Site icon Vistara News

Araga jnanendra: ಠಾಣೆಗೇ ನುಗ್ಗಿ ಜನ ಪೊಲೀಸರಿಗೆ ಹೊಡೆಯುವಂತಾಗಿದೆ; ಆರಗ ಜ್ಞಾನೇಂದ್ರ ಟೀಕೆ

Former Minister Araga jnanendra latest statement in Shivamogga

ಶಿವಮೊಗ್ಗ: ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ಪೊಲೀಸರ ಬಗ್ಗೆ ಅಪರಾಧಿಗಳಿಗೆ ಗೌರವ ಇಲ್ಲ ಅಥವಾ ಭಯ ಇಲ್ಲ. ಪೊಲೀಸ್ ವ್ಯವಸ್ಥೆಯನ್ನೇ ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಈ ಸರ್ಕಾರದ ಕಡೆಯಿಂದ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ನಿನ್ನೆ ಚನ್ನಗಿರಿಯಲ್ಲಿ ನಡೆದ ಪ್ರಕರಣದಡಿ ಅಪರಾಧಿಯನ್ನು ಕರೆದುಕೊಂಡು ಬಂದಿದ್ದರು. ಲಾಕಪ್ ಡೆತ್ ಎಂದು ಹೇಳಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಅಪರಾಧದ ಸಂಖ್ಯೆ ಹೆಚ್ಚಳದಿಂದ ಜನರ ನೆಮ್ಮದಿ ಹಾಳಾಗುತ್ತಿದೆ ಎಂದರು. ಇದೇ ವೇಳೆ ಅಪರಾಧ ಪ್ರಕರಣಗಳ ಹೆಚ್ಚಳ ಕುರಿತ ಅಂಕಿ ಅಂಶಗಳನ್ನು ಅವರು ಮುಂದಿಟ್ಟರು.

ಆಡಳಿತದಲ್ಲಿ ಇರುವವರು ಬಿಗಿಯಾಗಿ ಇದ್ದಾಗ ಮಾತ್ರ ಶಾಂತ ಪರಿಸ್ಥಿತಿ ಲಭಿಸುತ್ತದೆ. ಈ ಸರ್ಕಾರದಡಿ ವಿಧಾನಸೌಧದ ಒಳಗೇ ದೇಶವಿರೋಧಿ, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಮೊನ್ನೆ ಕೊಪ್ಪದಲ್ಲೂ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲೂ ಪ್ರಕಟಗೊಂಡಿದೆ ಎಂದು ತಿಳಿಸಿದರು.

ಏನಿದು ಪ್ರಕರಣ?

ದಾವಣಗೆರೆ: ಪೊಲೀಸ್ ಕಸ್ಟಡಿಯಲ್ಲಿದ್ದ (police custody) ಆರೋಪಿಯೊಬ್ಬ ಸಾವಿಗೀಡಾಗಿದ್ದು (Lockup death), ಇದರಿಂದ ರೊಚ್ಚಿಗೆದ್ದ ಆರೋಪಿ (culprit) ಕಡೆಯವರು ಠಾಣೆಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ದಾವಣಗೆರೆ (Davanagere news) ಜಿಲ್ಲೆಯ ಚನ್ನಗಿರಿ (Channagiri news) ತಾಲೂಕಿನಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: PGCET 2024: ಪಿಜಿಸಿಇಟಿ 2024ಕ್ಕೆ ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭ; ಪರೀಕ್ಷೆ ಯಾವಾಗ, ಇಲ್ಲಿದೆ ವೇಳಾಪಟ್ಟಿ

ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈತ ಒಸಿ ಆಡಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರಿಂದ ತನಿಖೆಗೆ ಒಳಗಾಗಿದ್ದ. ಸಂಜೆ ಪೊಲೀಸರು ಈತನನ್ನು ಠಾಣೆಗೆ ಕರೆತಂದಿದ್ದ‌ರು.

ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಅದಿಲ್‌ನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅದಿಲ್‌ ಸಾವನ್ನಪ್ಪಿದ್ದ. ಅಕ್ರೋಶಗೊಂಡ ಆರೋಪಿ ಸಂಬಂಧಿಕರು, ಆರೋಪಿಯ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ದೊಂಬಿ ಎಬ್ಬಿಸಿದ್ದಾರೆ. ಪೊಲೀಸರು ನೀಡಿದ ಹಿಂಸೆಯ ಪರಿಣಾಮ ಲಾಕಪ್‌ ಡೆತ್‌ ಆಗಿದೆ, ಅದನ್ನು ಮುಚ್ಚಿಡಲು ಲೋ ಬಿಪಿ ನಾಟಕವಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ಇದನ್ನೂ ಓದಿ: Udupi Gang War: ಉಡುಪಿಯನ್ನು ಬೆಚ್ಚಿ ಬೀಳಿಸಿದ ಗ್ಯಾಂಗ್ ವಾರ್; ಮಾರಾಮಾರಿಯ ವಿಡಿಯೊ ವೈರಲ್‌, ಇಬ್ಬರ ಬಂಧನ

ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಅದಿಲ್‌ ಸಂಬಂಧಿಕರು ಹಾಗೂ ಸ್ನೇಹಿತರು, ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Exit mobile version