Site icon Vistara News

Shivamogga Riots : ಶಿವಮೊಗ್ಗಕ್ಕೆ ಇದೇನು ಹೊಸತಾ?; ಗೃಹ ಸಚಿವ ಪರಮೇಶ್ವರ್‌ ಉಡಾಫೆ ಹೇಳಿಕೆ

G parameshwar Shivamogga riots

ಬೆಂಗಳೂರು: ʻಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ?ʼ (Is it new to Shivamogga?) ಎಂದು ಹೇಳುವ ಮೂಲಕ ಶಿವಮೊಗ್ಗದ ಗಲಭೆ ವಿಚಾರವನ್ನು ಲಘುವಾಗಿ ತೆಗೆದುಕೊಂಡಂತೆ ವರ್ತಿಸಿದ್ದಾರೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ (G Parameshwar). ಅದರ ಜತೆಗೆ ಶಿವಮೊಗ್ಗದಲ್ಲಿ ಈ ರೀತಿಯ ಘಟನೆ (Shivamogga riots) ನಡೆಯುವ ಬಗ್ಗೆ ಮುನ್ಸೂಚನೆ ಇತ್ತು ಎಂದು ಅವರು ಹೇಳಿದ್ದಾರೆ.

ʻʻಪೋಲೀಸರು ದೊಡ್ಡ ಪ್ರಮಾಣದ ಗಲಾಟೆ ತಪ್ಪಿಸಿದ್ದಾರೆ. ಎರಡೂ ಗುಂಪಿನ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ. ಇದನ್ನು ಕೆಲವರು ಅಡ್ವಾಂಟೇಜ್‌ ಆಗಿ ತಗೋತಾರೆʼʼ ಎಂದು ಡಾ. ಜಿ. ಪರಮೇಶ್ವರ್‌ ಬೆಂಗಳೂರಿನಲ್ಲಿ ಹೇಳಿದರು.

ʻʻಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ ಜಿ. ಪರಮೇಶ್ವರ್‌ ಅವರು, ʻʻಶಿವಮೊಗ್ಗದಲ್ಲಿ ಕಲ್ಲು ತೂರಾಟ ಮಾಡಿದರು ಎಂಬ ಮಾಹಿತಿ ಇದೆ. ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲʼʼ ಎಂದು ಹೇಳಿದರು.

ಹೊರಗಿನಿಂದ ಯಾರನ್ನೂ ಬರಲು ಬಿಟ್ಟಿಲ್ಲ

ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ ಹೊರಗಿನಿಂದ ಬಂದವರ ಕೈವಾಡವಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ನಾವು ಎಲ್ಲಾ ರೋಡ್ ಗಳನ್ನು ರೆಗ್ಯುಲೇಟ್ ಮಾಡಿದ್ದೇವೆ. ಏನಾಗಿದೆ ಎಂದು ನಮಗೆ ಗೊತ್ತಿದೆ, ಹೇಳಿಕೆ ಕೊಡುವವರು ಕೊಡ್ತಾರೆʼʼ ಎಂದರು.

ಏನಾದರೂ ಆಗಬಹುದು ಎಂದು ಮೊದಲೇ ಗೊತ್ತಿತ್ತು?

ʻʻನಮಗೆ ಅಲ್ಲಿ ಟೆನ್ಶನ್ ಇದೆ ಎಂದು ಗೊತ್ತಿತ್ತು. ಪ್ರೊಸೆಷನ್ ಹೋದಾಗ ಏನಾದರೂ ಆಗುತ್ತೆ ಅಂತ ನಾವು ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದೆವು. ಹಾಗಾಗಿ ದೊಡ್ಡ ಪ್ರಮಾಣದ ಗಲಾಟೆ ಆಗಿಲ್ಲ. ಅದನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಸಣ್ಣಪುಟ್ಟ ಗಲಾಟೆ ಆದಾಗ ಅದನ್ನ ಹೇಗೆ ಕ್ರಮ ತೆಗೆದುಕೊಳ್ಳಬೇಕೋ ಅದನ್ನೇ ಪೊಲೀಸರು ಮಾಡಿದ್ದಾರೆ. ಅವರ ಕಡೆ ಇವರ ಕಡೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆʼʼ ಎಂದು ಹೇಳಿದ್ದಾರೆ.

ʻʻನಾವು ಮೊದಲೇ ಕಟ್ಟೆಚ್ಚರ ವಹಿಸಿದ್ದೆವು. ಆರೋಪಿಗಳ ಹೆಸರು ಬಹಿರಂಗಗೊಳಿಸಲ್ಲ, ನಿಮಗೂ ಹೇಳಲ್ಲ. ಅನುಮತಿ ಇಲ್ಲದೆ ಆಗಿದೆ, ಇಂತಹದಕ್ಕೆಲ್ಲ ಪ್ರಚೋದನೆ ಕೊಡುವುದಿಲ್ಲʼʼ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ʻʻಬ್ಯಾನರ್ ಕಟ್ಟೋದು, ಪೋಸ್ಟರ್ ಕಟ್ಟೋದು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪ್ರಚೋದನೆ ನೀಡಲಾಗುತ್ತದೆ. ಇಡೀ ರಾಜ್ಯದಲ್ಲಿ ಎಲ್ಲ ಜಿಲ್ಲೆಯಲ್ಲೂ ಅಲ್ಲಲ್ಲಿ ಇಂತಹ ಘಟನೆಗಳು ನಡೆದಿದೆ. ಅದನ್ನು ನಮ್ಮವರು ನಿಯಂತ್ರಣ ಮಾಡಿದ್ದಾರೆ. ಈ ಬಾರಿ ಎಲ್ಲೂ ಅಹಿತಕರ ಘಟನೆ ಆಗೋದಕ್ಕೆ ಬಿಟ್ಟಿಲ್ಲʼʼ ಎಂದು ಹೇಳಿರುವ ಪರಮೇಶ್ವರ್‌, ʻʻಎರಡು ಸಮುದಾಯದವರಿಗೂ ವಾರ್ನ್ ಮಾಡಿದ್ದೇವೆ. ಅದನ್ನ ಮೀರಿ ಹೋದರೆ ನ್ಯಾಚುರಲಿ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Shivamogga Clash: ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ, ನಗರ ಪೂರ್ತಿ ಸೆಕ್ಷನ್‌ 144 ಜಾರಿ

ʻʻಹಿಂದೆ ಇಲ್ಲಿ ಇಂಥ ಘಟನೆಗಳು ನಡೆದಿರುವುದರಿಂದ ನಮಗೆ ಪರಿಸ್ಥಿತಿಯ ಅರಿವಿದೆ. ಅದಕ್ಕಾಗಿ ನಾವು ಮೊದಲೇ ಮುಂಜಾಗ್ರತ ಕ್ರಮ ವಹಿಸಿದ್ದೆವು. ಹೊರಗಿಂದ ಜನ ಬರೋದಕ್ಕೆ ಬಿಟ್ಟಿಲ್ಲ. ಪೋಸ್ಟರ್ ಹಾಕೋದಕ್ಕೆ ಯಾವುದೇ ಅನುಮತಿಯನ್ನು ಕೊಟ್ಟಿಲ್ಲ. ಯಾರು ಹಾಕಿದ್ದಾರೆ ಯಾವ ಉದ್ದೇಶಕ್ಕೆ ಹಾಕಿದ್ದಾರೆ ಎಂಬುದನ್ನು ತನಿಖೆ ಮಾಡುತ್ತೇವೆʼʼ ಎಂದು ನುಡಿದರು.

Exit mobile version