Site icon Vistara News

Car Accident | ತೀರ್ಥಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಪಾದಚಾರಿ ಸಾವು

accident

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆಯ ಈಶ್ವರ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಲ್ಟೋ ಕಾರು (Car Accident ) ಪಲ್ಟಿಯಾಗಿದೆ. ಕಾರು ಪಲ್ಟಿಯಾಗಿ ಹೋಗಿ ಅಂತಿಮವಾಗಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುಂಚದಕಟ್ಟೆ ನಿವಾಸಿ ಪುಟ್ಟಸ್ವಾಮಿಗೌಡ (70) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪುಟ್ಟಸ್ವಾಮಿ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸವಾಗಿದೆ.

ಇದನ್ನೂ ಓದಿ | Accident | ಕೊಲ್ಹಾರ ತಾಲೂಕಿನಲ್ಲಿ ಕಾರು-ಸಾರಿಗೆ ಬಸ್ ನಡುವೆ ಅಪಘಾತ; ಇಬ್ಬರ ಸಾವು

Exit mobile version