Site icon Vistara News

Accident death: ಬಾವಿ ಕ್ಲೀನಿಂಗ್‌ ವೇಳೆ ಬೋಡ್ರಸ್‌ ಕಲ್ಲು ತಲೆ ಮೇಲೆ ಬಿದ್ದು ಸಾವು

death by stone fall

ಶಿವಮೊಗ್ಗ: ಬಾವಿಯೊಳಗೆ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಬೋಡ್ರಸ್‌ ಕಲ್ಲು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ (Accident death).

ಶಿವಮೊಗ್ಗ (Shimogga news) ಜಿಲ್ಲೆಯ ಸಾಗರದ ನೆಹರೂ ನಗರದ 9 ನೇ ತಿರುವಿನಲ್ಲಿ ಘಟನೆ ನಡೆದಿದೆ. ರಾಮನಗರದ ಮೋಹನ (58) ಸಾವು ಕಂಡ ದುರ್ದೈವಿ. ಅರಳಿಕಟ್ಟೆ ಬಳಿಯ ಮನೆಯ ಬಾವಿಯಲ್ಲಿ ಅವರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಮೇಲಿನಿಂದ ಆಕಸ್ಮಿಕವಾಗಿ ತಲೆ ಮೇಲೆ ಕಲ್ಲು ಬಿದ್ದಿದ್ದು, ಬಾವಿಯಲ್ಲೇ ಸಾವಿಗೀಡಾಗಿದ್ದಾರೆ.

ತಾಯಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಧಾರವಾಡ: ತಾಯಿಯ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಧಾರವಾಡದ 3ನೇ ಅಧಿಕ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಬಸವರಾಜ ಅಣ್ಣಿಗೇರಿ ಶಿಕ್ಷೆಗೊಳಗಾದ ಆರೋಪಿ.

ಧಾರವಾಡ‌ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರ ಗ್ರಾಮದ ಬಸವರಾಜ 2022ರ ಮೇ 1ರಂದು ಆಸ್ತಿಗಾಗಿ ತಾಯಿಯ ಕೊಲೆ ಮಾಡಿದ್ದ. ತಾಯಿ ಶಾಂತವ್ವಳನ್ನು ಹೊಡೆದು ಕೊಂದಿದ್ದ ಬಸವರಾಜ ಈ ವೇಳೆ ತಂದೆಯನ್ನ ಕೂಡಾ ಕೊಲೆ ಮಾಡಲು ಯತ್ನಿಸಿದ್ದ. ಈ ಬಗ್ಗೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ.

ಜೊತೆಗೆ ಪಾರ್ಟಿ ಮಾಡಿದವರೇ ಕೊಲೆ ಮಾಡಿದರು

ಬೆಂಗಳೂರು: ಕುಡಿತದ ಮತ್ತಿನಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಮೀಪ ಆಟೋ ಡ್ರೈವರ್ ಒಬ್ಬರ ಕೊಲೆಯಾಗಿದ್ದು, ಜೊತೆಗೆ ಪಾರ್ಟಿ ಮಾಡಿದವರೇ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ.

ಊರು ಬಿಟ್ಟು ಬಂದು ಬೆಂಗಳೂರಲ್ಲಿ ಆಟೋ ಓಡಿಸುತ್ತ ಜೀವನ ಮಾಡುತ್ತಿದ್ದ ತುಮಕೂರು ಮೂಲದ ಸುರೇಶ್ (40) ಕೊಲೆಯಾದ ವ್ಯಕ್ತಿ. ಕಳೆದ 10-15 ವರ್ಷಗಳಿಂದ ಬೆಂಗಳೂರಿನ ಬಳೆಪೇಟೆ ರಸ್ತೆಯ ರಾಜ್ ಕುಮಾರ್ ಪ್ರತಿಮೆ ಬಳಿಯ ಕಟ್ಟಡದಲ್ಲಿ ಸ್ನೇಹಿತರ ಜೊತೆ ರೂಂ ಮಾಡಿಕೊಂಡಿದ್ದರು. ಮೊನ್ನೆ ರಾತ್ರಿ ಒಂದಿಬ್ಬರು ಗೆಳೆಯರ ಜೊತೆ ಎಂದಿನಂತೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬೆಳೆಗ್ಗೆ ಅಕ್ಕಪಕ್ಕದವರು ಬಂದು ನೋಡಿದಾಗ ಸುರೇಶ್ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಪ್ಪಾರಪೇಟೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ, ಜತೆಗೆ ಪಾರ್ಟಿ ಮಾಡಿದವರೇ ಕೊಲೆ ಮಾಡಿ ಪರಾರಿಯಾಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: Murder Case : ಹೆಂಡ್ತಿ ಕತ್ತು ಹಿಸುಕಿ ಕೊಲೆ ಮಾಡಿದ ಕುಡುಕ ಗಂಡ

Exit mobile version