖಂಡರ ನಿಯೋಗದೊಂದಿಗೆ ಮಾತನಾಡುತ್ತ ಅವರು ಈ ವಿಚಾರ ಸ್ಪಷ್ಟಪಡಿಸಿದರು. ಹೈಕಮಾಂಡ್‌ ಮತ್ತು ರಾಜ್ಯ ಬಿಜೆಪಿಯಿಂದ ಇನ್ನೊಂದು ಸುತ್ತಿನ ಅಭ್ಯರ್ಥಿ ಸಮೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.

ಭದ್ರಾವತಿ ಕ್ಷೇತ್ರದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಗೋಟೆ ರುದ್ರೇಶ್ ಅವರಿಗೆ ಟಿಕೆಟ್‌ ಕೊಡಬೇಕು ಎಂದು ನಿಯೋಗ ಮನವಿ ಮಾಡಿತು. ರುದ್ರೇಶ ಅವರು ಪಕ್ಷದ ವಿವಿಧ ಜವಾಬ್ದಾರಿ ನಿರ್ವಹಿಸಿ ಪಕ್ಷದ ಸಂಘಟನೆ ಮಾಡಿದ್ದಾರೆ. ವಕೀಲರಾಗಿ ಹೆಸರುವಾಸಿಯಾಗಿದ್ದು, ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಜನರ ಮನ ಗೆದ್ದಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚು ಎಂದು ಹೇಳಿತು.

ಇದನ್ನೂ ಓದಿ | Student murder : ಲಯಸ್ಮಿತಾ ಕೊಲೆ ಪ್ರಕರಣ; ಮದುವೆಯಾಗಲು ನಿರಾಕರಿಸಿದ್ದಕ್ಕೆ ಚೂರಿ ಹಾಕಿದನಂತೆ ಪಾಗಲ್‌ ಪ್ರೇಮಿ

ಇದಕ್ಕೆ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ, ಈ ಬಾರಿ ಭದ್ರಾವತಿ ಕ್ಷೇತ್ರವನ್ನು ನಾವು ಗೆಲ್ಲಲೇ ಬೇಕು. ಯಾರಿಗೇ ಟಿಕೆಟ್ ಕೊಟ್ಟರೂ ನಾವೆಲ್ಲ ಸೇರಿ ಕೆಲಸ ಮಾಡಬೇಕು. ಕೇಂದ್ರದ ಮುಖಂಡರು ಸರ್ವೆ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತಾರೆ. ಮಂಗೋಟೆ ರುದ್ರೇಶ್ ಬಗ್ಗೆ ಗಮನಹರಿಸುವುದಾಗಿ ಹೇಳಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಂಗೋಟೆ ರುದ್ರೇಶ್, “ಪಕ್ಷದ ಅಧ್ಯಕ್ಷನಾಗಿ ದುಡಿದಿದ್ದೇನೆ. ಎರಡು ಎಂಪಿ ಚುನಾವಣೆಯಲ್ಲಿ ಸಂಸದರ ಪರವಾಗಿ ಕೆಲಸ ಮಾಡಿದ್ದೇನೆ.ನಾನೊಬ್ಬ ಆಕಾಂಕ್ಷಿಯಾಗಿದ್ದು, ಟಿಕೆಟ್ ಕೊಡುತ್ತಾರೆಂಬ ಭರವಸೆ ಇದೆ. ಗೆಲ್ಲುವ ವಿಶ್ವಾಸವೂ ಇದೆ. ಎಲ್ಲ ಸಮಾಜದ ಪದಾಧಿಕಾರಿಗಳು ಇವತ್ತು ಯಡಿಯೂರಪ್ಪ ಅವರನ್ನು ಭೇಟಿಯಾಗಿ ನನ್ನನ್ನು ಅಭ್ಯರ್ಥಿ ಮಾಡುವಂತೆ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಕೂಡ ಭರವಸೆ ನೀಡಿದ್ದಾರೆ” ಎಂದರು.

ಇದನ್ನೂ ಓದಿ |RRR Movie | BAFTA ಪ್ರಶಸ್ತಿಯನ್ನು ತಪ್ಪಿಸಿಕೊಂಡ ಆರ್‌ಆರ್‌ಆರ್‌: ಟ್ರೋಲ್‌ ಆಗಿದ್ಯಾಕೆ?

Exit mobile version