Site icon Vistara News

Dr. Dhananjaya Sarji | ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಬಿಜೆಪಿಗೆ ಸೇರ್ಪಡೆ ಖಚಿತ

Dr. Dhananjaya Sarji

ಶಿವಮೊಗ್ಗ: ನಗರದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ (Dr. Dhananjaya Sarji) ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿದೆ. ಎರಡು ತಿಂಗಳ ಹಿಂದೆ ಡಾ.ಸರ್ಜಿ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿ ಸೇರಲು ಅವರು ಒಲವು ತೋರಿದ್ದಾರೆ. ಕಮಲ ಪಕ್ಷ ಸೇರ್ಪಡೆಗೆ ಡಿಸೆಂಬರ್‌ ನಾಲ್ಕರ ದಿನಾಂಕ ಕೂಡ ನಿಗದಿಯಾಗಿದೆ. ಇವರ ನಿರ್ಧಾರ ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಬಿಜೆಪಿ ಸೇರ್ಪಡೆಗೆ ಸರ್ಜಿ ಒಪ್ಪಿಗೆ ನೀಡಿದ್ದಾರೆ. ಮಾಜಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸೇರಲು ಸಹಮತ ವ್ಯಕ್ತಪಡಿಸಿದ್ದಾರೆ. ವೈದ್ಯ ಡಾ.ಧನಂಜಯ ಸರ್ಜಿ ಆರ್‌ಎಸ್‌ಎಸ್‌ನ ವಿಕಾಸ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. 15 ದಿನಗಳ ಹಿಂದೆ ವಿಕಾಸ ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ | ಇತ್ತ ಜೆಡಿಎಸ್‌ ಜತೆಗೆ ನಂಟು; ಅತ್ತ ಜಮೀರ್‌ ಅಹ್ಮದ್‌ ಜತೆಗೂ ಮಾತು: ಕುತೂಹಲ ಕೆರಳಿಸಿದ KCR ನಡೆ

ಎರಡು ತಿಂಗಳ ಹಿಂದೆ ಡಾ.ಸರ್ಜಿ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜೆಡಿಎಸ್‌ನಿಂದ ಆಹ್ವಾನ ಬಂದಿತ್ತು. ಕಾಂಗ್ರೆಸ್ ವಲಯದಲ್ಲೂ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಬಿಜೆಪಿ ಟಿಕೆಟ್‌ ಪಡೆಯಲು ಒಲವು ಹೊಂದಿದ್ದ ಡಾ.ಸರ್ಜಿ, ಟಿಕಟ್‌ ಸಿಗದಿದ್ದರೆ ಪಕ್ಷೇತರನಾಗಿಯಾದರೂ ಸ್ಪರ್ಧಿಸುವೆ ಎಂದಿದ್ದರು.

ಮಕ್ಕಳ ತಜ್ಞರಾಗಿ ಖ್ಯಾತಿ ಗಳಿಸಿರುವ ಇವರು ಆರ್‌ಎಸ್‌ಎಸ್, ಬಿಜೆಪಿ ಒಡನಾಟ ಹೊಂದಿದ್ದರು. ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಕಾಳಜಿಯುಳ್ಳ ಇವರು ವಿವಿಧ ಸಂಘ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆಯನ್ನೂ ನೀಡಿದ್ದಾರೆ. ಶಿವಮೊಗ್ಗ ಕ್ಷೇತ್ರ ರಾಜಕೀಯಕ್ಕೆ ರಾಜಕೀಯೇತರ ವ್ಯಕ್ತಿಯೊಬ್ಬರು ಆಗಮಿಸುತ್ತಿರುವುದು ಸ್ಥಳೀಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ | ವಿಸ್ತಾರ ವಿಶೇಷ | ಡಿಸೆಂಬರ್‌ ಅಂತ್ಯಕ್ಕೆ ಶ್ರೀರಾಮ ಸೇನೆ 25 ಅಭ್ಯರ್ಥಿಗಳ ಘೋಷಣೆ: BJP ನಿದ್ದೆಗೆಡಿಸಿದ ಮುತಾಲಿಕ್‌ ನಡೆ

Exit mobile version