Site icon Vistara News

Congress‌ Jatha | ಕಾಂಗ್ರೆಸ್‌ನಿಂದ ಬದಲಾವಣೆಗಾಗಿ ಯುವ ಆಕ್ರೋಶದ ಹೆಜ್ಜೆ ಜಾಥಾ

Congress Jatha

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ನಗರದಲ್ಲಿ ಶುಕ್ರವಾರ (ಡಿ.೨೩) ಪ್ರತಿಭಟನೆ (Congress‌ Jatha ) ನಡೆಸಿದರು. ಬದಲಾವಣೆಗಾಗಿ – ಯುವ ಆಕ್ರೋಶದ ಹೆಜ್ಜೆ ಎಂಬ ಜಾಥಾ ಹಮ್ಮಿಕೊಂಡು, ವಿನೂತನವಾಗಿ ಪ್ರತಿಭಟಿಸಿದರು.

ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸುಳ್ಳು ಭರವಸೆ ಹೇಳುತ್ತಲೇ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ವಾಸ್ತವ ಪರಿಸ್ಥಿತಿ ಏನೆಂಬುದನ್ನು ತಿಳಿದಲ್ಲಿ ಮಾತ್ರ ಇವರ ನಿಜ ಬಣ್ಣ ಬಯಲಾಗುತ್ತದೆ. ಇಡೀ ದೇಶವನ್ನು ನಂಬಿಸಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಜನ ಸಾಮಾನ್ಯರನ್ನು ನಂಬಿಸಿರುವ ಇವರು ಜನ ಸಾಮಾನ್ಯರ ಬದುಕನ್ನೇ ಕಿತ್ತುಕೊಂಡಿದ್ದಾರೆ ಎಂದು ದೂರಿದರು.

ಯುವಕರು, ರೈತರು, ಬಡವ, ಕೂಲಿ ಕಾರ್ಮಿಕ, ಮಧ್ಯಮ ವರ್ಗದ ಜನರ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದು ಸುಳ್ಳು ಹೇಳಿ ಸರ್ಕಾರಿ ಸಾಮ್ಯದ ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತ ಕಾರ್ಪೊರೇಟ್ ಕಂಪನಿಗಳ ಏಜಂಟರಂತೆ ಈ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಇಲ್ಲಿಯವರೆಗೂ ಒಂದೇ ಒಂದು ಆಶ್ರಯ ಬಡಾವಣೆಗಳನ್ನು ಮಾಡದೆ, ವಯೋವೃದ್ಧರ ಪಿಂಚಣಿ, ವಿಕಲಚೇತನರ ವೇತನ, ವಿಧವಾ ವೇತನ, ಪಡಿತರ ಚೀಟಿ ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತು, ಅತಿವೃಷ್ಟಿಯ ಪರಿಹಾರ, ರೈತರಿಗೆ ಬಿತ್ತನೆ ಬೀಜಗಳು ಗೊಬ್ಬರ ಹಾಗೂ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಗಳನ್ನು ಸಮರ್ಪಕವಾಗಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ | JDS Pancharatna | ರಾಜಕೀಯ ಉದ್ದೇಶಕ್ಕೆ ಕೊರೊನಾ ಟಫ್ ರೂಲ್ಸ್‌ ಮಾಡಿದ್ರೆ ಒಪ್ಪಲ್ಲ: ಎಚ್‌.ಡಿ.ಕುಮಾರಸ್ವಾಮಿ

Exit mobile version