Site icon Vistara News

Shivamogga terror : ತೀರ್ಥಹಳ್ಳಿಗೇ ಬೆಂಕಿ ಹಚ್ಚುವ ಸಂಚು ನಡೆಸಿದ್ನಾ ಶಾರಿಕ್‌? 15ಕ್ಕೂ ಅಧಿಕ ಕೃತ್ಯಗಳಲ್ಲಿ ಕೈವಾಡ

Shariq

#image_title

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದ್ದ 15ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ರೂವಾರಿ ಮೊಹಮ್ಮದ್‌ ಶಾರಿಕ್‌ನ (Shivamogga terror) ಕೈವಾಡವಿರುವುದು ತನಿಖೆಯ ವೇಳೆ ಬಯಲಿಗೆ ಬಂದಿದೆ.

ತೀರ್ಥಹಳ್ಳಿಯ ಸೊಪ್ಪಿನಗುಡ್ಡದ ನಿವಾಸಿಯಾಗಿರುವ ಮೊಹಮ್ಮದ್‌ ಶಾರಿಕ್‌ನ ಸಾರಥ್ಯದಲ್ಲೇ ಮಂಗಳೂರಿನ ಗೋಡೆಬರಹ, ಶಿವಮೊಗ್ಗ ಮತ್ತು ಮಂಗಳೂರಿನ ಟ್ರಯಲ್‌ ಬ್ಲಾಸ್ಟ್‌ಗಳು ನಡೆದಿರುವುದು ಈಗಾಗಲೇ ಬೆಳಕಿಗೆ ಬಂದಿತ್ತು. ಸ್ವತಃ ಶಾರಿಕ್‌ ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಕುಕ್ಕರ್‌ ಬ್ಲಾಸ್ಟ್‌ನಲ್ಲಿ ಗಾಯಗೊಂಡು ಸಂಪೂರ್ಣ ಚೇತರಿಸಿಕೊಂಡಿರುವ ಆತನನ್ನು ಈಗ ಹತ್ತು ದಿನಗಳ ಅವಧಿಗೆ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಎನ್‌ಐಎ ಪೊಲೀಸರು ಶಾರಿಕ್‌ ಮತ್ತು ಜಬಿಯುಲ್ಲಾನನ್ನು ಶಿವಮೊಗ್ಗಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಎನ್‌ಐಎ ಪೊಲೀಸರು ಶಾರಿಕ್‌ ಮತ್ತು ಜಬಿಯುಲ್ಲಾನ ವಿಚಾರಣೆಯ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ಹಲವು ಅಗ್ನಿ ಅವಘಡಗಳೆಂದು ನಂಬಲಾಗಿದ್ದ ಘಟನೆಗಳ ಹಿಂದೆ ಶಾರಿಕ್‌ ಕೈವಾಡ ಬಯಸಲಾಗಿದೆ

ಶಾರಿಕ್‌ ಮತ್ತು ಗ್ಯಾಂಗ್‌ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಇಡುತ್ತಿತ್ತು. ಇದು ಸಾಮಾನ್ಯವಾದ ಬೆಂಕಿ ಆಗಿರಲಿಲ್ಲ. ಬದಲಾಗಿ, ಅದು ತಾನು ತಯಾರಿಸಿದ ಬಾಂಬ್‌ಗಳನ್ನು ಟೆಸ್ಟ್‌ ಮಾಡುತ್ತಿದ್ದ ಎನ್ನುವುದು ಈಗ ಬಯಲಾಗುತ್ತಿದೆ.

ಶಾರಿಕ್‌ ಮತ್ತು ತಂಡ ತನ್ನ ಟ್ರಯಲ್‌ ಬ್ಲಾಸ್ಟ್‌ಗೆ ಮಾರ್ಗದ ಬದಿಯ ವಾಹನಗಳನ್ನೇ ಪ್ರಮುಖವಾಗಿ ಟಾರ್ಗೆಟ್‌ ಮಾಡುತ್ತಿದ್ದ ಎನ್ನಲಾಗಿದೆ. ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸುವುದಕ್ಕೆ ಮೊದಲೇ ತೀರ್ಥಹಳ್ಳಿಯಲ್ಲೂ ತಾಲೀಮು ನಡೆಸಿದ್ದು ಈಗ ಬಯಲಾಗುತ್ತಿದೆ.

ಬುಧವಾರ ಮೊಹಮ್ಮದ್‌ ಶಾರಿಕ್‌ನನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಕರೆದುಕೊಂಡು ಹೋದ ಎನ್‌ಐಎ ಅಧಿಕಾರಿಗಳ ತಾಲೂಕಿನ ಚಿಟ್ಟೆ ಬಯಲಿನಲ್ಲಿ ನಡೆದಿದ್ದ ಗೂಡ್ಸ್ ಆಟೋ ಅಗ್ನಿ ಅವಘಡದ ವಿಚಾರಣೆ ನಡೆಸಿದರು. ಚಿಟ್ಟೆಬಯಲು ಬಸ್ ಸ್ಟ್ಯಾಂಡ್ ಬಳಿ ಅಗ್ನಿ ಅವಘಡ ಸಂಭವಿಸಿ ಅಗ್ನಿ ಆಕಸ್ಮಿಕ ಎಂಬ ಪ್ರಕರಣ ದಾಖಲಾಗಿತ್ತು.

ಕೋಣಂದೂರಿನಲ್ಲಿ ಲಾರಿ, ಆರಗದಲ್ಲಿ ಡೀಸೆಲ್‌ ಟ್ಯಾಂಕರ್ ಸೇರಿದಂತೆ ಹಲವು ಕಡೆ ಸಂಭವಿಸಿದ ಬೆಂಕಿ ದುರಂತಗಳ ಹಿಂದೆ ಶಾರೀಕ್ ತಂಡದ ಕೈವಾಡವಿದೆ ಎನ್ನಲಾಗುತ್ತಿದೆ. ಇವೆಲ್ಲವೂ ಪ್ರಕರಣಗಳು ಆಕಸ್ಮಿಕ ಅಗ್ನಿ ಅವಘಡಗಳು ಎಂದು ಈ ಹಿಂದೆ ಕೇಸು ದಾಖಲಾಗಿತ್ತು.

ಇದನ್ನೂ ಓದಿ : Shivamogga terror : ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಶಾರಿಕ್‌ನನ್ನು ಶಿವಮೊಗ್ಗಕ್ಕೆ ಕರೆತಂದ ಎನ್‌ಐಎ ಪೊಲೀಸರು

Exit mobile version