Site icon Vistara News

Assault Case : ಶಿವಮೊಗ್ಗದಲ್ಲಿ ನಟೋರಿಯಸ್ ರೌಡಿಯನ್ನು ಬೆತ್ತಲೆಗೊಳಿಸಿ ಟಾರ್ಚರ್‌!

assault case

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಠಕ್ಕರ್ ಕೊಟ್ಟಿದ್ದಕ್ಕೆ ನಟೋರಿಯಸ್‌ ರೌಡಿಗೆ ಎದುರಾಳಿ ಗ್ಯಾಂಗ್‌ ಟಾರ್ಚರ್‌ ನೀಡಿದೆ. ಅದು ಕೂಡ ರೌಡಿಯನ್ನು ಕಿಡ್ನ್ಯಾಪ್‌ ಮಾಡಿ ಬೆತ್ತಲೆಗೊಳಿಸಿ ಹಲ್ಲೆ (Assault Case) ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ನಟೋರಿಯಸ್‌ ರೌಡಿ ಸಚಿನ್ ಷ್ಯಾಡೋ ಎಂಬಾತ ಕುಡಿದ ನಶೆಯಲ್ಲಿ ಎದುರಾಳಿ ಗ್ಯಾಂಗ್‌ಗೆ ಅವಾಜ್‌ ಹಾಕಿದ್ದ. ಬಳಿಕ ರೌಡಿ ಪಂಥಾಹ್ವಾನ ಸ್ವೀಕರಿಸಿದ್ದ ಎದುರಾಳಿ ಗ್ಯಾಂಗ್ ಬರುವ ಮುನ್ನವೇ ಕಾಲ್ಕಿತ್ತಿದ್ದ. ಈ ವೇಳೆ ಕೈಗೆ ಸಿಕ್ಕ ರೌಡಿ ಸಚಿನ್‌ ಷ್ಯಾಡೋ ಸ್ನೇಹಿತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಗೆ ದಾಖಲಾದ ಸ್ನೇಹಿತನನ್ನು ನೋಡಲು ಸಚಿನ್ ಷ್ಯಾಡೋ ಬರುವುದನ್ನೇ ಎದುರಾಳಿ ಗ್ಯಾಂಗ್‌ ಕಾದು ನಿಂತಿತ್ತು. ಅಂದುಕೊಂಡಂತೆ ಆಸ್ಪತ್ರೆಗೆ ಬಂದ ರೌಡಿ ಸಚಿನ್ ಷ್ಯಾಡೋನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಮೂರು ದಿನ ಲಾಕ್ ಮಾಡಿಕೊಂಡ ಎದುರಾಳಿ ಗುಂಪು ಖಾಸಗಿ ಲೇಔಟ್‌ನಲ್ಲಿ ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಜತೆಗೆ ಹಲ್ಲೆ ಮಾಡಿರುವ ವಿಡಿಯೊ ಮಾಡಿ ವೈರಲ್ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version