ಶಿವಮೊಗ್ಗ: ಶಿವಮೊಗ್ಗ (Shimoga News) ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಗುರುವಾರ ಸಂಜೆ (ಡಿ.೧೫) ನಡೆಯಿತು.
2022 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 633 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಒಂದು ಕೊಲೆ, 5 ದರೋಡೆ, 24 ಸುಲಿಗೆ, 56 ಕನ್ನಕಳವು, 46 ಸಾಮಾನ್ಯ ಕಳವು, 4 ಜಾನುವಾರು ಕಳವು, 99 ವಾಹನ ಕಳವು ಹಾಗೂ 5 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 238 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 3,80,91,328 ರೂ. ಮೌಲ್ಯದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಕೆ ಮತ್ತು ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 4 ಸುಲಿಗೆ, 12 ಕನ್ನಕಳವು, 9 ಸಾಮಾನ್ಯ ಕಳವು ಮತ್ತು 20 ವಾಹನ ಕಳವು ಸೇರಿದಂತೆ ಒಟ್ಟು 45 ಪ್ರಕರಣಗಳನ್ನು ಸಹ ಪತ್ತೆ ಮಾಡಿ ಅಂದಾಜು ಮೌಲ್ಯ 51,79,875 ರೂ.ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
2022ನೇ ಸಾಲಿನ 238 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 45 ಪ್ರಕರಣಗಳು ಸೇರಿ ಒಟ್ಟು 283 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು 4,32,71,203 ರೂ. ಮೌಲ್ಯದ ಮಾಲುಗಳನ್ನು ಈ ವರ್ಷ ವಶ ಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ಇದನ್ನೂ ಓದಿ | Bear Attack | ಕರಡಿ ದಾಳಿಗೆ ಬಲಿಯಾದ ರೈತ; ಮೃತದೇಹ ಇಟ್ಟು ಕುಟುಂಬಸ್ಥರು, ರೈತರ ಪ್ರತಿಭಟನೆ