Site icon Vistara News

ಜಮೀನು ಮಾರಾಟ ವಿಚಾರಕ್ಕೆ ಉದ್ಯಮಿಯ ಕಿಡ್ನಾಪ್‌

ಕಿಡ್ನ್ಯಾಪ್

ಶಿವಮೊಗ್ಗ: ಜಮೀನು ಮಾರಾಟ ವಿಚಾರದಲ್ಲಿ ಉದ್ಯಮಿಯನ್ನು ಕಿಡ್ನಾಪ್‌ ಮಾಡಲಾಗಿದ್ದು, ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕಿಡ್ನಾಪ್‌ ಆಗಿ ತಪ್ಪಿಸಿಕೊಂಡು ಬಂದ ವ್ಯಕ್ತಿಯ ದೂರಿನ ಆಧಾರದಲ್ಲಿ ಚಂದನ್ ಎಂಬವನನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಶಿವಮೊಗ್ಗದ ಜೆಪಿಎನ್ ರಸ್ತೆಯ 2 ನೇ ತಿರುವಿನಲ್ಲಿ ಧನ್ವಂತರಿ ಕ್ಲಿನಿಕ್‌ ನಡೆಸಿಕೊಂಡು ಹೋಗುತ್ತಿದ್ದ ರಾಜಾರಾಮ್ ಎಂಬ 45 ವರ್ಷದ ವ್ಯಕ್ತಿಯನ್ನು ಅಪಹರಿಸಲಾಗಿತ್ತು. ಆತನನ್ನು ಭದ್ರಾವತಿಯ ಜಮೀನಿನ ಶೆಡ್ ಒಂದರಲ್ಲಿ ಕೂಡಿ ಹಾಕಿ ಜಮೀನಿನ ಅಗ್ರಿಮೆಂಟ್‌ ತಮ್ಮ ತಮ್ಮ ಹೆಸರಿಗೆ ಬರೆದುಕೊಂಡು ಅದರ ಕಮಿಷನ್ ಹಣವನ್ನು ನಾವು ಪಡೆಯುತ್ತೇವೆ ಎಂದು ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ | ತಪ್ಪು ಮಾಡದಿದ್ದರೂ ಬೀಳುತ್ತೆ ಟ್ರಾಫಿಕ್‌ ದಂಡ !: ಪಾರಾಗಲು ಇಲ್ಲಿವೆ 6 ಸೂತ್ರಗಳು

ಮೇ 16 ರಂದು ಕಿಡ್ನಾಪ್ ನಡೆದಿದ್ದು, ಮೇ 20 ರಂದು ಗ್ರಾಮಸ್ಥರ ಸಹಾಯದಿಂದ ರಾಜಾರಾಂ ತಪ್ಪಿಸಿಕೊಂಡು ಬಂದಿದ್ದಾರೆ. ಕೂಡಿಹಾಕಿದ್ದ ಸ್ಥಳ ಕಾಳಿಂಗನ ಹಳ್ಳಿ ಎಂದು ಪತ್ತೆಯಾಗಿದ್ದು, ಕೂಡಿಹಾಕಿದ್ದ ಜಮೀನು ಚಂದ್ರಪ್ಪನವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ತನಗೆ ಮದುವೆಯಾಗಿಲ್ಲ. ಒಡಹುಟ್ಟಿದವರು ಯಾರೂ ಇಲ್ಲ. ಇದನ್ನು ಗಮನಿಸಿದ ಚಂದನ್ ಮತ್ತು ಇತರೆ ಇಬ್ಬರು ಶಿವಮೊಗ್ಗದ ಜೆಪಿಎನ್ ರಸ್ತೆಯಲ್ಲಿರುವ ವೈದ್ಯ ನಂದಕಿಶೋರ್ ರವರ ಮೆಡಿಕಲ್ ಶಾಪ್ ಬಳಿ ಕಾರೊಂದರಲ್ಲಿ ಅಪಹರಣ ಮಾಡಿದ್ದರು. ಕೈಕಾಲು ಕಟ್ಟಿ, ಕಣ್ಣಿಗೆ ಪಟ್ಟಿಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದರು. ನಂತರ ಭದ್ರಾವತಿಯ ಜಮೀನಿನಲ್ಲಿ ಕೂಡಿ ಹಾಕಿ ಊಟ ತಿಂಡಿ ನೀಡದೆ ಹಿಂಸೆ ನೀಡಿದರು. ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಜಾರಾಂ ದೂರಿನಲ್ಲಿ ಆರೋಪಿಸಿದ್ದಾರೆ.

ಚಂದನ್ ಬಿಜೆಪಿಯ ಕಾರ್ಯಕರ್ತನಾಗಿದ್ದು ಆತನಿಗೆ ಶಶಿ ಮತ್ತು ಗೋವಿಂದ ಮತ್ತು ಇನ್ನೊಬ್ಬ ಸಾತ್ ನೀಡಿದ್ದಾರೆ ಎಂದು ಆರೋಪಿಸಿ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ರಾಜಾರಾಂ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಚಂದನ್ನನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.

ಇದನ್ನೂ ಓದಿ | ಹೈದರಾಬಾದ್‌ ರೇಪ್‌ ಕೇಸ್‌ ಎನ್‌ಕೌಂಟರ್‌ ಉದ್ದೇಶ ಪೂರ್ವಕ ಎಂದ ಸುಪ್ರೀಂಕೋರ್ಟ್‌ ರಚಿತ ಆಯೋಗ

Exit mobile version