Site icon Vistara News

ಅವಹೇಳನಕಾರಿ ಕಾಮೆಂಟ್ ಆರೋಪ: ಚಕ್ರವರ್ತಿ ಸೂಲಿಬೆಲೆ ಮೇಲೆ ದೂರು ದಾಖಲು

Chakravarthy Sulibele

ಶಿವಮೊಗ್ಗ: ವಾಗ್ಮಿ, ಹಿಂದುತ್ವವಾದಿ ಚಕ್ರವರ್ತಿ ಸೂಲಿಬೆಲೆ (chakravarthy sulibele) ವಿರುದ್ಧ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆ ವಿರುದ್ಧ ಅವಮಾನಕಾರಿಯಾಗಿ ಕಮೆಂಟ್‌ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

IPC ಸೆಕ್ಷನ್ 504, 509ರ ಅಡಿಯಲ್ಲಿ FIR ದಾಖಲು ಮಾಡಲಾಗಿದೆ. ಆ. 24ರಂದು ಸೌಗಂಧಿಕ ರಘುನಾಥ್ ಎಂಬವರು ದೂರು ನೀಡಿದ್ದರು. ಇವರು ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಕಾಮೆಂಟ್ ವಿನಿಮಯ ನಡೆದಿದೆ.

ಚಂದ್ರಯಾನದ ಕುರಿತ ಪೋಸ್ಟ್‌ಗೆ ಸೌಗಂಧಿಕ ಕಾಮೆಂಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ʼಅವರ ಸಂಘಟನೆಯ ಕಾರ್ಯಕರ್ತ ದೇವರಿಗೆ ಪೂಜೆ ಸಲ್ಲಿಸಿದ್ದು ಅವರು ಹಾಕ್ಕೊಂಡ್ರೆ ನಿನಗೆ ಯಾಕೆ, ಎಲ್ಲಿ ಉರಿ ಬಂತೋ ಗೊತ್ತಾಗಿಲ್ಲʼ ಎಂದು ʼಚಕ್ರವರ್ತಿ ಸೂಲಿಬೆಲೆʼ ಎಂಬ ಹೆಸರಿನ ಅಕೌಂಟ್‌ನಿಂದ ಕಾಮೆಂಟ್ ಮಾಡಲಾಗಿದೆ. ಇದಕ್ಕೆ ಕಾಮೆಂಟ್ ಬಾಕ್ಸ್‌ನಲ್ಲೇ ಸೌಗಂಧಿಕ ಉತ್ತರ ಕೂಡ ನೀಡಿದ್ದಾರೆ.

ನಂತರ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೌಗಂಧಿಕ ರಘುನಾಥ್ ದೂರು ನೀಡಿದ್ದಾರೆ. ವಿನೋಬ ನಗರ ಪೊಲೀಸರಿಗೆ ದೂರು IPC ಸೆಕ್ಷನ್ 504, 509ರ ಅಡಿಯಲ್ಲಿ ಸೌಗಂಧಿಕ ದೂರು ದಾಖಲಿಸಿದ್ದಾರೆ.

ಕೆರೆಹಳ್ಳಿ ಪುನೀತ್‌ ಮೇಲಿನ ಕೇಸ್‌ ಹಿಂದೆಗೆಯುವಂತೆ ಒತ್ತಾಯ

ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ ಹಿಂದೂಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್‌ ಹಾಕಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಅನ್ನುವ ಆರೋಪದ ಮೇಲೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಸರ್ಕಾರದ ಈ ನಡೆ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಹಿಂದೂಪರ ಸಂಘಟನೆಗಳು, ಫೇಸ್‌ಬುಕ್‌ನಲ್ಲಿ ಬರವಣಿಗೆ ಬರೆದವರ ಮೇಲೆ ಈ ರೀತಿ ಕ್ರಮ ತೆಗೆದುಕೊಳ್ಳೋದು ಸರಿಯಲ್ಲ, ಹಿಂದೂ ಕಾರ್ಯಕರ್ತರ ಮೇಲಿನ ಕೇಸ್‌ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಬರೀ ಫೇಸ್‌ಬುಕ್‌ ನೋಡಿಕೊಂಡು ಕುಳಿತಿರುತ್ತಾ ಎಂದು ಪ್ರಶ್ನಿಸಿದ ಚಕ್ರವರ್ತಿ ಸೂಲಿಬೆಲೆ, ಇವತ್ತು ಪುನೀತ್‌ಗೆ ಆಗಿರೋದು ಎಲ್ಲರಿಗೂ ಆಗಬಹುದು, ಇದು ಸರ್ಕಾರ ಕೆಳಮಟ್ಟಕ್ಕೆ ಇಳಿದಿರುವುದನ್ನು ಸೂಚಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Independence Day 2023 : ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ ಅಜೇಯ ಭಾರತ: ಚಕ್ರವರ್ತಿ ಸೂಲಿಬೆಲೆ

Exit mobile version