ಶಿವಮೊಗ್ಗ: ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ತಂದೆಯೊಂದಿಗೆ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದ ನಗರದ ಸಿ.ಎಲ್. ರಂಗೂಬಾಯಿ (92) ಶನಿವಾರ ನಿಧನರಾಗಿದ್ದಾರೆ.
ಅವರು ಬೆಂಗಳೂರಿನ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ರಂಗೂಭಾಯಿ ಅವರು ಶಿವಮೊಗ್ಗ ನಗರದ ಬಿಬಿ ರಸ್ತೆಯ ನಿವಾಸಿ, ಖ್ಯಾತ ನ್ಯಾಯವಾದಿ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮಾಜಿ ಅಧ್ಯಕ್ಷ ಆರ್ ಕೆ ಜಯತೀರ್ಥಾಚಾರ್ ರವರ ಪುತ್ರಿ.
ಇದನ್ನೂ ಓದಿ| ಬೇಲೂರು ಚೆನ್ನಕೇಶವ ದೇವಾಲಯದ ಅರ್ಚಕರು ನಿಧನ
ವಿದ್ಯಾರ್ಥಿ ದೆಸೆಯಿಂದಲೇ ತಂದೆಯೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಸಿ.ಎಲ್. ರಂಗೂಬಾಯಿ ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕೂಡ ಭಾಗವಹಿಸಿದ್ದರು. ಮಹಾತ್ಮ ಗಾಂಧಿ ಅವರು ಈ ಚಳವಳಿಯನ್ನು ಮುಂಬಯಿಯಲ್ಲಿ ತಮ್ಮ 50 ಮಂದಿ ಬೆಂಬಲಿಗರೊಂದಿಗೆ ಆರಂಭಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಸಿ.ಎಲ್. ರಂಗೂಬಾಯಿ ಜೈಲುಶಿಕ್ಷೆಯನ್ನು ಅನುಭವಿಸಿದ್ದರು.
ಇದನ್ನೂ ಓದಿ| ಕಿರಣ್ ಮಜುಂದಾರ್ ಶಾ ತಾಯಿ ಯಾಮಿನಿ ಮಜುಂದಾರ್ ನಿಧನ