ಹೊಸನಗರ: ಸಿಗಂದೂರಿನಿಂದ ಭೀಮಸಮುದ್ರಕ್ಕೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ (Road Accident) ಪರಿಣಾಮ ಕಾರು ಚಾಲಕನ ಸಹಿತ ವ್ಯಕ್ತಿಯೊಬ್ಬ ತೀವ್ರಗಾಗಿ ಗಾಯಗೊಂಡ ಘಟನೆ ಶುಕ್ರವಾರ (ಡಿ.೨೩) ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದೆ.
ಹೊಸನಗರ ಪಟ್ಟಣದ ಮಾವಿನಕೊಪ್ಪದಲ್ಲಿ ಕೃಷಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿ ಖಾಸಗಿ ಬಸ್‌ನಿಂದ ಇಳಿದು ಕಾರಿಗೆ ಅಡ್ಡ ಬಂದ ಕಾರಣ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಮಳವಳ್ಳಿ ವಾಸಿ ಶೇಖರ (45) ಕಾರಿಗೆ ಅಡ್ಡ ಬಂದ ವ್ಯಕ್ತಿ. ಚಿತ್ರದುರ್ಗ ಜಿಲ್ಲೆ ಭೀಮಸಮುದ್ರ ಮೂಲಕ ಕೆಎ-16-ಸಿ-9400 ಸ್ವಿಫ್ಟ್ ಕಾರು ಸಿಗಂದೂರು ದೇವಿ ದರ್ಶನ ಮಾಡಿ ವಾಪಸಾಗುವ ವೇಳೆ ಘಟನೆ ಸಂಭವಿಸಿದೆ.
ಇದನ್ನೂ ಓದಿ | Web series | ಛಾಪಾ ಹಗರಣ ಆರೋಪಿ ತೆಲಗಿ ಬದುಕಿನ ಕಥೆ ಹೇಳುವ ಸ್ಕ್ಯಾಮ್ 2003 ವೆಬ್ ಸೀರಿಸ್ ತಡೆಗೆ ಕೋರ್ಟ್ ನಕಾರ
ಕಾರು ಚಾಲಕ ಚಂದ್ರಪ್ಪ ಅವರ ತಲೆಗೆ ಪೆಟ್ಟಾಗಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕಾರಿಗೆ ಅಡ್ಡಬಂದ ವ್ಯಕ್ತಿ ಶೇಖರ್ ಅವರ ತಲೆಗೆ ತೀವ್ರ ತರಹದ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನಿಸಲಾಗಿದೆ.
ಅಪಘಾತಕ್ಕೆ ಅವೈಜ್ಞಾನಿಕ ರಸ್ತೆ ಡಿವೈಡರ್ ಅಳವಡಿಕೆ ಹಾಗೂ ಸೂಕ್ತ ಸೂಚನಾ ಫಲಕ ಇಲ್ಲದಿರುವುದು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Road accident | ತುಮಕೂರು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ದೇವಾಲಯಕ್ಕೆ ತೆರಳುತ್ತಿದ್ದ ಅರ್ಚಕ ಬಲಿ