ಶಿಕಾರಿಪುರ: ನಗರದ ಭವಾನಿ ರಾವ್ ಕೇರಿಯ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.15ರಿಂದ 21ರವರೆಗೆ ಬೆಳಗ್ಗೆ ಹಾಗೂ ಸಂಜೆ 5.30ರಿಂದ 7 ಗಂಟೆಯವರೆಗೆ ಉಚಿತ ಯೋಗ ಸಪ್ತಾಹ ನಡೆಸಲಾಗುವುದು ಎಂದು ಜಡೆ ಸಂಸ್ಥಾನದ ಮಹಾಂತ ಸ್ವಾಮೀಜಿ ಹೇಳಿದ್ದಾರೆ.
ಮೊದಲನೇ ದಿನದ ಯೋಗ ಸಾನ್ನಿಧ್ಯವನ್ನು ಜಡೆ ಶ್ರಿಗಳು ವಹಿಸುತ್ತಿದ್ದು, ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಆಗಮಿಸಲಿದ್ದಾರೆ. ಸಂಜೆಯ ಕಾರ್ಯಕ್ರಮಕ್ಕೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಭಾಗವಹಿಸಲಿದ್ದಾರೆ. ತರಬೇತುದಾರರಾಗಿ ಅಪರ್ಣ ಗುರು ಮೂರ್ತಿ, ಅರವಿಂದ, ರಾಮಾಜೋಯಿಸ್, ದಿಶಾ, ಭೋಜರಾಜ್ ಕೋರಿ ನಡೆಸಿಕೊಡಲಿದ್ದಾರೆ. ಧ್ಯಾನ, ಯೋಗಾಸನ, ಯೋಗ ಮುದ್ರೆ, ಸ್ತ್ರೀಯರ ಸಮಸ್ಯೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಉಪನ್ಯಾಸ ಮತ್ತು ಕ್ಯಾನ್ಸರ್ ಬಗ್ಗೆ ಮಾಹಿತಿ ದೊರೆಯಲಿದೆ. ಕೊನೆಯ ದಿನ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶೇಷ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪ್ರಜಾವಾಣಿಯ ಶಾಂತಕುಮಾರ್ ಸೇರಿ 6 ಸಾಧಕರಿಗೆ ಯೋಗ ರತ್ನ ಪ್ರಶಸ್ತಿ