Site icon Vistara News

ಹುದ್ದೆ ಕಡಿತಗೊಳಿಸಿದ ಸರ್ಕಾರದ ನಿರ್ಧಾರದ ವಿರುದ್ಧ ರೈಲ್ವೆ ನೌಕರರ ಪ್ರತಿಭಟನೆ

ರೈಲ್ವೆ ನೌಕರರ ಪ್ರತಿಭಟನೆ

ಶಿವಮೊಗ್ಗ: ರೈಲ್ವೆ ಹುದ್ದೆಗಳನ್ನು ಏಕಾಏಕಿ ಕಡಿತಗೊಳಿಸಲು ತೀರ್ಮಾನಿಸಿರುವ ಕೇಂದ್ರ ಸರ್ಕಾರದ ವಿರುದ್ಧ ನೈಋತ್ಯ ರೈಲ್ವೆ ಮಜ್ದೂರ ಯೂನಿಯನ್‌ ಸಾಂಕೇತಿಕ ಪ್ರತಿಭಟನೆಗೆ ಕರೆಕೊಟ್ಟಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ನೌಕರರು ಮುಷ್ಕರ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮಜ್ದೂರ್ ಸಂಘ ಉಗ್ರ ಹೋರಾಟಕ್ಕೆ ಇಳಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈಗಾಗಲೇ ಇಲಾಖೆಯ ಸಿ ಮತ್ತು ಡಿ ಐಓಡಬ್ಲೂ, ವಿಭಾಗವನ್ನ ಮುಚ್ಚಲು ಮುಂದಾಗಿರುವುದರಿಂದ ಯೂನಿಯನ್ ಪ್ರತಿಭಟನೆಗೆ ಮುಂದಾಗಿದೆ.

ಇದನ್ನೂ ಓದಿ | ಜೂ.6ರಂದು ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಉದ್ಘಾಟನೆ

ಸರ್ಕಾರದ ಈ ನಿರ್ಧಾರದಿಂದ ದೇಶದಲ್ಲಿ ಸುಮಾರು 72 ಸಾವಿರ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹುದ್ದೆಗಳನ್ನು ಕಡಿತಗೊಳಿಸಿ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಯೂನಿಯನ್‌ ಶಿವಮೊಗ್ಗ ಘಟಕದ ಕಾರ್ಯದರ್ಶಿ ಚನ್ನಕೇಶವ, ಉಪಾಧ್ಯಕ್ಷ ಪ್ರಭಾಕರ್ ರಾವ್, ಖಜಾಂಚಿ ಯಾಸಿನ್, ಸಹಕಾರ್ಯದರ್ಶಿ ರಾಘವೇಂದ್ರ ಮುಂತಾದವರು ಇದ್ದರು.
ಇದನ್ನೂ ಓದಿ | ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

Exit mobile version