Ajay Jadeja: ಇಶಾನ್​ ಕಿಶನ್​ ವಿಚಾರದಲ್ಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಜಡೇಜಾ - Vistara News

ಕ್ರಿಕೆಟ್

Ajay Jadeja: ಇಶಾನ್​ ಕಿಶನ್​ ವಿಚಾರದಲ್ಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಜಡೇಜಾ

ಉತ್ತಮ ಫಾರ್ಮ್​ನಲ್ಲಿರುವ ಆಟಗಾರರನ್ನು ಒಂದೆರಡು ಪಂದ್ಯ ಆಡಿಸಿ ಆ ಬಳಿಕ ಕೈಬಿಡುವುದು ಟೀಮ್​ ಇಂಡಿಯಾದ ಕೆಟ್ಟ ಪದ್ಧತಿ ಎಂದು ಮಾಜಿ ಆಟಗಾರ ಅಜಯ್​ ಜಡೇಜಾ(Ajay Jadeja) ಕಿಡಿಕಾರಿದ್ದಾರೆ.

VISTARANEWS.COM


on

Ishan Kishan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 4ನೇ ಮತ್ತು ಅಂತಿಮ ಪಂದ್ಯದಲ್ಲಿ ಇಶಾನ್​ ಕಿಶನ್​(Ishan Kishan) ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ವಿಚಾರದಲ್ಲಿ ಟೀಮ್​ ಮ್ಯಾನೆಜ್​ಮೆಂಟ್​ ಮತ್ತು ಬಿಸಿಸಿಐ ವಿರುದ್ಧ ಮಾಜಿ ಆಟಗಾರ ಅಜಯ್​ ಜಡೇಜಾ(Ajay Jadeja) ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿರುವ ಜಡೇಜಾ, “ಎಷ್ಟು ಭಾರತೀಯ ಆಟಗಾರರು ದ್ವಿಶತಕ ಬಾರಿಸಿದ್ದಾರೆ? ಇಶಾನ್ ಕಿಶನ್ ಈ ಕೆಲಸವನ್ನು ಮಾಡಿದ್ದಾರೆ. ಅವರು ತಂಡಕ್ಕಾಗಿ ಆಡಲು ಯಾವಾಗಲೂ ಸಿದ್ಧರಾಗುತ್ತಾರೆ. ಆದರೆ ಅವರನ್ನು ಪದೇಪದೆ ನಿರ್ಲಕ್ಷಿಸಲಾಗುತ್ತಿದೆ. ಏಕದಿನ ವಿಶ್ವಕಪ್​ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಬಳಿಕ ಅವರಿಗೆ ಆಡುವ ಅವಕಾಶ ನೀಡಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಭಾರತೀಯ ಕ್ರಿಕೆಟ್‌ನ ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಈ ಪದ್ಧತಿ ಬದಲಾಗುವ ತನಕ ತಂಡ ಪ್ರಗತಿ ಕಾಣದು” ಎಂದು ಜಡೇಜಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

“ಉತ್ತಮ ಫಾರ್ಮ್​ನಲ್ಲಿರುವ ಆಟಗಾರರನ್ನು ಒಂದೆರಡು ಪಂದ್ಯ ಆಡಿಸಿ ಆ ಬಳಿಕ ಕೈಬಿಡುವುದು ಟೀಮ್​ ಇಂಡಿಯಾದ ಕೆಟ್ಟ ಪದ್ಧತಿ. ಈ ಮನಸ್ಥಿತಿ ಬದಲಾಗಬೇಕು. ಸಂಜು ಸ್ಯಾಮ್ಸನ್​ ವಿಚಾರದಲ್ಲಿಯೂ ಇದೇ ಸಂಭವಿಸಿದೆ. ಅವರನ್ನು ಕೂಡ ಕೆಲ ಸರಣಿಗೆ ಆಯ್ಕೆ ಮಾಡಿ ಸೀಮಿತ ಪಂದ್ಯ ಆಡಿಸಿ ಬೆಂಚ್​ ಕಾಯಿಸಿದ್ದನ್ನು ನಾವು ಈಗಾಗಲೇ ಕಂಡಿದ್ದೇವೆ. ಫಾರ್ಮ್​ನಲ್ಲಿ ಇರದ ಆಟಗಾರನ್ನು ಬೆಂಚ್​ ಕಾಯಿಸುವುದರಲ್ಲಿ ಅರ್ಥವಿದೆ. ಈ ನಿಯಮ ಬೇರೆಲ್ಲ ದೇಶದ ಕ್ರಿಕೆಟ್​ ಮಂಡಳಿ ಚಾಚು ತಪ್ಪದೆ ಪಾಲಿಸುತ್ತಿದೆ. ಆದರೆ ಭಾರತೀಯ ಕ್ರಿಕೆಟ್​ ಮಂಡಳಿ ಮಾತ್ರ ತದ್ವಿರುದ್ಧ” ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಅಮೋಘ ಬ್ಯಾಟಿಂಗ್​ ಪ್ರದರ್ಶನ

ಇಶಾನ್​ ಅವರು ಆಸೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 58 ರನ್‌ಗಳ ಆಕರ್ಷಕ ಬ್ಯಾಟಿಂಗ್​ ನಡಸಿದ್ದರು. ದ್ವಿತೀಯ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ಮೂಲಕ 32 ಎಸೆತಗಳಲ್ಲಿ 52 ರನ್‌ ಬಾರಿಸಿದ್ದರು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೊಂದೆ ಕಾರಣಕ್ಕೆ ಅವರನ್ನು ಮುಂದಿನ 2 ಪಂದ್ಯಗಳಿಂದ ಕೈ ಬಿಡಲಾಗಿತ್ತು.

ಇದನ್ನೂ ಓದಿ IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್​ ಕಿಶನ್​; ಕಾರಣ ಏನು?

‘ಉತ್ತಮ ಮನೋಭಾವದ ವ್ಯಕ್ತಿ’

“ಇಶಾನ್ ಕಿಶನ್ ಉತ್ತಮ ಮನೋಭಾವ ಹೊಂದಿದ ವ್ಯಕ್ತಿ. ಅವರು ಚೆನ್ನಾಗಿ ಆಡಿದಾಗ ನನಗೆ ಸಂತೋಷವಾಗುತ್ತದೆ. ಅವರು ಎಲ್ಲರನ್ನೂ ಸಂತೋಷಪಡಿಸುವ ವ್ಯಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಆಟಗಾರನ ಬ್ಯಾಟ್, ಕೈಗವಸುಗಳು ಮತ್ತು ಹೆಲ್ಮೆಟ್‌ಗಳನ್ನು ಸಿದ್ಧ ಪಡಿಸುವಲ್ಲಿ ಇಶಾನ್​ ಚಾಕಚಕ್ಯತೆ ಹೊಂದಿದ್ದಾರೆ. ಆಡುವ ಬಳಗದಿಂದ ಹೊರಗುಳಿದರೂ ಅವರು ಎಂದಿಗೂ ದೂರು ನೀಡಿದನ್ನು ನಾನು ನೋಡಿಲ್ಲ” ಎಂದು ಆರ್​. ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇಶಾನ್​ ಅವರನ್ನು ಹಾಡಿ ಹೊಗಳಿದ್ದರು.

ಇಶಾನ್​ ಕಿಶನ್​ ಅವರು ಭಾರತ ಪರ 27 ಏಕದಿನ ಪಂದ್ಯಗಳನ್ನು ಆಡಿ, 933 ರನ್​ ಬಾರಿಸಿದ್ದಾರೆ. ತಲಾ ಒಂದು ಶತಕ ಮತ್ತು ದ್ವಿಶತಕ ಬಾರಿಸಿದ್ದಾರೆ. 32 ಟಿ20 ಪಂದ್ಯಗಳಿಂದ 796 ರನ್​ ಗಳಿಸಿದ್ದಾರೆ. 2 ಟೆಸ್ಟ್​ ಪಂದ್ಯಗಳಿಂದ 78 ರನ್​ ಕಲೆಹಾಕಿದ್ದಾರೆ. ಐಪಿಎಲ್​ನಲ್ಲಿ 91 ಪಂದ್ಯಗಳನ್ನು ಆಡಿ 2324 ಗಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

IND Vs ENG:  ರಾಂಚಿಯಲ್ಲಿ ನಡೆದ ನಾಲ್ಕನೆ ಟೆಸ್ಟ್‌ನಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ.

VISTARANEWS.COM


on

cricket
Koo

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ (IND Vs ENG) ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವು 5 ವಿಕೆಟ್‌ ಗೆಲುವು ಸಾಧಿಸಿದೆ. ರಾಂಚಿಯ ಜೆಎಸ್​ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರಿದ ಭಾರತ ತಂಡವು ಒಂದು ದಿನ ಬಾಕಿ ಇರುವಂತೆಯೇ ಗೆಲುವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಮೂರನೇ ದಿನವಾದ ಭಾನುವಾರ ಆಂಗ್ಲರು ಕೇವಲ 145 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲ್ಲಲು 192 ರನ್​ಗಳ ಟಾರ್ಗೆಟ್ ನೀಡಿದ್ದರು. ಗುರಿ ಬೆನ್ನಟ್ಟಲು ಶುರು ಮಾಡಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. 24 ರನ್‌ ಗಳಿಸಿದ್ದ ರೋಹಿತ್ ಶರ್ಮಾ ಹಾಗೂ 16 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಇಂದು (ನಾಲ್ಕನೇ ದಿನ) ಬ್ಯಾಟಿಂಗ್ ಆರಂಭಿಸಿದ್ದರು. 5 ವಿಕೆಟ್‌ ನಷ್ಟಕ್ಕೆ ಭಾರತ ಗೆಲುವಿನ ದಡ ಮುಟ್ಟಿತು.

ರೋಹಿತ್‌ ಶರ್ಮಾ ಭರ್ಜರಿ ಬ್ಯಾಟಿಂಗ್‌

ನಾಯಕನ ಆಟ ಪ್ರದರ್ಶಿಸಿದ ರೋಹಿತ್‌ ಶರ್ಮಾ 55 ರನ್‌ ಗಳಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ಗಳಿಸಿ ವಿಕೆಟ್‌ ಒಪ್ಪಿಸಿದ್ದ ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮಧ್ಯೆ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದರು. ಹಿರಿಯ ಆರಂಭಿಕ ಆಟಗಾರ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ 4,000 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಇಂಡಿಯಾದ 17 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗೆಲುವಿನ ದಡ ಮುಟ್ಟಿಸಿದ ಯುವ ಆಟಗಾರರು

ಈ ಗೆಲುವಿಗೆ ಯುವ ಆಟಗಾರರರಾದ ವಿಕೆಟ್ ಕೀಪರ್ ಬ್ಯಾಟರ್​​ ಧ್ರುವ್ ಜುರೆಲ್ ಮತ್ತು ಶುಬ್ಮನ್ ಗಿಲ್ ಗಣನೀಯ ಕೊಡುಗೆ ನೀಡಿದರು. ಒಂದು ಕಡೆ ವಿಕೆಟ್‌ ಬೀಳುತ್ತಿದ್ದರೂ ಈ ಜೋಡಿ ಎಚ್ಚರಿಕೆಯಿಂದ ಆಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಜುರೆಲ್ 39 ರನ್‌ ಗಳಿಸಿದರೆ ಗಿಲ್ ಕೊಡುಗೆ 52 ರನ್‌. ಇಂದು ರೋಹಿತ್‌ ಶರ್ಮಾ (55), ಯಶಸ್ವಿ ಜೈಸ್ವಾಲ್‌ (37) ಉತ್ತಮ ಕೊಡುಗೆ ನೀಡಿದ್ದರೂ ರಜತ್‌ ಪಾಟಿದಾರ್‌ (0), ರವೀಂದ್ರ ಜಡೇಜಾ (4) ಮತ್ತು ಸರ್ಫರಾಜ್‌ ಖಾನ್‌ (0) ಎಡವಿದ್ದರು. ಈ ಹಿನ್ನಲೆಯಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡ ಜುರೆಲ್‌ ಮತ್ತು ಗಿಲ್‌ ಗೆಲುವಿನ ಜತೆಯಾಟ ನಿಭಾಯಿಸಿದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 353 ರನ್‌
ಭಾರತ ಮೊದಲ ಇನ್ನಿಂಗ್ಸ್‌: 307 ರನ್‌
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌: 145 ರನ್‌
ಭಾರತ ದ್ವಿತೀಯ ಇನ್ನಿಂಗ್ಸ್‌: 192 ರನ್‌

ಇದನ್ನೂ ಓದಿ: R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

Continue Reading

ಕ್ರೀಡೆ

WPL 2024 : ಮುಂಬಯಿ ತಂಡಕ್ಕೆ ಎರಡನೇ ಜಯ, ಗುಜರಾತ್​​ಗೆ ಮುಖಭಂಗ

WPL 2024 : ಮುಂಬಯಿ ಇಂಡಿಯನ್ಸ್​ ತಂಡ ಈ ಬಾರಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ.

VISTARANEWS.COM


on

Mumbai Indians
Koo

ಬೆಂಗಳೂರು : ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಡಬ್ಲ್ಯುಪಿಎಲ್​ನಲ್ಲಿ (WPL 2024) ಎರಡನೇ ಜಯ ಲಭಿಸಿದೆ. ಗುಜರಾತ್​ ಜೈಂಟ್ಸ್​ ತಂಡದ ವಿರುದ್ಧ 5 ವಿಕೆಟ್​ಗಳ ಅಮೋಘ ಜಯ ದಾಖಲಿಸಿದೆ. ಈ ಮೂಲಕ ಐದು ತಂಡಗಳ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಏತನ್ಮಧ್ಯೆ ಕಳೆದ ಬಾರಿಯೂ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್​ ತಂಡ ಸೋಲಿನೊಂದಿಗೆ ಶುಭಾರಂಭ ಮಾಡಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಉತ್ತಮ ಆರಂಭ ಪಡೆಯದ ಕಾರಣ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 126 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ ನಷ್ಟ ಮಾಡಿಕೊಂಡು 129 ರನ್ ಬಾರಿಸಿ ಗೆಲುವು ಸಾಧಿಸಿತು.

ಮುಂಬಯಿ ತಂಡದ ಯಸ್ತಿಕಾ ಮತ್ತು ಹೇಲಿ ಮ್ಯಾಥ್ಯೂ ತಲಾ 7 ರನ್​ಗಳಿಗೆ ಔಟಾಗುವ ಮೂಲಕ ಹಿನ್ನಡೆಗೆ ಕಾರಣರಾದರು. ನ್ಯಾಟ್​ ಸೀವರ್​ ಕೂಡ 22 ರನ್​ ಬಾರಿಸಿ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಹರ್ಮನ್​ಪ್ರೀತ್ ಕೌರ್​ 41 ಎಸೆತಕ್ಕೆ 46 ಹಾಗೂ ಅಮೇಲಿಯಾ ಕೆರ್​ 25 ಎಸೆತಕ್ಕೆ 31 ರನ್ ಬಾರಿಸಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.

ಇದನ್ನೂ ಓದಿ : Rohit Sharma : ಕೊಹ್ಲಿ, ಸಚಿನ್​ ಮಾಡಿದ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ

ಮೊದಲು ಬ್ಯಾಟ್ ಮಾಡಿದ ಗುಜರಾತ್​ ಪರ ಬೆತ್​ ಮೂನಿ 24 ರನ್ ಬಾರಿಸಿದರು. ಅವರು ಉತ್ತಮ ಆರಂಭ ತಂದುಕೊಟ್ಟರೂ ಉಳಿದವರು ಕಳಪೆ ಬ್ಯಾಟಿಂಗ್ ಮಾಡಿದರು. ವೇದಾ ಕೃಷ್ಣ ಮೂರ್ತಿ ಶೂನ್ಯಕ್ಕೆ ಔಟಾದರೆ ಹರ್ಲಿನ್ ಡಿಯೋಲ್ 8 ರನ್​ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆ್ಯಶ್ಲೆ ಗಾರ್ಡ್​ನರ್​ 15 ಹಾಗೂ ಕ್ಯಾಥ್ರಿನ್ ಬ್ರೈಸ್​ 25 ರನ್​ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಅಂತಿಮವಾಗಿ ತನುಜಾ ಕನ್ವನ್​ 21 ಎಸೆತಕ್ಕೆ 28 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು.

Continue Reading

ಕ್ರೀಡೆ

Rohit Sharma : ಕೊಹ್ಲಿ, ಸಚಿನ್​ ಮಾಡಿದ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ

Rohit Sharma : ರೋಹಿತ್ ಶರ್ಮಾ ಗೆ ಗೌತಮ್ ಗಂಭೀರ್ ದಾಖಲೆ ಮುರಿಯುವ ಎಲ್ಲ ಅವಕಾಶಗಳಿವೆ.

VISTARANEWS.COM


on

Rohit Sharma
Koo

ರಾಂಚಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹಿರಿಯ ಆರಂಭಿಕ ಆಟಗಾರ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ 4000 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಇಂಡಿಯಾದ 17 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಕಾಂಪ್ಲೆಕ್ಸ್​​ನಲ್ಲಿ ನಡೆಯುತ್ತಿದೆ. ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಭಾರತಕ್ಕೆ 192 ರನ್​ಗಳ ಗುರಿ ನೀಡಲಾಯಿತು. ಪಂದ್ಯದ ಕೊನೆಯ ಅರ್ಧ ಗಂಟೆಯಲ್ಲಿ 40 ರನ್ ಬಾರಿಸಿದೆ.

ರೋಹಿತ್ ಶರ್ಮಾ 3ನೇ ದಿನದಾಟದ ಅಂತ್ಯಕ್ಕೆ 24 ರನ್ ಗಳಿಸಿ ಔಟಾಗದೆ ಉಳಿದಿದ್ದು, 4000 ರನ್ ಗಡಿ ದಾಟಿದ್ದಾರೆ. ಪ್ರಸ್ತುತ 4003 ರನ್ ಗಳಿಸಿರುವ ಭಾರತದ ನಾಯಕ ನಾಲ್ಕನೇ ಟೆಸ್ಟ್​ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿರು ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕುವ ವಿಶ್ವಾಸವನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಗಂಭೀರ್​ ವೃತ್ತಿಜೀವನದಲ್ಲಿ 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್ ಗಳಿಸಿದ್ದಾರೆ. ಸರಣಿಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಪಂದ್ಯ ನಡೆಯಲಿದೆ.

ಸಚಿನ್ ತೆಂಡೂಲ್ಕರ್ 15921 ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್​​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 13265 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಚೇತೇಶ್ವರ ಪೂಜಾರ, ದಿಲೀಪ್ ವೆಂಗ್ಸರ್ಕರ್, ಮೊಹಮ್ಮದ್ ಅಜರುದ್ದೀನ್, ಗುಂಡಪ್ಪ ವಿಶ್ವನಾಥ್, ಕಪಿಲ್ ದೇವ್, ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಮೊಹಿಂದರ್ ಅಮರನಾಥ್, ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಂತರದ ಸ್ಥಾನಗಳಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 1000 ರನ್

ಟೆಸ್ಟ್ ಕ್ರಿಕೆಟ್​​ನಲ್ಲಿ 4000 ರನ್ ಪೂರೈಸುವುದರ ಜೊತೆಗೆ ರೋಹಿತ್ ಶರ್ಮಾ ವಿಶೇಷ ಮೈಲಿಗಲ್ಲನ್ನು ಸಹ ಸಾಧಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 1000 ರನ್ ಬಾರಿಸಿದ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಚೇತೇಶ್ವರ ಪೂಜಾರ ಮತ್ತು ರಾಹುಲ್ ದ್ರಾವಿಡ್ ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

ರೋಹಿತ್ ಶರ್ಮಾ ಪ್ರಸ್ತುತ ಇಂಗ್ಲೆಂಡ್​ನಲ್ಲಿ 1013 ರನ್ ಗಳಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ತಮ್ಮ 13 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ರಾಜ್ ಕೋಟ್ ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದರು.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 28 ಟೆಸ್ಟ್ ಪಂದ್ಯಗಳಲ್ಲಿ 1991 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರು ಥ್ರೀ ಲಯನ್ಸ್ ವಿರುದ್ಧ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 32 ಟೆಸ್ಟ್ ಪಂದ್ಯಗಳಲ್ಲಿ 2535 ರನ್ ಗಳಿಸಿದ್ದರೆ, ಗವಾಸ್ಕರ್ 38 ಪಂದ್ಯಗಳಲ್ಲಿ 2483 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಚೇತೇಶ್ವರ ಪೂಜಾರ ಕೂಡ ಎಲೈಟ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರಿಗಿಂತ ಮುಂದಿದ್ದಾರೆ.

Continue Reading

ಕ್ರಿಕೆಟ್

Deepak Chahar : ಜೊಮಾಟೊದಿಂದ ಮೋಸ, ಸಿಎಸ್​ಕೆ ಆಟಗಾರನ ಆರೋಪ

Deepak Chahar : ಆಹಾರ ಡೆಲಿವರಿ ಆಗದ ಬಗ್ಗೆ ಕೇಳಿದ್ದಕ್ಕೆ ನನ್ನ ಮೇಲೆಯೇ ಆರೋಪ ಮಾಡಿದರು ಎಂಬುದಾಗಿ ದೀಪಕ್ ಚಾಹರ್ ಆರೋಪಿಸಿದ್ದಾರೆ.

VISTARANEWS.COM


on

Deepak Chahar
Koo

ನವದೆಹಲಿ: ಭಾರತದ ವೇಗದ ಬೌಲರ್ ದೀಪಕ್ ಚಹರ್ (Deepak Chahar) ಇತ್ತೀಚೆಗೆ ಜನಪ್ರಿಯ ಆಹಾರ ವಿತರಣಾ ಪ್ಲಾಟ್ಫಾರ್ಮ್ ಜೊಮಾಟೊವನ್ನು ವಂಚಕ ಸಂಸ್ಥೆ ಎಂದು ಕರೆದಿರುವುದು ದೊಡ್ಡ ಸುದ್ದಿಯಾಗಿದೆ. ಜೊಮಾಟೊದ ಕಸ್ಟಮರ್​ ಕೇರ್​ಗೆ ಫೋನ್ ಮಾಡಿದರೆ, ಸುಳ್ಳು ಹೇಳುತ್ತಿದ್ದೀರಿ ಎಂದು ಆರೋಪಿಸಿದ್ದರು. ಇದರಿಂದ ಕೋಪಗೊಂಡ ಅವರು ಇಡೀ ವಿಷಯವನ್ನು ಸ್ಕ್ಟೀನ್ ಶಾಟ್ ಜತೆ ಟ್ವೀಟ್ ಮಾಡಿಕೊಂಡಿದ್ದಾರೆ.

ಫೆಬ್ರವರಿ 24, ಶನಿವಾರ ರಾತ್ರಿ ದೀಪಕ್ ಚಹರ್ ಈ ಪೋಸ್ಟ್ ಮಾಡಿದ್ದಾರೆ. “ಜೊಮಾಟೊ ಮೋಸ ಹಗರಣ ‘ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಜೊಮಾಟೊ ಡೆಲಿವರಿ ಅಪ್ಲಿಕೇಶನ್​​ನಲ್ಲಿ ಬುಕ್ ಮಾಡಿದ್ದ ಆಹಾರ ಮನೆಗೆ ತಲುಪಿಲ್ಲ. ಆದರೆ, ತಲುಪಿಸಲಾಗಿದೆ ಎಂದು ಬಂದಿದೆ. ಕಸ್ಟಮರ್​​ ಕೇರ್​​ಗೆ ಫೋನ್​ ಮಾಡಿದರೆ ನನ್ನನ್ನೇ ಸುಳ್ಳುಗಾರ ಎಂದು ಆರೋಪಿಸಿದರು ಎಂದು ದೀಪಕ್ ಬರೆದುಕೊಂಡಿದ್ದಾರೆ.

ಟ್ವೀಟ್ ಪೋಸ್ಟ್​​ ಮಾಡುವ ವೇಳೆ ದೀಪಕ್​ ಚಾಹರ್​​ ತಮ್ಮ ಅಭಿಮಾನಿಗಳಿಗೆ ಇದೇ ರೀತಿಯಲ್ಲಿ ವಂಚನೆ ಆಗಿದ್ದರೆ ಬರೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದರಿಂದಾಗಿ ಅವರ ಪೋಸ್ಟ್​​ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬರಲು ಆರಂಭಿಸಿದವು. ಒಬ್ಬೊಬ್ಬರಾಗಿಯೇ ಫುಡ್​ ಡೆಲಿವರಿ ಆ್ಯಪ್​ನಿಂದ ಆದ ಸಮಸ್ಯೆ ಬಗ್ಗೆ ಬರೆದುಕೊಂಡರು.

ಭಾರತದಲ್ಲಿ ಹೊಸ ವಂಚನೆ ಶುರವಾಗಿದೆ. @zomatoರಿಂದ ಆಹಾರವನ್ನು ಆರ್ಡರ್ ಮಾಡಲಾಯಿತು. ಆದರೆ ಆಹಾರ ತಲುಪಿಸಿಲ್ಲ. ಕೇಳಿದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳಿದರು. ಬಹಳಷ್ಟು ಜನರು ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. @zomato ಟ್ಯಾಗ್ ಮಾಡಿ ಮತ್ತು ನಿಮ್ಮ ಕಥೆಯನ್ನು ಹೇಳಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

ಜೊಮ್ಯಾಟೊದಿಂದ ಕ್ಷಮೆ


ಜೊಮಾಟೊ ಕಂಪನಿಯು ದೀಪಕ್ ಚಹರ್ ಅವರ ಪೋಸ್ಟ್​​ನ ತಕ್ಷಣ ಪ್ರತಿಕ್ರಿಯಿಸಿತ್ತು. ಹಾಯ್ ದೀಪಕ್, ನಿಮ್ಮ ಅನುಭವದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತೇವೆ. ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನಾವು ಅಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತ್ವರಿತ ಪರಿಹಾರವನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿತ್ತು. ಅದಕ್ಕೆ ಉತ್ತರಿಸಿದ ಚಹರ್, ಕಂಪನಿಯು ಒದಗಿಸುವ ಮರುಪಾವತಿಯ ಮೊತ್ತದಲ್ಲಿ ಹಸಿವನ್ನು ನೀಗಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಬಹಳಷ್ಟು ಜನರು ಈ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಬರೆಯಬೇಕಾಯಿತು. ಆರ್ಡರ್​​ ಹಣವನ್ನು ಹಿಂದಿರುಗಿಸಲು ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂಬುದನ್ನು ಎತ್ತಿ ತೋರಿಸಲು ಬಯಸುತ್ತೇನೆ. ಹಸಿವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ದೀಪಕ್ ಚಹರ್ ಕೆಲವು ತಿಂಗಳುಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಸ್ಟಾರ್ ವೇಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 17 ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Continue Reading
Advertisement
Road Accident in Anekal
ಬೆಂಗಳೂರು ಗ್ರಾಮಾಂತರ8 seconds ago

Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

PM Narendra Modi inaugurates 2000 railway projects worth RS 41,000 crore
ಪ್ರಮುಖ ಸುದ್ದಿ7 mins ago

PM Narendra Modi: 2000 ರೈಲ್ವೆ ಪ್ರಾಜೆಕ್ಟ್‌ಗಳಿಗೆ ಪಿಎಂ ಚಾಲನೆ; ಜೂನ್‌ನಿಂದ 3ನೇ ಅವಧಿಗೆ ಸರ್ಕಾರ ಎಂದ ಮೋದಿ

Kannada Name Board Deadline
ಬೆಂಗಳೂರು11 mins ago

Kannada Name Board : ಕನ್ನಡ ನಾಮಫಲಕಕ್ಕೆ ಫೆ. 28 ಕೊನೇ ದಿನ; ಇನ್ನೂ ಬಳಸದವರಿಗೆ ನೋಟಿಸ್‌

CM Siddaramaiah Inauguration of job fair and announces setting up of new GTTC
ಉದ್ಯೋಗ14 mins ago

Job Fair: ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟನೆ; ಹೊಸದಾಗಿ GTTC ಸ್ಥಾಪನೆ: ಸಿಎಂ ಮಹತ್ವದ ಘೋಷಣೆ

cricket
ಕ್ರಿಕೆಟ್18 mins ago

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

Man murders old woman to pay off debts
ಬೆಂಗಳೂರು20 mins ago

Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

Shah Rukh Khan's Adorable Reaction To Allu Arjun's Son
ಬಾಲಿವುಡ್22 mins ago

Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

Crowd mistakes Arabic words as Quran Verses on the kurta and Pak Women mobbed
ವಿದೇಶ33 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

aadhar update
ಪ್ರಮುಖ ಸುದ್ದಿ43 mins ago

Aadhaar Card: ಗಮನಿಸಿ; ಆಧಾರ್‌ ಕಾರ್ಡ್‌ ಉಚಿತ ತಿದ್ದುಪಡಿಗೆ ಇನ್ನು ಕೆಲವು ದಿನ ಮಾತ್ರ ಅವಕಾಶ

Nitasha Kaul
ದೇಶ52 mins ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Crowd mistakes Arabic words as Quran Verses on the kurta and Pak Women mobbed
ವಿದೇಶ33 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ9 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

ಟ್ರೆಂಡಿಂಗ್‌