Site icon Vistara News

Hosanagara News: ಸತ್ಯನಾರಾಯಣ ಪೂಜೆಯಿಂದ ಸಂಕಷ್ಟ ದೂರ: ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ

Satyanarayana Vrata programme inauguration at Ganganakoppa

ಹೊಸನಗರ: ಸತ್ಯನಾರಾಯಣ ಪೂಜೆ (Satyanarayana Pooja) ಮಾಡಿದರೆ ಸಂಕಷ್ಟಗಳು ದೂರವಾಗುತ್ತವೆ. ಈ ಕಾರಣಕ್ಕಾಗಿಯೇ ಶುಭ ಸಮಾರಂಭಗಳ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸತ್ಯನಾರಾಯಣ ವ್ರತಾಚರಣೆ ನಡೆಸುತ್ತಾರೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣಕ್ಕೆ ಸಮೀಪದ ಗಂಗನಕೊಪ್ದದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ವ್ರತದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

ನಂಬಿಕೆ ಇಲ್ಲದೇ ಫಲದ ನಿರೀಕ್ಷೆ ಮಾಡಬಾರದು. ಭಗವಂತನಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುವುದರಿಂದ ನಿಶ್ಚಿತವಾಗಿ ಒಳಿತಾಗುತ್ತದೆ. ತಾಂತ್ರಿಕ ಜಗತ್ತಿಗೆ ಕಾಲಿಟ್ಟ ಬಳಿಕ ಧರ್ಮಾಚರಣೆಗಳು ಆಡಂಬರ ಹಾಗೂ ಪ್ರಚಾರಕ್ಕೆ ಸೀಮಿತ ಆಗುತ್ತಿವೆ. ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ಪ್ರಕರಣಗಳು ನಡೆಯುತ್ತಿವೆ. ಇಂದಿನ ಪೀಳಿಗೆಯ ಯುವಕರಲ್ಲಿ ಧಾರ್ಮಿಕ ಮನೋಭಾವ ಹೆಚ್ಚಬೇಕಿದೆ. ಸಾತ್ವಿಕ ನಡೆನುಡಿಗಳನ್ನು ರೂಡಿಸಿಕೊಳ್ಳುವ ವ್ಯಕ್ತಿ ಎಲ್ಲರಿಂದ ಗೌರವ ಪಡೆಯುತ್ತಾನೆ ಎಂದರು.

ಇದನ್ನೂ ಓದಿ: Belagavi Protest: ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಿಸಿ; ಉ.ಕ. ಹೋರಾಟ ಸಮಿತಿ ಆಗ್ರಹ

ಸತ್ಯನಾರಾಯಣ ಪೂಜೆ ವ್ರತಾಚರಣೆಯಿಂದ ದಾರಿದ್ರ್ಯ ನಾಶವಾಗಿ ಸಂಕಷ್ಟಗಳು ದೂರವಾಗುತ್ತವೆ. ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳ ಸಂದರ್ಭದಲ್ಲಿ ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ ಎಂದವರು ಹೇಳಿದರು.

ಹಿರಿಯ ಸಾಹಿತಿ ಡಾ. ಶಾಂತಾರಾಮ ಪ್ರಭು ಅವರು ದೇವಾಲಯಗಳ ಪ್ರಾಮುಖ್ಯತೆ, ದೇವರ ಆರಾಧನೆಯ ಕ್ರಮ, ಜೀವನದಲ್ಲಿ ಗುರುವಿನ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಇದನ್ನೂ ಓದಿ: Ajay Jadeja: ಇಶಾನ್​ ಕಿಶನ್​ ವಿಚಾರದಲ್ಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಜಡೇಜಾ

ಜನಜಾಗೃತಿ ವೇದಿಕೆಯ ಎನ್.ಆರ್.ದೇವಾನಂದ, ಗ್ರಾಪಂ ಅಧ್ಯಕ್ಷ ಓಂಕೇಶ್, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಎನ್.ಗಣೇಶ್, ಯೋಜನಾಧಿಕಾರಿ ಬೇಬಿ, ಮೇಲ್ವಿಚಾರಕ ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು. ಸುತ್ತಮುತ್ತಲ ಗ್ರಾಮದ ವಿವಿಧ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಭಕ್ತರು ಆಗಮಿಸಿದ್ದರು.

Exit mobile version