Site icon Vistara News

ಬಸ್‌ ಡಿಕ್ಕಿ, ಪತ್ರಿಕಾ ವಿತರಕ ಸ್ಥಳದಲ್ಲೇ ಸಾವು

ಬಸ್‌ ಡಿಕ್ಕಿ

ಶಿವಮೊಗ್ಗ: ಶನಿವಾರ ಮುಂಜಾನೆ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದ ಬಳಿ ಬಸ್‌ ಡಿಕ್ಕಿಯಾಗಿ ಪತ್ರಿಕಾ ವಿತರಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ಹೋಗುತ್ತಿದ್ದ KSRTC ಬಸ್ ಪತ್ರಿಕಾ ವಿತರಕರ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಪತ್ರಿಕಾ ವಿತರಕ, ಸಾಗರದ ಬೆಳಲಮಕ್ಕಿಯ ನಿವಾಸಿ 25 ವರ್ಷದ ಗಣೇಶ್ ಮೃತಪಟ್ಟಿದ್ದಾರೆ. ಇವರು ಕಳೆದ 6-7 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದರು.

ಶನಿವಾರ ಬೆಳಗ್ಗೆ ಎಂದಿನಂತೆ ಪೇಪರ್‌ ಹಾಕಲು ಹೋದವರು ಬಾರದ ಲೋಕ ಸೇರಿದ್ದಾರೆ. ಇವರೊಂದಿಗೆ ಹಿಂಬದಿಯಲ್ಲಿ ಕುಳಿತಿದ್ದ ರಾಹುಲ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಬೆಳಲಮಕ್ಕಿ ಸುರೇಶ್ ಮತ್ತು ಉಮಾ ದಂಪತಿಗೆ ಗಣೇಶ್ ಒಬ್ಬನೇ ಮಗನಾಗಿದ್ದರು. ತಂದೆ ಅನಾರೋಗ್ಯ ಪೀಡಿತರಾಗಿದ್ದು, ಇಬ್ಬರು ವಿವಾಹಿತ ಸಹೋದರಿಯರು ಇದ್ದಾರೆ. ಗಣೇಶ ಉತ್ತಮ ಕೃಷಿ ಕೂಲಿಕಾರ ಸಹ ಆಗಿದ್ದರು.

ಇದನ್ನೂ ಓದಿ: ಧಾರವಾಡ: ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಮೂವರ ದಾರುಣ ಸಾವು

Exit mobile version