Site icon Vistara News

MP BY Raghavendra | ಮೋದಿಯವರ ಮಾನವೀಯ ಕಾರ್ಯ ಜನರಿಗೆ ತಲುಪಿಸಿ ಎಂದ ಸಂಸದ ಬಿ.ವೈ ರಾಘವೇಂದ್ರ

B. Y Raghavendra District Executive Committee Meeting

ಶಿವಮೊಗ್ಗ: ಕೇಂದ್ರ ಸರ್ಕಾರ ಆಡಳಿತ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಹಾಗೂ ಶ್ರೀಸಾಮಾನ್ಯರ ಏಳಿಗೆಗಾಗಿ ಶ್ರಮಿಸಿದ್ದಾರೆ. ಹಲವು ಜನಪರ ಮಾನವೀಯ ಕಾರ್ಯಗಳನ್ನು (Humanitarian Work) ಕೂಡ ಪ್ರಧಾನಿಯವರು ನೀಡಿದ್ದಾರೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಜನರಿಗೆ ತಲುಪಿಸಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಕರೆ ನೀಡಿದರು.

ಶಿವಮೊಗ್ಗ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಸಿಗಲು ಅಯುಷ್ಮಾನ್ ಭಾರತ ಯೋಜನೆ, ಔಷಧಗಳಿಗಾಗಿ ಜನರಿಕ್ ಮೆಡಿಸಿನ್ ಮಳಿಗೆಗಳು, ಬಿಪಿಎಲ್ ಕುಟುಂಬಗಳಿಗೆ ಇನ್ನೂ ಒಂದು ವರ್ಷ ಆಹಾರ ಧಾನ್ಯವನ್ನು ಒದಗಿಸಲು ಪ್ರಧಾನ ಮಂತ್ರಿ ಅನ್ನ ಯೋಜನೆಯ ವಿಸ್ತರಣೆ, ರೈತರ ಕಲ್ಯಾಣಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ದೇಶದಲ್ಲೇ ಔಷಧವನ್ನು ತಯಾರಿಸಿ ಪ್ರಾಣವನ್ನು ರಕ್ಷಿಸಿದ್ದಾರೆ. ಈ ರೀತಿಯ ಕಠಿಣ ಸಂದರ್ಭವನ್ನು ಎದುರಿಸಲು ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಪ್ಲಾಂಟ್, ದೇಶದ ರಕ್ಷಣೆ, ಸೈನಿಕರಿಗೆ ಬೇಕಾದ ಆಧುನಿಕ ಶಸ್ತ್ರಗಳು, ಯುದ್ಧ ಸಲಕರಣೆಗಳು ಹೀಗೆ ಹಲವಾರು ಕಾರ್ಯಗಳನ್ನು ನೀಡಿದ್ದಾರೆ ಎಂದರು.

ಸಭೆಯಲ್ಲಿ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಭಾರಿ ಮೋನಪ್ಪ ಭಂಡಾರಿ, ಸಹ ಪ್ರಭಾರಿ ಆರ್.ಡಿ.ಹೆಗಡೆ, ಎನ್.ಎಸ್. ಹೆಗಡೆ, ಶಾಸಕರು, ವಿವಿಧ ನಿಗಮ ಮಂಡಳಿ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ | Hindu Samavesha | ಮತ್ತೊಂದು ಹಿಂದು ಸಮಾವೇಶಕ್ಕೆ ಸಜ್ಜಾದ ಮಲೆನಾಡು; ಸಂಪೂರ್ಣ ಕೇಸರಿಮಯವಾದ ಶಿವಮೊಗ್ಗ

Exit mobile version