Site icon Vistara News

Shivamogga PESIAMS | ಬಿಬಿಎ, ಬಿಬಿಎಂ, ಎಂಬಿಎ ಮತ್ತಿತರ ಪದವೀಧರರಿಗೆ ಪದವಿ ಪ್ರದಾನ

ಶಿವಮೊಗ್ಗ ಪೆಸಿಟ್‌ ಕಾಲೇಜು

ಶಿವಮೊಗ್ಗ: ನಮ್ಮ ದೇಶ ಪ್ರಾಚೀನ ಕಾಲದಲ್ಲೇ ದೊಡ್ಡ ವಿಶ್ವವಿದ್ಯಾಲಯಗಳನ್ನು ಹೊಂದಿತ್ತು. ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಆಗಿನ ಕಾಲದಲ್ಲೇ 10 ಲಕ್ಷ ಮಂದಿ ವಿದ್ಯಾರ್ಥಿಗಳಿದ್ದರು. 10 ಸಾವಿರ ಪ್ರಾಧ್ಯಾಪಕರಿದ್ದರು ಎಂದು ಇತಿಹಾಸಕಾರರು ಉಲ್ಲೇಖ ಮಾಡಿದ್ದಾರೆ. (Shivamogga PESIAMS) ಹೀಗಾಗಿ ಇಂದು ವಿಶ್ವ ಮತ್ತೆ ಭಾರತೆದೆಡೆಗೆ ನೋಡುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

ನಗರದ ಪೆಸಿಟ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಬಿಬಿಎ, ಬಿಬಿಎಂ, ಎಂಬಿಎ ಮತ್ತಿತರ ಪದವೀಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಇಂದು ನಾವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದೇವೆ. ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಮುಂದಿರುವ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಬೇಕಾದ ಅವಶ್ಯಕತೆಯಿದೆ. ಜಾಗತೀಕರಣ, ಖಾಸಗೀಕರಣಕದ ಸನ್ನಿವೇಶಗಳನ್ನು ಅವಲೋಕಿಸಬೇಕು. ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆಯೂ ಚಿಂತಿಸಬೇಕೆಂದು ಅಭಿಪ್ರಾಯಪಟ್ಟರು.

ಕೈಗಾರಿಕೋದ್ಯಮಿ ಡಿ.ಜಿ.ಬೆನಕಪ್ಪ ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ಯೋಜನೆ ಸಿದ್ಧಪಡಿಸಬೇಕು. ನಿಖರವಾದ ಯೋಜನೆಯನ್ನು ಶೇ.1ರಷ್ಟಾದರೂ ಅನುಷ್ಠಾನಗೊಳಿಸಿದರೆ ಗುರಿ ತಲುಪಿದಂತೆಯೇ. ಜೀವನದ ಸಣ್ಣ ಪುಟ್ಟ ವಿಷಯಗಳಿಗೂ ಮಹತ್ವ ನೀಡಬೇಕು. ಯಾವುದನ್ನೂ ಕಡೆಗಣಿಸಬಾರದು ಎಂದರು.

ಪ್ರೇರಣಾ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಆಡಳಿತ ಸಮನ್ವಯಾಧಿಕಾರಿ ಡಾ.ಆರ್.ನಾಗರಾಜ, ಪ್ರಾಚಾರ್ಯೆ ಡಾ.ಕೆ.ಸಾಯಿಲತಾ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಡಿ.ಎಸ್.ರೂಪಾ, ಪ್ರಮುಖರಾದ ಡಾ.ಪ್ರವೀಣ್, ಡಾ.ಎಂ.ಎಂ.ಕೃಷ್ಣ ಉಪಸ್ಥಿತರಿದ್ದರು.

ಇದನ್ನೂ ಓದಿ | School Teachers | ಕ್ಲಾಸ್‌ಗೆ ಚಕ್ಕರ್‌ ಹಾಕುವ ಶಿಕ್ಷಕರಿಗೆ ಶಿಕ್ಷಣ ಸಚಿವರಿಂದ ಕ್ಲಾಸ್‌!

Exit mobile version