ಶಿವಮೊಗ್ಗ : ಮಾರುತಿ ಆಮ್ನಿ ಮತ್ತು ಇನೋವಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕ ಮತ್ತು ಆತನ ಪತ್ನಿ ಮೃತಪಟ್ಟಿದ್ದಾರೆ. ಈ ಮಹಿಳೆಯ ಹೊಟ್ಟೆಯಲ್ಲಿದ್ದ ಶಿಶು ಕೂಡ ಜೀವ ಕಳೆದುಕೊಂಡಿದೆ.
9 ತಿಂಗಳ ತುಂಬು ಗರ್ಭಿಣಿಯಾಗಿದ್ದ ರೋಜಾ(೨೩)ರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಹಾಗೂ ಹೆಲ್ಪ್ ಚೆಕಪ್‌ಗೆಂದು ಹೊಳಲೂರಿನ ಮೂಲಕ ಹೊಳೆಹೊನ್ನೂರು ಮಾರ್ಗವಾಗಿ ಚನ್ನಗಿರಿಗೆ ಕರೆದುಕೊಂಡು ಹೋಗುವ ವೇಳೆ ಬೇಡರ ಹೊಸಳ್ಳಿ ಕೆರೆ ಏರಿಯಾದಲ್ಲಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಇವರ ಪತಿ ಧನಂಜರಿ(35), ಚೇತನ್(23, )ಸುನೀತಾ ಮತ್ತು ಇಂದಿರಮ್ಮ ಎಂಬುವರು ಗಾಯಗೊಂಡಿದ್ದರು.
ಇದನ್ನು ಓದಿ | ಕಲಬುರಗಿ ಬಸ್-ಟೆಂಪೊ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ
ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಧನಂಜರಿ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು. ತುಂಬು ಗರ್ಭಿಣಿ ರೋಜಾ ತಲೆಗೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ವೈದ್ಯರು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಉಳಿಸಿಕೊಳ್ಳಲು ಸತತ ಪ್ರಯತ್ನಪಟ್ಟಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ರೋಜಾ ಶನಿವಾರ ಮುಂಜಾನೆ ಮೃತಪಟ್ಟರು. ಈ ಮೂಲಕ ಅವರ ಹೊಟ್ಟೆಯಲ್ಲಿದ್ದ ಶಿಶುವೂ ಕೊನೆಯುಸಿರೆಳೆಯಿತು.
ಗಾಯಾಳು ಚೇತನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಮೃತ ಧನಂಜರಿಯ ಸಹೋದರ. ಗಾಯಗೊಂಡಿರುವ ಈತನ ಪತ್ನಿ ಸುನೀತಾ ಕೂಡ 7 ತಿಂಗಳ ಗರ್ಭಿಣಿ. ಇವರು ಮೃತ ಧನಂಜರಿಯ ಅಣ್ಣನ ಪತ್ನಿಯಾಗಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡಿರುವ ಮತ್ತೊಬ್ಬ ಮಹಿಳೆ ಇಂದಿರಮ್ಮ ಎಂಬುವವರನ್ನು ಮಣಿಪಾಲ್ ಆಸ್ಪತ್ರೆ ದಾಖಲು ಮಾಡಲಾಗಿದೆ.