Site icon Vistara News

ಶಿವಮೊಗ್ಗ | ನಿಷೇಧಿತ ಸಂಘಟನೆಗಳ ಪರ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳಿಂದ ಗೋಡೆ ಬರಹ, ದೂರು ದಾಖಲು

wall writing

ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ನಿಷೇಧಿತ ಸಿಎಫ್‌ಐ ಸಂಘಟನೆಗೆ ಸೇರಿಕೊಳ್ಳಿ ಎಂದು ಪಟ್ಟಣದ ನಾನಾ ಕಡೆಗಳಲ್ಲಿ ಗೋಡೆ ಬರಹ ಗೀಚಿದ್ದಾರೆ. JOIN CFI ಎಂದು ಗೋಡೆ ಬರಹ ಬರೆದ ಕಿಡಿಗೇಡಿಗಳು

ಪಟ್ಟಣದ 9 ಕ್ಕೂ ಹೆಚ್ಚು ಕಡೆ ಗೋಡೆ ಬರಹಗಳನ್ನು ಪ್ರದರ್ಶಿಸಲಾಗಿದೆ. ಹಳೆ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್ ಮೇಲೆ, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬದ ಮೇಲೆ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬ, ಚಂದ್ರಪ್ಪ ಎಂಬುವರ ಮನೆಯ ಕ್ರಾಸ್ ನ ವಿದ್ಯುತ್ ಕಂಬದ ಮೇಲೆ

ಬಿಲಾಲ್ ಎಂಬುವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ ಮೇಲೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೆ ಬರಹದ ಕೃತ್ಯ ಎಸಗಲಾಗಿದೆ.

ಪೊಲೀಸರು ಗಸ್ತು ತಿರುಗುವಾಗ ಬೆಳಕಿಗೆ ಬಂದಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಸಿಎಫ್ಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ,ಪಿಎಫ್ಐನ ಅಂಗಸಂಸ್ಥೆ ಸಿಎಫ್ಐ ವಿದ್ಯಾರ್ಥಿ ಸಂಘಟನೆ ನಿಷೇಧಕ್ಕೀಡಾಗಿವೆ.

Exit mobile version