Site icon Vistara News

ಜಾನುವಾರು ಅಕ್ರಮ ಸಾಗಣೆ; ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಜಾನುವಾರು

ಶಿವಮೊಗ್ಗ: ಹೊಸನಗರ ತಾಲೂಕಿನ ನಿವಣೆ ಗ್ರಾಮದಲ್ಲಿ ಎರಡು ವಾಹನಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಜಯಕರ್ನಾಟಕ ಹಾಗೂ ಭಜರಂಗದಳದ ಕಾರ್ಯಕರ್ತರು ಹಿಡಿದು ಭಾನುವಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಲ್ಲುಕೊಪ್ಪ ಗ್ರಾಮದ ಕೃಷ್ಣಮೂರ್ತಿ, ಎಣ್ಣೆನೋಡ್ಲು ಗ್ರಾಮದ ಮಹಮ್ಮದ್ ಇರ್ಫಾನ್ ಮತ್ತು ಮಹಮ್ಮದ್ ವಸೀಮ್ ಬಂಧಿತರು. ಹುಂಚಾ ಕಡೆಯಿಂದ ಎರಡು ಗೂಡ್ಸ್ ಆಟೋ (KA -15-A 4206) ಮತ್ತು (KA-27-C 1446)ಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸೊನಲೆ ಮಾರ್ಗವಾಗಿ ಆರೋಪಿಗಳು ಸಾಗಾಟ ಮಾಡುತ್ತಿದ್ದರು. ಜಯ ಕರ್ನಾಟಕ ಸಂಘಟನೆ ಹಾಗೂ ಹಿಂದೂಪರ ಸಂಘಟನೆಗಳು ವಾಹನಗಳನ್ನು ಅಡ್ಡಗಟ್ಟಿ ಆರೋಪಿಗಳು ಹಾಗೂ 9 ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾನುವಾರುಗಳನ್ನು ಶಿವಮೊಗ್ಗದ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.

ಕಾರ್ಯಾಚರಣೆಯಲ್ಲಿ ಭಜರಂಗದಳದ ಅಧ್ಯಕ್ಷ ದೇವರಾಜ್ ಕೆರೆಹಳ್ಳಿ, ಜಯ ಕರ್ನಾಟಕ ಸಂಘಟನೆಯ ಸಿರಿ, ಸುನೀಲ್ ಆನೆಗದ್ದೆ, ಗಿರೀಶ್ ವಾಲೆಮನೆ, ಪ್ರವೀಣ್ ಶೆಟ್ಟಿ ಹಿಂದೂಪರ ಸಂಘಟನೆಯ ವಿನಾಯಕ್ ಶೆಟ್ಟಿ, ಅರ್ಜುನ್ ಶಿಂಧೆ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ | ಮಲಿನಗೊಂಡ ತುಂಗಭದ್ರಾ: ಅಕ್ಷರಶಃ ಚರಂಡಿಯಂತಾದ ಪವಿತ್ರ ಜಲ

Exit mobile version