ರಿಪ್ಪನ್‌ಪೇಟೆ: ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕೃಷಿ (Agriculture) ಚಟುವಟಿಕೆ ಜ್ಞಾನವನ್ನು ವರ್ಗಾವಣೆ ಮಾಡುತ್ತಿದ್ದರು. ಆದರೆ ಬದಲಾದ ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕೃಷಿ ಪದ್ಧತಿಯ ಜ್ಞಾನವನ್ನು ರೈತರಿಗೆ ಹಂಚುವ ಕೆಲಸವನ್ನು ಈಗ ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಇರುವಕ್ಕಿ ಶಿವಪ್ಪನಾಯಕ ಕೃಷಿ ವಿವಿಯ ಕುಲಸಚಿವ ಹಾಗೂ ವಿಶೇಷಾಧಿಕಾರಿ ಡಾ. ಶಶಿಧರ (Shivamogga News) ಹೇಳಿದರು.
ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಇರುವಕ್ಕಿ ಕೃಷಿ ವಿವಿ, ಕೃಷಿ ಇಲಾಖೆ ಹೊಸನಗರ ಹಾಗೂ ಕೋಡೂರು, ಚಿಕ್ಕಜೇನಿ, ರಿಪ್ಪನ್‌ಪೇಟೆ, ಮಾರುತಿಪುರ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಚಟುವಟಿಕೆಯನ್ನು ತುಂಬಲು ವಿಶ್ವವಿದ್ಯಾಲಯವು ಗ್ರಾಮೀಣ ಭಾಗಗಳಲ್ಲಿ ಕೃಷಿ ಅನುಭವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾರ್ಯಾನುಭವ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಅಲ್ಲಿ ಗ್ರಾಮೀಣ ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿಯ ಅನುಭವಗಳನ್ನು ತಾವು ಪಡೆದುಕೊಂಡು ಇವರಲ್ಲಿರುವ ಸಲಹೆಗಳನ್ನು ಅವರಿಗೆ ನೀಡುತ್ತ ವೈಜ್ಞಾನಿಕ ಕೃಷಿ ಪದ್ಧತಿಯತ್ತ ಗಮನ ಹರಿಸುವಂತೆ ಪ್ರೇರೇಪಿಸುತ್ತಾರೆ ಎಂದರು.
ಕೃಷಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಯೋಗ್ಯ ಕೃಷಿ ವಿಜ್ಞಾನಿಗಳನ್ನಾಗಿ ರೂಪಿಸುವುದರ ಜತೆಗೆ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ತಿಳಿಸುತ್ತದೆ. ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯಲು ಸಲಹೆ ನೀಡಿದರು.
ಇದನ್ನೂ ಓದಿ: Chamarajanagar News : ಜೋಳದ ಬೆಳೆ ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಕೃಷಿಮೇಳ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸುಮಾರು ಎರಡುವರೆ ತಿಂಗಳುಗಳ ಕಾಲ ಗ್ರಾಮೀಣ ಭಾಗದಲ್ಲಿ ಅಧ್ಯಯನ ನಡೆಸಿ ಇಲ್ಲಿನ ರೈತ ಮಹಿಳೆಯರಿಗೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ತಯಾರಿಸಲು ಮಾರ್ಗದರ್ಶನ ಮಾಡಿದ್ದಾರೆ. ಹಂತಹಂತವಾಗಿ ಮಾಹಿತಿ ನೀಡುತ್ತ ಕೃಷಿಯಲ್ಲಿಯೂ ಲಾಭವಿದೆ ಎನ್ನುವುದನ್ನು ರೈತರಿಗೆ ತೋರಿಸಿದ್ದಾರೆ ಎಂದು ತಿಳಿಸಿದರು.
ಕೋಡೂರು ಗ್ರಾ.ಪಂ. ಅಧ್ಯಕ್ಷ ಉಮೇಶ ಕಲಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಳದಲ್ಲಿ 20ಕ್ಕೂ ಹೆಚ್ಚು ಕೃಷಿಗೆ ಸಂಬಂಧಿಸಿದ ಪ್ರಾತ್ಯಕ್ಷತೆ ಮಳಿಗೆಗಳಿದ್ದವು.
ಇದನ್ನೂ ಓದಿ: Devdutt Padikkal: ಆರೋಗ್ಯ ಸಮಸ್ಯೆಗೆ ಸಡ್ಡು ಹೊಡೆದು ಎದ್ದುಬಂದ ಪಡಿಕ್ಕಲ್ ಭಾರತ ಟೆಸ್ಟ್ ಕ್ಯಾಪ್ ಧರಿಸುವುದು ಖಚಿತ
ಈ ಸಂದರ್ಭದಲ್ಲಿ ಗ್ರಾ,ಪಂ. ಅಧ್ಯಕ್ಷರಾದ ಧನಲಕ್ಷ್ಮಿ, ದೀಪಿಕಾ, ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶಶೆಟ್ಟಿ, ಮುಖಂಡರಾದ ಬಿ.ಜಿ. ಚಂದ್ರಮೌಳಿ, ವೇದಾಂತಪ್ಪಗೌಡ, ತೋಟಗಾರಿಕೆ ಇಲಾಖೆಯ ಪುಟ್ಟನಾಯ್ಕ ಸಹಪ್ರಾಧ್ಯಪಕರಾದ ಶಶಿಕಲಾ, ಗಣಪತಿ, ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.