Site icon Vistara News

Assault Case: ಯುವಕನಿಗೆ ಕಂಟ್ರಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ ರೌಡಿಶೀಟರ್!

#image_title

ಶಿವಮೊಗ್ಗ: ರೌಡಿಯೊಬ್ಬ (Rowdy sheeter) ಯುವಕನ ಮೇಲೆ ಹಲ್ಲೆ (Assault Case) ಮಾಡಿ, ಕಂಟ್ರಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ (threating) ಹಾಕಿರುವ ಘಟನೆ ನಗರದ ಅಣ್ಣನಗರದಲ್ಲಿ ನಡೆದಿದೆ. ರೌಡಿಶೀಟರ್ ಅಜರ್, ಮಹಮ್ನದ್ ರಿಯಾಬ್ ಎಂಬಾತನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ.

ರೌಡಿಶೀಟರ್‌ ಅಜರ್‌, ಮಹಮ್ಮದ್ ರಿಯಾಬ್ ಬಳಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿ, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿದ್ದ. 40 ಸಾವಿರ ರೂ.ಗೆ ಬೈಕ್ ಖರೀದಿ ಮಾಡಿದ್ದ ಅಜರ್, ಹಣ ಕೊಡದೆ ಕಳೆದ 8 ತಿಂಗಳಿನಿಂದ ಸತಾಯಿಸುತ್ತಿದ್ದ ಎನ್ನಲಾಗಿದೆ.

ಹೀಗಾಗಿ ಭಾನುವಾರ ಮಹಮದ್ ರಿಯಾಬ್ ಅಜರ್ ಬಳಿ ಹಣ ಕೇಳಲು ಹೋಗಿದ್ದಾರೆ. ಈ ವೇಳೆ ರೌಡಿಶೀಟರ್‌ ಅಜರ್‌ ಮನಸೋ ಇಚ್ಛೆ ಥಳಿಸಿದ್ದಾನೆ. ಬಳಿಕ ಪಿಸ್ತೂಲ್‌ನ್ನು ಹಣೆಗೆ ಇಟ್ಟು ಮತ್ತೊಮ್ಮೆ ಹಣ ಕೇಳಿದರೆ ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇತ್ತ ತೀವ್ರ ಹಲ್ಲೆಗೊಳಗಾದ ಮಹಮದ್ ರಿಯಾಬ್‌ನನ್ನು ಆತನ ಸ್ನೇಹಿತರು ಮೆಗ್ಗಾನ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಮಹಮದ್‌ ದೊಡ್ಡಪೇಟೆ ಠಾಣೆಯಲ್ಲಿ ಅಜರ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Woman Murder: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಹತ್ಯೆ, ನಾಲ್ಕು ದಿನದ ಬಳಿಕ ಪತ್ತೆ

ಇನ್ನು ಅಜರ್ ವಿರುದ್ಧ ವಿವಿಧ ಠಾಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಸದ್ಯ ಮಹಮದ್‌ ದೂರಿನ್ವಯ ರೌಡಿಶೀಟರ್ ಅಜರ್‌ನನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version