Site icon Vistara News

ಶಿವಮೊಗ್ಗದಲ್ಲಿ 10ನೇ ಶತಮಾನದ ತೀರ್ಥಂಕರ ಮೂರ್ತಿ ಪತ್ತೆ

tirthankara

ಶಿವಮೊಗ್ಗ: ಶಿವಮೊಗ್ಗ ತಾಲೂಕಿನಲ್ಲಿ 10ನೇ ಶತಮಾನದ್ದು ಎನ್ನಲಾದ ಪಾರ್ಶ್ವನಾಥ ತೀರ್ಥಂಕರ ಮೂರ್ತಿ ಪತ್ತೆಯಾಗಿದೆ.

ಶಿವಮೊಗ್ಗ ತಾಲೂಕಿನ ಕುಂಸಿ ಹೋಬಳಿ ದ್ಯಾವಿನಕೆರೆ (ರಾಗಿಹೊಸಳ್ಳಿ)ಯಲ್ಲಿ ರೈತ ಬುದ್ಧಿವಂತ ಉಮೇಶ್ ಎನ್ನುವವರು ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣ ಎತ್ತುವಾಗ ಈ ಮೂರ್ತಿ ದೊರಕಿದೆ. ಮೂರ್ತಿಯು 2.4 ಅಡಿ ಎತ್ತರ, 1.4 ಅಗಲ ಇದೆ. ಮೂರ್ತಿಯ ಪೀಠವು ಎರಡು ಅಡಿ ಅಗಲವಿದೆ.

ಈ ಪೀಠದಲ್ಲಿ ಜಿನಮೂರ್ತಿಯ ಕುರಿತು ಧರ್ಮಪಾಲನೆಯಲ್ಲಿ, ದ್ರವಿಳಸಂಗ (ದಿಗಂಬರ), ನಂದಿಸಂಗ ಆರುಗಳಾನ್ವಯದ ಅನುಯಾಯಿ, ಭಕ್ತ ಸನ್ನತಿ ದೇವನು ತಾನು ಕೈಗೊಂಡ ಉಪವಾಸ ವ್ರತದ ನೆನಪಿಗೆ ಈ ಮೂರ್ತಿಯನ್ನು ಮಾಡಿಸಿದನೆಂದು ಉಲ್ಲೇಖಿಸಲಾಗಿದೆ. ಹಳೆಗನ್ನಡದಲ್ಲಿ ಕೆತ್ತಲಾಗಿದೆ ಎಂದು ಇತಿಹಾಸ ಸಂಶೋಧಕ ದಿಲೀಪ್‌ ನಾಡಿಗ್ ʻವಿಸ್ತಾರ ನ್ಯೂಸ್’ಗೆ ತಿಳಿಸಿದ್ದಾರೆ.

ಇತಿಹಾಸ ಉಪನ್ಯಾಸಕ ಡಾ.ಮ.ಸಕಲೇಶ್‌ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅವರು ಈ ಮೂರ್ತಿಯನ್ನು ಪರಿಶೀಲಿಸಿದ್ದಾರೆ. ಜೆಸಿಬಿಯ ಹೊಡೆತಕ್ಕೆ ಮೂರ್ತಿಯ ಮುಖ ಊನಗೊಂಡಿದೆ.

Exit mobile version