Site icon Vistara News

Murder Case : ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ; ಸ್ನೇಹಿತರೇ ಕೊಂದರೇ?

Murder Case youth Killed1

ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ಯುವಕನೊಬ್ಬನನ್ನು ಭೀಕರವಾಗಿ ಸುಟ್ಟು ಹಾಕಿದ (Youth Burnt and Killed) ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿದೆ.

ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಘಟನೆ ನಡೆದಿದ್ದು, ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಕೊಲೆಯಾದ ದುರ್ದೈವಿ.

ಇನ್ನೋವಾ ಕಾರಿನ ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವೀರೇಶ್‌ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹವು ಸಂಪೂರ್ಣ ಸುಟ್ಟು ಕರಕಲಾಗಿದೆ.

ಕೆಲವು ಪರಿಚಿತ ವ್ಯಕ್ತಿಗಳೇ ವೀರೇಶ್‌ಗೆ ಫೋನ್‌ ಮಾಡಿ ಕರೆದುಕೊಂಡು ಹೋಗಿದ್ದರು. ಇನ್ನೊಬ್ಬ ಸ್ನೇಹಿತನ ಇನ್ನೋವಾ ಕಾರಿನಲ್ಲಿ ವೀರೇಶ್‌ ಹೋಗಿದ್ದರು. ತೋಗರ್ಸಿಗೆ ಹೋಗುತ್ತಿದ್ದೇನೆ, ಸ್ನೇಹಿತರು ಕರೆದಿದ್ದಾರೆ ಎಂದು ಹೇಳಿ ವೀರೇಶ್‌ ಹೋಗಿದ್ದರು. ಆದರೆ, ಈಗ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Murder Case : ಪ್ರೀತಿಸಿದ ಹುಡುಗಿನಾ ಚುಡಾಯಿಸಿದ್ದಕ್ಕೆ ಕೊಚ್ಚಿ ಕೊಲೆ ಮಾಡಿದ ಯುವಕ

ಕಾರಿನ ಡೋರ್‌ ಬಡಿದು ನಿಮ್ಹಾನ್ಸ್‌ ನೌಕರ ಸಾವು; ಯುವಕರಿಬ್ಬರ ಜೀವ ತೆಗೆದ ಬೈಕ್‌

ಬೆಂಗಳೂರು/ಕೋಲಾರ: ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ದಾರಣವಾಗಿ (Road Accident ) ಮೃತಪಟ್ಟಿದ್ದಾರೆ. ಬೆಂಗಳೂರಿನ ತಿಲಕ್‌ನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ವೆಂಕಟೇಶ್ (53) ಮೃತ ದುರ್ದೈವಿ.

ವೆಂಕಟೇಶ್‌ ಅವರು ನಿಮ್ಹಾನ್ಸ್‌ನಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದರು. ನಿಮ್ಹಾನ್ಸ್‌ ಕಡೆಯಿಂದ ವೆಂಕಟೇಶ್ ಮನೆಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಕಾರಿನ ಡೋರ್ ಅನ್ನು ದಿಢೀರ್ ತೆಗೆದಿದ್ದಾರೆ. ಪರಿಣಾಮ ಕಾರ್‌ ಡೋರ್‌ ಬಡಿದು ವೆಂಕಟೇಶ್ ತಲೆಗೆ ಗಂಭೀರ ಗಾಯವಾಗಿತ್ತು.

ಕೂಡಲೇ ಸ್ಥಳೀಯರೆಲ್ಲರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ವೆಂಕಟೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೈಕೊಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version