ರಿಪ್ಪನ್ ಪೇಟೆ: ಪಟ್ಟಣದ ಸಾಗರ ರಸ್ತೆಯಲ್ಲಿನ ಭಗತ್ ಸಿಂಗ್ ನಗರದ ನಿವಾಸಿ, ಕನ್ನಡ ಪರ ಹೋರಾಟಗಾರ (Pro Kannada activist), ಸಮಾಜ ಸೇವಕ (Social Worker) ಹಾಗೂ ಪುನೀತ್ ರಾಜಕುಮಾರ್ (Puneeth Rajkumar) ಅಭಿಮಾನಿಗಳ ಸಂಘದ ಅಧ್ಯಕ್ಷ ವಿನಯ್ ಶೆಟ್ಟಿ (26) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ.
ಕನ್ನಡಪರ ಸಂಘಟನೆಗಳಲ್ಲಿ ಹಾಗೂ ಸಮಾಜ ಸೇವೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ (Puneeth Rajkumar Fans Association) ಅಧ್ಯಕ್ಷ ವಿನಯ್ ಶೆಟ್ಟಿಗೆ ಭಾನುವಾರ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡಿದೆ.
ಹೀಗಾಗಿ ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಬಳಿಕ ಪರೀಕ್ಷೆ ಮಾಡಿದ ವೈದ್ಯರು, ವಿನಯ್ ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಮೃತ ವಿನಯ್ ಶೆಟ್ಟಿ ತಂದೆ -ತಾಯಿ, ಒಬ್ಬರು ಸಹೋದರಿ, ಒಬ್ಬರು ಸಹೋದರ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.
ಇದನ್ನೂ ಓದಿ: BJP Karnataka : ಒಂದು ಸಮುದಾಯವನ್ನು ಮಾತ್ರವೇ ಓಲೈಸುವ ಸಿಎಂ ಸಿದ್ದರಾಮಯ್ಯ; ಬಿಜೆಪಿ ಸರಣಿ ಟ್ವೀಟ್
ಸಂತಾಪ
ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕನ್ನಡಪರ ಸಂಘಟನೆಗಳ ಹೋರಾಟಗಾರ ಹಾಗೂ ಸಮಾಜ ಸೇವಕ ವಿನಯ್ ಶೆಟ್ಟಿ ನಿಧನಕ್ಕೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಂಡಿ ರಾಮಚಂದ್, ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ, ಆಶ್ರಿತಾ ಸಂತೋಷ ಕನ್ನಡ ಕಸ್ತೂರಿ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಉಲ್ಲಾಸ್, ನಿಕಟ ಪೂರ್ವ ಅಧ್ಯಕ್ಷ ಮೆಣಸೆ ಆನಂದ, ಪ್ರಧಾನ ಕಾರ್ಯದರ್ಶಿಗಳಾದ ಆಸಿಫ್ ಭಾಷಾ ಸಾಬ್, ಬಿಎಸ್ಎನ್ಎಲ್ ಶ್ರೀಧರ್, ಫ್ಯಾನ್ಸಿ ರಮೇಶ್, ಕೆರೆಹಳ್ಳಿ ರವಿ, ಆರ್. ಡಿ. ಶೀಲಾ, ಲೇಖನ, ಸ್ವಾತಿ, ಸೀಮಾ, ಸೇರಿದಂತೆ ಇನ್ನಿತರರು ಸಂತಾಪವನ್ನು ಸೂಚಿಸಿದ್ದಾರೆ.