Site icon Vistara News

ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆಗೆ ಸಂಚು? ಅಪರಿಚಿತ ಪತ್ರ ತಂದ ಆತಂಕ

shimogga

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಯುತ್ತಿದೆ ಎಂಬ ಒಕ್ಕಣೆ ಹೊಂದಿರುವ ಅಪರಿಚಿತರು ಬರೆದ ಪತ್ರವೊಂದು ಆತಂಕ ಮೂಡಿಸಿದೆ.

ಗಾಂಧಿ ಬಜಾರ್‌ನ ಗಂಗಪರಮೇಶ್ವರಿ ದೇವಸ್ಥಾನದ ಬಳಿ ಪತ್ರ ಪತ್ತೆಯಾಗಿದೆ. ಗಣಪತಿ ಹಬ್ಬದ ಸಂದರ್ಭ ನಗರದಲ್ಲಿ ಮೂವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕರೊಬ್ಬರು ಬಾಗಿಲು ಮುಚ್ಚುವ ವೇಳೆ ಖಾಕಿ ಬಣ್ಣದ ಕವರ್ ಪತ್ತೆಯಾಗಿದೆ. ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರ ಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂದು ಬರೆಯಲಾಗಿದೆ.

ʼʼಒಬ್ಬ ಮಾರ್ವಾಡಿಯನ್ನು ಅರ್ಧಂಬರ್ಧ ಕೊಲೆ ಮಾಡಲಾಗಿದೆ. ಆತನನ್ನು ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ ಉದ್ದಿಮೆದಾರ ಹಾಗೂ ಹರ್ಷನ ಸಹಚರನನ್ನು ಕೊಲೆ ಮಾಡುವ ಯೋಜನೆಯಿದೆ. ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುವವರು ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಮೂವರನ್ನು ಮಂಗಳೂರಿನಿಂದ ಕರೆಯಿಸಬೇಕು. ಅವರು ಮೊಬೈಲ್ ಫೋನ್ ಬಳಸಬಾರದು. ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೇ ಈ ಹಬ್ಬದ ಆಚರಣೆ ತಡೆಯಲು ಸಾಧ್ಯ ಎಂದು ಮೂವರು ಯುವಕರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡಿದ್ದೇನೆ. ಇದನ್ನು ಕೇಳಿ ಭಯಭೀತನಾಗಿದ್ದೇನೆʼʼ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮೊಹ್ಮದ್ ಫೈಸಲ್ ಯಾನೆ ಚೆನ್ನು ಎಂಬಾತ ಈ ಗುಂಪಿನಲ್ಲಿದ್ದ. ಈತ ಗಾಂಜಾ ಮಾರುವುದು, ಗಾಂಜಾ ಸೇವನೆಯನ್ನೂ ಮಾಡುತ್ತಾನೆ. ಈತ ಆಜಾದ್ ನಗರದಲ್ಲಿ ರೌಡಿಯಂತೆ ವರ್ತಿಸುತ್ತಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಫೈಸಲ್‌ನನ್ನು ಪೊಲೀಸರು ವಿಚಾರಿಸಬೇಕು. ಪತ್ರ ಬರೆದ ಅಪರಿಚತನನ್ನು ಪತ್ತೆಹಚ್ಚಬೇಕು ಎಂದು ಅದು ದೊರೆತ ಅಂಗಡಿ ಮಾಲೀಕರು ಎಫ್‌ಐಆರ್‌ನಲ್ಲಿ ಮನವಿ ಮಾಡಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Shivamogga clash | ಶಾಂತ ಸ್ಥಿತಿಯಲ್ಲಿ ಶಿವಮೊಗ್ಗ, ಸೆಕ್ಷನ್ 144 ಮುಂದುವರಿಕೆ

Exit mobile version