Site icon Vistara News

Shivamogga News: ಶಿವಮೊಗ್ಗದಲ್ಲಿ ಕಾಂಗ್ರೆಸ್ ಪರ ಅಲೆ ಇದೆ: ಮಂಜುನಾಥ್ ಗೌಡ

Former Chairman of DCC Bank Manjunath Gowda shivamogga

#image_title

ಶಿವಮೊಗ್ಗ: ಬಿಜೆಪಿ ಭದ್ರಕೋಟೆ ಎಂದು ಹೇಳುವ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ರಾಜ್ಯ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಹೇಳಿದರು.

ನಗರದಲ್ಲಿ ಸೋಮವಾರ (ಫೆ.೬) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು, ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಬಂದು ಹೋದರೂ ಈ ಬಾರಿ ಏನೂ ಆಗಲ್ಲ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಬಿಜೆಪಿ ವಿರುದ್ಧ ಜನರು ಬೇಸತ್ತಿದ್ದಾರೆ ಎಂದರು.

ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 3 ದಿನಗಳಲ್ಲಿ 1,300 ರೂ. ಇಳಿಕೆ! ಖರೀದಿಸುವವರು ಗಮನಿಸಿ

ಗೃಹ ಮಂತ್ರಿಗಳು ಗೃಹ ಇಲಾಖೆಯನ್ನು ಅತ್ಯಂತ ಸರಳವನ್ನಾಗಿ ಮಾಡಿ ಬಿಟ್ಟಿದ್ದಾರೆ. ತೀರ್ಥಹಳ್ಳಿಯಲ್ಲೇ ಉಳಿದು ಬಿಡುತ್ತಾರೆ ಎಂದರೆ ಏನು? ಮನೆಯಿಂದಲೇ ಗೃಹ ಇಲಾಖೆ ನಿಭಾಯಿಸುತ್ತಾರೆಯೇ ಎಂದು ಪ್ರಶ್ನಿಸಿದರು. ಆರಗ ಜ್ಞಾನೇಂದ್ರ ಹೆಸರು ಹೇಳದೇ ಪ್ರಸ್ತಾಪಿಸಿದ ಮಂಜುನಾಥ್ ಗೌಡ, ವಿಐಎಸ್ಎಲ್ ಕಾರ್ಖಾನೆ ನಷ್ಟಕ್ಕೆ ದೂಡಿದವರೇ ಇವರು. ಇವರ ವ್ಯವಹಾರವೇ ಪ್ರಶ್ನಾರ್ಥಕವಾಗಿದೆ. ಒಬ್ಬ ಗೃಹ ಸಚಿವರು ಹೇಗೆ ಆಡಳಿತ ನಡೆಸಬೇಕು? ಇವರು ಹೇಗೆ ಆಡಳಿತ ನಡೆಸುತ್ತಿದ್ದಾರೆ ಎಂದರು.

ಕಿಮ್ಮನೆ ರತ್ನಾಕರ್ ಹಾಗೂ ನಾನು ಒಟ್ಟಾಗಿದ್ದೇವೆ. ತೀರ್ಥಹಳ್ಳಿಯಲ್ಲಿ ನಾನು ಸೇರಿದಂತೆ ಮೂವರು ಆಕಾಂಕ್ಷಿಗಳಿದ್ದೇವೆ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ. ಒಂದೇ ಪಕ್ಷದಲ್ಲಿದ್ದೇವೆ, ಒಟ್ಟಿಗೆ ಇದ್ದೇವೆ ಎಂದರು.

ಇದನ್ನೂ ಓದಿ: Turkey Earthquake: ಶತಮಾನದ ಭೀಕರ ಭೂಕಂಪ, ತತ್ತರಿಸಿದ ಟರ್ಕಿ, ಸಿರಿಯಾ; ಮೃತರ ಸಂಖ್ಯೆ 530ಕ್ಕೆ ಏರಿಕೆ

ನಾನು ಅನೇಕ ಬಾರಿ ಕಾಶ್ಮೀರಕ್ಕೆ ಹೋಗಿದ್ದೇನೆ. ಆದರೆ ಮೊನ್ನೆ ಕಾಶ್ಮೀರಕ್ಕೆ ರಾಹುಲ್ ಗಾಂಧಿ ಅವರ ಜತೆ ಭಾರತ್ ಜೋಡೋ ಸಮಾರೋಪದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದು ನನಗೆ ಸಂತೋಷ ತಂದಿದೆ. ರಾಹುಲ್ ಗಾಂಧಿ ಪಾದಯಾತ್ರೆ ಬಳಿಕ ಭಾರತ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಭಾರತ್ ಜೋಡೋ ಯಾತ್ರೆ ದೇಶದ ಜನರಲ್ಲಿ ಬದಲಾವಣೆ ತಂದಿದೆ. ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಪಾದಯಾತ್ರೆ ಈ ದೇಶದಲ್ಲಿ ವಿಶೇಷವಾಗಿದೆ. ಅದಾನಿ ಸಂಸ್ಥೆಯ ನಷ್ಟದ ಹಾದಿ ದೇಶದ ಆರ್ಥಿಕ ಪರಿಸ್ಥಿತಿ ತೋರಿಸುತ್ತಿದೆ ಎಂದು ಹೇಳಿದರು.

ಜನಧ್ವನಿ ಯಾತ್ರೆ ಬ್ರೇಕ್ ಫೇಲ್ ಆಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಬ್ರೇಕ್ ಫೇಲ್ ಆಗಿಲ್ಲ. ನಮ್ಮದು ಪವರ್ ಬ್ರೇಕ್ ಇದ್ದು, ಫೇಲ್ ಆಗುವ ಪ್ರಶ್ನೆಯೇ ಇಲ್ಲ. ಅವರದ್ದು, ಹಳೆಯ ಆಯಿಲ್ ಬ್ರೇಕ್ ಹೊಂದಿದೆ ಎಂದರು.

ಇದನ್ನೂ ಓದಿ: BKS Varma Death: ವರ್ಮಾ ಅವರದೇ ಒಂದು ವಿಶಿಷ್ಟ ಲೋಕ: ಸಹ ಕಲಾವಿದ ಪ.ಸ. ಕುಮಾರ್‌ ಮನದಾಳದ ಮಾತು

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕೆಪಿಸಿಸಿ ಕಾರ್ಯದರ್ಶಿ ವೈ‌.ಎಚ್.ನಾಗರಾಜ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿ ರವಿಕುಮಾರ್ ಮತ್ತಿತರರು ಇದ್ದರು.

Exit mobile version