Shivamogga News: ಕೃಷಿ ಪದ್ಧತಿಯ ಜ್ಞಾನ ಹಂಚುವ ಕೆಲಸ ವಿವಿ ಮಾಡುತ್ತಿದೆ: ಡಾ. ಶಶಿಧರ - Vistara News

ಶಿವಮೊಗ್ಗ

Shivamogga News: ಕೃಷಿ ಪದ್ಧತಿಯ ಜ್ಞಾನ ಹಂಚುವ ಕೆಲಸ ವಿವಿ ಮಾಡುತ್ತಿದೆ: ಡಾ. ಶಶಿಧರ

Shivamogga News: ರಿಪ್ಪನ್‌ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕೃಷಿ ಮೇಳ-2024 ಜರುಗಿತು.

VISTARANEWS.COM


on

Krushi mela inauguration at Koduru village
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಿಪ್ಪನ್‌ಪೇಟೆ: ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕೃಷಿ (Agriculture) ಚಟುವಟಿಕೆ ಜ್ಞಾನವನ್ನು ವರ್ಗಾವಣೆ ಮಾಡುತ್ತಿದ್ದರು. ಆದರೆ ಬದಲಾದ ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕೃಷಿ ಪದ್ಧತಿಯ ಜ್ಞಾನವನ್ನು ರೈತರಿಗೆ ಹಂಚುವ ಕೆಲಸವನ್ನು ಈಗ ಕೃಷಿ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಇರುವಕ್ಕಿ ಶಿವಪ್ಪನಾಯಕ ಕೃಷಿ ವಿವಿಯ ಕುಲಸಚಿವ ಹಾಗೂ ವಿಶೇಷಾಧಿಕಾರಿ ಡಾ. ಶಶಿಧರ (Shivamogga News) ಹೇಳಿದರು.

ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಇರುವಕ್ಕಿ ಕೃಷಿ ವಿವಿ, ಕೃಷಿ ಇಲಾಖೆ ಹೊಸನಗರ ಹಾಗೂ ಕೋಡೂರು, ಚಿಕ್ಕಜೇನಿ, ರಿಪ್ಪನ್‌ಪೇಟೆ, ಮಾರುತಿಪುರ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಚಟುವಟಿಕೆಯನ್ನು ತುಂಬಲು ವಿಶ್ವವಿದ್ಯಾಲಯವು ಗ್ರಾಮೀಣ ಭಾಗಗಳಲ್ಲಿ ಕೃಷಿ ಅನುಭವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾರ್ಯಾನುಭವ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಅಲ್ಲಿ ಗ್ರಾಮೀಣ ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿಯ ಅನುಭವಗಳನ್ನು ತಾವು ಪಡೆದುಕೊಂಡು ಇವರಲ್ಲಿರುವ ಸಲಹೆಗಳನ್ನು ಅವರಿಗೆ ನೀಡುತ್ತ ವೈಜ್ಞಾನಿಕ ಕೃಷಿ ಪದ್ಧತಿಯತ್ತ ಗಮನ ಹರಿಸುವಂತೆ ಪ್ರೇರೇಪಿಸುತ್ತಾರೆ ಎಂದರು.

ಕೃಷಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಯೋಗ್ಯ ಕೃಷಿ ವಿಜ್ಞಾನಿಗಳನ್ನಾಗಿ ರೂಪಿಸುವುದರ ಜತೆಗೆ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ತಿಳಿಸುತ್ತದೆ. ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯಲು ಸಲಹೆ ನೀಡಿದರು.

ಇದನ್ನೂ ಓದಿ: Chamarajanagar News : ಜೋಳದ ಬೆಳೆ ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಕೃಷಿಮೇಳ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸುಮಾರು ಎರಡುವರೆ ತಿಂಗಳುಗಳ ಕಾಲ ಗ್ರಾಮೀಣ ಭಾಗದಲ್ಲಿ ಅಧ್ಯಯನ ನಡೆಸಿ ಇಲ್ಲಿನ ರೈತ ಮಹಿಳೆಯರಿಗೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ತಯಾರಿಸಲು ಮಾರ್ಗದರ್ಶನ ಮಾಡಿದ್ದಾರೆ. ಹಂತಹಂತವಾಗಿ ಮಾಹಿತಿ ನೀಡುತ್ತ ಕೃಷಿಯಲ್ಲಿಯೂ ಲಾಭವಿದೆ ಎನ್ನುವುದನ್ನು ರೈತರಿಗೆ ತೋರಿಸಿದ್ದಾರೆ ಎಂದು ತಿಳಿಸಿದರು. ‌

ಕೋಡೂರು ಗ್ರಾ.ಪಂ. ಅಧ್ಯಕ್ಷ ಉಮೇಶ ಕಲಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಳದಲ್ಲಿ 20ಕ್ಕೂ ಹೆಚ್ಚು ಕೃಷಿಗೆ ಸಂಬಂಧಿಸಿದ ಪ್ರಾತ್ಯಕ್ಷತೆ ಮಳಿಗೆಗಳಿದ್ದವು.

ಇದನ್ನೂ ಓದಿ: Devdutt Padikkal: ಆರೋಗ್ಯ ಸಮಸ್ಯೆಗೆ ಸಡ್ಡು ಹೊಡೆದು ಎದ್ದುಬಂದ ಪಡಿಕ್ಕಲ್​ ಭಾರತ ಟೆಸ್ಟ್​ ಕ್ಯಾಪ್​ ಧರಿಸುವುದು ಖಚಿತ

ಈ ಸಂದರ್ಭದಲ್ಲಿ ಗ್ರಾ,ಪಂ. ಅಧ್ಯಕ್ಷರಾದ ಧನಲಕ್ಷ್ಮಿ, ದೀಪಿಕಾ, ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶಶೆಟ್ಟಿ, ಮುಖಂಡರಾದ ಬಿ.ಜಿ. ಚಂದ್ರಮೌಳಿ, ವೇದಾಂತಪ್ಪಗೌಡ, ತೋಟಗಾರಿಕೆ ಇಲಾಖೆಯ ಪುಟ್ಟನಾಯ್ಕ ಸಹಪ್ರಾಧ್ಯಪಕರಾದ ಶಶಿಕಲಾ, ಗಣಪತಿ, ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಒಳನಾಡಿನಲ್ಲಿ ವಿಪರೀತ ಬಿಸಿಲು; ಕರಾವಳಿಯಲ್ಲಿ ಬಿಸಿಗಾಳಿ, ಮಲೆನಾಡಿನಲ್ಲಿ ಗುಡುಗು ಮಳೆ

Karnataka Weather Forecast : ಉತ್ತರ ಕರ್ನಾಟಕದಲ್ಲಿ ತಾಪಮಾನ ಏರಿಕೆಯಿಂದ ಜನರು ತತ್ತರಿಸಿ ಹೋಗಲಿದ್ದಾರೆ. ಕರಾವಳಿಯಲ್ಲಿ ಬಿಸಿಗಾಳಿಯು (Hot weather) ಬೀಸಲಿದ್ದು, ದಕ್ಷಿಣ ಒಳನಾಡಲ್ಲಿ ಶುಷ್ಕ ವಾತಾವರಣ (Dry Weather) ಇರಲಿದೆ. ಮಲೆನಾಡಿನ ಕೆಲವಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Rain News) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ವಾರಾಂತ್ಯದಲ್ಲಿ ರಾಜ್ಯಾದ್ಯಂತ ಹಗುರದಿಂದ ಕೂಡಿದ ಮಳೆಯಾಗುವ (Rain news) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಮಲೆನಾಡಿನ ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದರೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲ ಭಾಗಗಳಲ್ಲಿ ಶುಷ್ಕ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ತಿಂಗಳಾಂತ್ಯದವರೆಗೂ ತಾಪಮಾನ ಹೆಚ್ಚಳ

ಗರಿಷ್ಠ ತಾಪಮಾನವು ಏಪ್ರಿಲ್‌ 30ರವರೆಗೆ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನ 12ರಿಂದ 3ಗಂಟೆವರೆಗೆ ಹೊರಾಂಗಣ ಚಟುವಟಿಕೆಗಳಿಂದ ದೂರ ಇರುವಂತೆ ತಜ್ಞರು ಸೂಚಿಸಿದ್ದಾರೆ. ಇನ್ನೂ ಕರಾವಳಿ ಕರ್ನಾಟಕದಲ್ಲಿ ವಾತಾವರಣವು ಬಿಸಿಯಾಗಿರಲಿದೆ. ಕೆಲವೊಮ್ಮೆ ಬಿಸಿ ಗಾಳಿಯೂ ಬೀಸಲಿದೆ.

ಯೆಲ್ಲೋ ಅಲರ್ಟ್‌

ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಏರಿಕೆ ಆಗಲಿದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

Summer Hairstyles

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

Summer Hairstyles

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

Summer Hairstyles

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

  • ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
  • ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
  • ಫ್ರಿಂಝ್‌ ಮಾಡದಿದ್ದವರೂ ಸೈಡ್‌ಲಾಕ್ಸ್‌ ಕೂದಲ ವಿನ್ಯಾಸ ಮಾಡಬಹುದು.
  • ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
  • ಮೇಲಿನ ಹೇರ್‌ಸ್ಟೈಲ್ಸ್‌ ನಿಮಗೆ ಸ್ಲಿಮ್‌ ಲುಕ್‌ ನೀಡಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Karnataka Weather Forecast : ಬೆಂಗಳೂರು ನಗರವು ಬಿಸಿಲ ನಗರೀಯಾಗಿ ಮಾರ್ಪಾಟ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಎಲ್ಲ ಕಾಲದಲ್ಲೂ ಕೂಲ್‌ ಆಗಿದ್ದ ಬೆಂಗಳೂರು ಇದೀಗ ಹಾಟ್‌ ಸಿಟಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.

VISTARANEWS.COM


on

By

Karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಹಗುರ ಮಳೆ ನಡುವೆಯೂ (rain News) ಮತ್ತೆ ತಾಪಮಾನ ಏರಿಕೆ ಹಾಗೂ ಶಾಖದ ಅಲೆಗಳ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡುತ್ತಿದೆ. ಏ.26ರಿಂದ 30ರವರೆಗೆ ಹಲವು ಜಿಲ್ಲೆಗಳಿಗೆ ಹೀಟ್‌ ವೇವ್‌ (Heat Wave) ಅಲರ್ಟ್‌ ನೀಡಲಾಗಿದೆ. ಮುಂದಿನ 5 ದಿನಗಳು ತಾಪಮಾನದಲ್ಲಿ ಏರಿಳಿತ ಉಂಟಾಗಲಿದೆ. ಸಾಮಾನ್ಯಕ್ಕಿಂತ 2-3 ಡಿ.ಸೆ ತಾಪಮಾನ ಏರಿಕೆ ಆಗಲಿದೆ.

ಉತ್ತರ ಕರ್ನಾಟಕಕ್ಕೂ ಸೆಡ್ಡು ಹೊಡೆಯುತ್ತಿರುವ ಬೆಂಗಳೂರು

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ವಾತಾವರಣವೇ ಮುಂದುವರಿಯಲಿದೆ. ಬೆಳಗಿನ ಸಮಯ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇದ್ದರೆ ಮಧ್ಯಾಹ್ನದ ನಂತರ ಆಕಾಶವು ನಿರ್ಮಲವಾಗಿರದೆ. ಗರಿಷ್ಠ ಹಾಗೂ ಕನಿಷ್ಟ ಉಷ್ಣಾಂಶವು ಕ್ರಮವಾಗಿ 38 ಹಾಗೂ 23 ಡಿ.ಸೆ ಇರಲಿದೆ. ಕೂಲ್‌ ಆಗಿದ್ದ ಬೆಂಗಳೂರು ನಗರವು ಇದೀಗ ಹಾಟ್‌ ಸಿಟಿಯಾಗಿ ಮಾರ್ಪಾಟ್ಟಿದ್ದು, ಹಳೇಯ ದಾಖಲೆಯನ್ನು ಉಡೀಸ್‌ ಆಗಿದೆ. ಕಳೆದ 12 ವರ್ಷಗಳಲ್ಲೇ ಅತ್ಯಾಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಗರಿಷ್ಠ ಉಷ್ಣಾಂಶವು 38ಕ್ಕೆ ಹೋಗಿತ್ತು, ಶನಿವಾರ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಏ. 27, 28ರಂದು ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ತುಮಕೂರು, ಮಂಡ್ಯ, ಗದಗ, ದಾವಣಗೆರೆ ಮತ್ತು ಚಿತ್ರದುರ್ಗಕ್ಕೆ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.

ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು

ಬುಧವಾರದಂದು ಕೋಲಾರದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 43.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉಳಿದಂತೆ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ, ಬಾಗಲಕೋಟೆ, ಯಾದಗಿರಿ ಮತ್ತು ಬಳ್ಳಾರಿ, ವಿಜಯಪುರದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ.

ಇದನ್ನೂ ಓದಿ: Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ಬಿಸಿಲಿನ ಝಳ (ORS) ನೆತ್ತಿ ಸುಡುವಂತಿದೆ. ತಾಪಮಾನ 40 ಡಿಗ್ರಿ ಸೆ. ಆಚೀಚೆ ಬರುತ್ತಿದ್ದಂತೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳಲ್ಲಿ ಜನ ನಿರತರಾಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖ ಪೇಯವೆಂದರೆ ಒಆರ್‌ಎಸ್‌ ಅಥವಾ ಓರಲ್‌ ರಿಹೈಡ್ರೇಶನ್‌ ಸೊಲ್ಯೂಶನ್‌.

ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಸೆಕೆಗೆ ತತ್ತರಿಸುತ್ತಿರುವ ಈ ದಿನಗಳಲ್ಲಿ ಒಆರ್‌ಎಸ್‌ನಂಥವು ಎಷ್ಟು ಬೇಕಿದ್ದರೂ ಹೊಟ್ಟೆ ಸೇರುತ್ತವೆ. ಆದರೆ ಇದನ್ನು ಎಷ್ಟು ಕುಡಿದರೆ ಸಾಕು ಮತ್ತು ಬೇಕು? ನಿರ್ಜಲೀಕರಣದಿಂದ ಕಳೆದುಕೊಂಡ ಖನಿಜಾಂಶಗಳನ್ನು ಮತ್ತು ನೀರನ್ನು ದೇಹಕ್ಕೆ ಮರಳಿ ಒದಗಿಸಿಕೊಡುವ ವ್ಯವಸ್ಥಿತವಾದ ಮಾರ್ಗವಿದು.

ಬೇಸಿಗೆಯ ತೀವ್ರತೆ ವಿಪರೀತವಾದ ಮೇಲೆ ರಾಜಧಾನಿಯೊಂದರಲ್ಲೇ ಒಆರೆಸ್‌ ಮಾರಾಟ ಶೇ. ೬೦ರಷ್ಟು ಹೆಚ್ಚಿದೆ. ಅದರಲ್ಲೂ ವಾಂತಿ, ಡಯರಿಯಾ, ಸುಸ್ತು ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣುತ್ತಿದ್ದಂತೆ ಒಂದು ಸ್ಯಾಶೆ ಒಆರೆಸ್‌ ನೀರಿಗೆ ಬೆರೆಸಿ ಕುಡಿದರೆ, ಜೀವಕ್ಕೆ ತಂಪಾಗುತ್ತದೆ ಎಂಬುದು ಬಹುತೇಕ ಮಂದಿಗೆ ಅನುಭವಕ್ಕೆ ಬಂದಿದೆ. ಆದರೆ ನಮಗೆ ನಿಜಕ್ಕೂ ಓಆರೆಸ್‌ ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರೆಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರೆಸ್ಸೆಲ್‌ ಒಳ್ಳೆಯದೋ?

ors drink

ಏನಿದು ಒಆರ್‌ಎಸ್‌

ರಾಬರ್ಟ್‌ ಕ್ರೇನ್‌ ಎಂಬಾತ ಇದರ ಮಹತ್ವವನ್ನು ತಿಳಿಸಿಕೊಟ್ಟವ. 1960ರ ಸುಮಾರಿಗೆ ವಾಂತಿ, ಅತಿಸಾರದಿಂದ ಆಗುತ್ತಿದ್ದ ಪ್ರಾಣಾಪಾಯಗಳನ್ನು ತಡೆಯುವುದಕ್ಕೆ ಈ ದ್ರಾವಣದ ಸೇವನೆಯನ್ನು ಜಾರಿಗೆ ತರಲಾಗಿತ್ತು. ವಾಂತಿ-ಭೇದಿಯಿಂದ ಆಗುತ್ತಿದ್ದ ನಿರ್ಜಲೀಕರಣ ತಪ್ಪಿಸಲು ರಕ್ತನಾಳಕ್ಕೆ ಗ್ಲೂಕೋಸ್‌ ಕೊಡುವ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ಆದರೆ ಎಲ್ಲ ಕಡೆಯೂ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ. ಆಗ ಒಆರೆಸ್‌ ಎಂಬ ಜೀವಜಲದ ಸೇವನೆ ವರದಾನವಾಗಿ ಪರಿಣಮಿಸಿತ್ತು. ಇದು ಗ್ಲೂಕೋಸ್‌, ಸೋಡಿಯಂ ಕ್ಲೋರೈಡ್‌, ಪೊಟಾಶಿಯಂ ಕ್ಲೋರೈಡ್‌ ಮತ್ತು ಸೋಡಿಯಂ ಸಿಟ್ರೇಟ್‌ಗಳ ಮಿಶ್ರಣವಾಗಿದೆ. ಜೊತೆಗೆ ಜಿಂಕ್‌ ಸಹ ಸೇರಿರುವುದರಿಂದ ವಾಂತಿ- ಅತಿಸಾರದ ಲಕ್ಷಣಗಳ ಉಪಶಮನಕ್ಕೆ ನೆರವಾಗುತ್ತದೆ.

ಯಾವಾಗ ಕುಡಿಯಬೇಕು?

ನಿರ್ಜಲೀಕರಣದ ಪ್ರಾರಂಭಿಕ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಒಆರೆಸ್‌ ಸೇವನೆಯನ್ನು ಪ್ರಾರಂಭಿಸುವುದು ಸೂಕ್ತ. ಅಂದರೆ ತೀವ್ರ ಬಾಯಾರಿಕೆ. ತುಟಿಗಳೆಲ್ಲ ಒಣಗಿದಂತಾಗುವುದು, ಮೂತ್ರ ಕಡಿಮೆಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಸುಸ್ತು, ಆಯಾಸ, ತಲೆ ಸುತ್ತುವುದು, ತಲೆಯೊಳಗೆ ನೋವು… ಇಂಥ ಯಾವುದೇ ಅನುಭವಕ್ಕೆ ಬಂದರೂ ಒಆರೆಸ್‌ ಸೇವನೆಯನ್ನು ಆರಂಭಿಸಬಹುದು. ಬಿಸಿಲಿನ ತೀವ್ರತೆ ಸಿಕ್ಕಾಪಟ್ಟೆ ಇರುವ ದಿನಗಳಲ್ಲಿ, ಮನೆಯೊಳಗಿದ್ದರೂ ಸುಸ್ತು, ಆಯಾಸ, ಸಂಕಟ ಕಾಡುತ್ತಿರುವ ಹೊತ್ತಿನಲ್ಲಿ ಒಂದು ಲೋಟ ಒಆರೆಸ್‌ ನೀರು ಕುಡಿಯುವುದು ಜೀವವನ್ನು ತಂಪಾಗಿಸುತ್ತದೆ.

ಎಷ್ಟು ಕುಡಿಯಬೇಕು?

ಇದು ಆ ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿದೆ. ನಿರ್ಜಲೀಕರಣದ ಲಕ್ಷಣಗಳು ಸ್ವಲ್ಪ ಅಥವಾ ಮಧ್ಯಮ ಪ್ರಮಾಣದಲ್ಲಿದ್ದರೆ, ಸುಮಾರು 20-25 ಎಂ.ಎಲ್‌ನಷ್ಟು ಒಆರೆಸ್‌ ದ್ರಾವಣವನ್ನು ಒಮ್ಮೆ ಗುಟುಕರಿಸುವುದು. ಪ್ರತಿ 10-15 ನಿಮಿಷಗಳಿಗೆ ಇದನ್ನೇ ನಿಯಮಿತವಾಗಿ ಮುಂದುವರಿಸುವುದು. ದಾಹ ಕಡಿಮೆಯಾಗಿ, ಬಾಯಿ ಒಣಗುವುದು ನಿಂತು, ಮೂತ್ರ ಹೆಚ್ಚಾಗಿ, ಮೂತ್ರದ ಬಣ್ನ ತಿಳಿಯಾಗಿ, ಸುಸ್ತು ಕಡಿಮೆಯಾಗುವವರೆಗೂ ಇದನ್ನೇ ಮುಂದುವರಿಸಬೇಕು. ಅಗತ್ಯವಿದ್ದರೆ ಇದನ್ನು ದಿನವಿಡೀ ಮಾಡಬಹುದು. ಆದರೆ ನಿರ್ಜಲೀಕರಣ ತೀವ್ರವಾಗಿದ್ದರೆ ಒಆರೆಸ್‌ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಸಲಹೆ ಕೇಳುವುದು ಒಳಿತು.

ಯಾರೆಲ್ಲ ಕುಡಿಯಬಹುದು?

ಬೇಸಿಗೆಯ ಹೊಡೆತ ತೀವ್ರವಾಗಿರುವ ಈ ದಿನಗಳಲ್ಲಿ ಬಹುತೇಕ ಎಲ್ಲರೂ ಇದನ್ನು ಸೇವಿಸಬಹುದು. ಆದರೆ ಹೃದ್ರೋಗಿಗಳು, ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಆದರೆ ನಿಯಮಿತವಾಗಿ ಸೇವಿಸುವ ಅಗತ್ಯವಿದ್ದರೆ ಸಕ್ಕರೆಯಂಶದ ಮೇಲೆ ಕಣ್ಣಿಡಬೇಕಾಗುತ್ತದೆ. ಹಾಗಾಗಿ ಅವರೂ ವೈದ್ಯರಲ್ಲಿ ಸಮಾಲೋಚನೆ ಮಾಡುವುದು ಕ್ಷೇಮ. ಇದರಿಂದ ಯಾವಾಗ, ಎಷ್ಟು ಕುಡಿಯಬಹುದು ಎಂಬುದು ಸ್ಪಷ್ಟವಾಗುತ್ತದೆ.

Boy Drinking Water from Glass

ಮಕ್ಕಳಿಗೆ ನೀಡಬಹುದೇ?

ಖಂಡಿತ. ಆರು ತಿಂಗಳ ನಂತರದ ಶಿಶುಗಳಿಗೂ ಒಆರೆಸ್‌ನಿಂದ ಅನುಕೂಲವಾಗುತ್ತದೆ. ಬಿಸಿಲ ದಿನಗಳಲ್ಲಿ, 6-24 ತಿಂಗಳ ಮಕ್ಕಳಿಗೆ, ದಿನಕ್ಕೆ 20 ಚಮಚ ಒಆರೆಸ್‌ ನೀಡಬಹುದು. 2-5 ವರ್ಷದ ಮಕ್ಕಳಿಗೆ 40 ಚಮಚ ಒಆರೆಸ್‌ ನೀಡಬಹುದು. 5 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಅವು ಕುಡಿದು ತಡೆಯುವಷ್ಟು ನೀಡಬಹುದು. ವಯಸ್ಕರಿಗಿಂತ ಮಕ್ಕಳೇ ಹೆಚ್ಚು ನಿರ್ಜಲೀಕರಣಕ್ಕೆ ತುತ್ತಾಗುವುದರಿಂದ ಒಆರೆಸ್‌ ದ್ರಾವಣ ಎಳೆಯರ ಪಾಲಿನ ಜೀವಜಲ.

ಯಾವುದು ಒಳ್ಳೆಯದು?

ವಾಂತಿ, ಅತಿಸಾರದಂಥ ತೊಂದರೆ ಇರುವಾಗ ಒಆರ್‌ಎಸ್‌ ಪುಡಿಯೇ ಸೂಕ್ತವಾದದ್ದು. ಅದರ ಮೇಲೆ ನಮೂದಿಸಿರುವ ಪ್ರಮಾಣವನ್ನು ತಪ್ಪದೆ ಪಾಲಿಸಬೇಕು. ಒಆರೆಸೆಲ್‌ನಲ್ಲಿ ಬಣ್ಣ ಮತ್ತು ಸುವಾಸನೆಯನ್ನು ಸೇರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ, ಚಿಕಿತ್ಸೆಗೆ ಪುಡಿಯೇ ಸೂಕ್ತ. ಹಾಗಲ್ಲದೆ ಬೇಸಿಗೆಯ ಹೊಡೆತ ತಡೆಯುವಾಗ, ಸಾಮಾನ್ಯ ಸುಸ್ತು, ಆಯಾಸಗಳ ಪರಿಹಾರಕ್ಕಾದರೆ ಯಾವುದನ್ನಾದರೂ ಬಳಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮಳೆಯಾಟ ಬಂದ್‌; 12 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಟ್ಯಾಕ್‌, ಯೆಲ್ಲೋ ಅಲರ್ಟ್‌

Karnataka Weather Forecast : ಮತ್ತೆ ವಿಪರೀತ ತಾಪಮಾನವು ಜನರ ತಲೆಕೆಡಿಸಿದೆ. ಕೆಲವಡೆ ಮಳೆಯು ಅಬ್ಬರಿಸಿದ್ದರೂ, ಅದರ ದುಪ್ಪಟ್ಟು ಎಂಬಂತೆ ಬಿಸಿಲ ಧಗೆಯು ಹೆಚ್ಚಾಗಿದೆ. ಕರ್ನಾಟಕದಲ್ಲಿ ಹೀಟ್‌ ವೇವ್‌ ಹೆಚ್ಚುತ್ತಿದ್ದು ಹವಾಮಾನ ತಜ್ಞರು ಯೆಲ್ಲೋ ಅಲರ್ಟ್‌ ಘೋಷಿಸಿದ್ದಾರೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರವು (rain News) ಕಡಿಮೆ ಆಗಿದ್ದು, ಶುಷ್ಕ ವಾತಾವರಣವು (Dry Weather) ಮುಂದುವರಿದಿದೆ. ಏ.26ರಂದು ಶುಕ್ರವಾರ ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಶುಷ್ಕ ಹವಾಮಾನವು ಇರಲಿದೆ. ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಲ ಧಗೆಯು ಹೆಚ್ಚಾಗಿ ಇರಲಿದೆ.

ತಾಪಮಾನ ಎಚ್ಚರಿಕೆ

ಕರ್ನಾಟಕದ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆ ಆಗಲಿದೆ. ಗರಿಷ್ಠ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಿರಲಿದೆ. ಏ. 26 ರಂದು ಕರಾವಳಿ ಕರ್ನಾಟಕದ ಪ್ರತ್ಯೇಕ ಪ್ರದೇಶಗಳಲ್ಲಿ ಹೀಟ್‌ ವೇವ್‌ ಇರಲಿದೆ. ಏ. 28 ರವರೆಗೆ ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಆರ್ದ್ರತೆ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ತುಮಕೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

ಹೀಟ್‌ವೇವ್‌ ವಾರ್ನಿಂಗ್‌

ಹೀಟ್‌ ವೇವ್ಸ್‌ ಅಥವಾ ಶಾಖದ ಅಲೆಯ ಸಮಯದಲ್ಲಿ ಮಾಡಬೇಕಾದದ್ದು ಮತ್ತು ಮಾಡಬಾರದ ಕೆಲಸಗಳ ಕುರಿತು ಹವಾಮಾನ ತಜ್ಞರು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಹೀಟ್‌ ವೇವ್ಸ್‌ನಿಂದಾಗಿ ಅತಿಯಾದ ಒತ್ತಡ ಉಂಟಾಗಿ ಇದು ಸಾವಿಗೆ ಕಾರಣವಾಗಬಹುದು.

1.ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.

2.ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ.

3.ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ.

4.ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಿ.

5.ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ.

6.ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗಿನ ಕೆಲಸ ಮಾಡುವುದನ್ನು ತಪ್ಪಿಸಿ.

7.ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕುಡಿಯಬೇಡಿ.

8.ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ ಮತ್ತು ಹಳೆಯ ಆಹಾರವನ್ನು ಸೇವಿಸಬೇಡಿ.

9.ನೀವು ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ.

10.ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ

11.ನಿಮಗೆ ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ.

12.ORS, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ. ಇದು ದೇಹವನ್ನು ತಂಪಾಗಿ ಇರಲು ಸಹಾಯ ಮಾಡುತ್ತದೆ.

13. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ.

14. ನಿಮ್ಮ ಮನೆಯನ್ನು ತಂಪಾಗಿ ಇರಿಸಿ, ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ.

15. ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ.

ಸನ್‌ಸ್ಟ್ರೋಕ್‌ ಚಿಕಿತ್ಸೆಗಾಗಿ ಸಲಹೆಗಳು

-ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ, ನೆರಳಿನ ಕೆಳಗೆ ಇರಿಸಿ. ಒದ್ದೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಿರಿ. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ ವಿಷಯ.
-ವ್ಯಕ್ತಿಗೆ ORS ಕುಡಿಯಲು ಅಥವಾ ನಿಂಬೆ ಸರಬತ್/ತೋರಣಿ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಿ.
-ತಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಏಕೆಂದರೆ ಶಾಖದ ಹೊಡೆತಗಳು ಮಾರಣಾಂತಿಕವಾಗಬಹುದು.

ರೈತರು/ಕೃಷಿ ಕಾರ್ಮಿಕರು

ಹೊಲದಲ್ಲಿ ಕೆಲಸ ಮಾಡುವವರು ಟೋಪಿ ಅಥವಾ ಛತ್ರಿ ಬಳಸಿ. ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ. ಇನ್ನೂ ಪ್ರಯಾಣಿಸುವಾಗ ನಿಮ್ಮೊಂದಿಗೆ ನೀರನ್ನು ಒಯ್ಯಿರಿ. ಕ್ರೀಡಾಪಟು ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Road Accident: ಚಾಲಕನ ನಿಯಂತ್ರಣ ತಪ್ಪಿ ಜೀಪ್ ಮರಕ್ಕೆ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

Road Accident: ಚಾಲಕನ ನಿಯಂತ್ರಣ ತಪ್ಪಿದ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ಘಟನೆ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪದಲ್ಲಿ ಜರುಗಿದೆ.

VISTARANEWS.COM


on

driver lost control and the jeep hit a tree driver died on the spot
Koo

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ (Road Accident) ಸ್ಥಳದಲ್ಲೇ ಚಾಲಕ ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪ ನಡೆದಿದೆ.

ರಿಪ್ಪನ್‌ಪೇಟೆ ಸಮೀಪದ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. 9ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್‌ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಉರುಳಿ ಬಿದ್ದಿದೆ.

ಇದನ್ನೂ ಓದಿ: Karnataka Weather : ನಾಳೆ ಬೆಳಗಾವಿ, ಚಾಮರಾಜನಗರದಲ್ಲಿ ಮಳೆ ; ಉಳಿದೆಡೆ ಬಿಸಿಲ ಶಾಕ್‌

ಅಪಘಾತದಲ್ಲಿ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಲಾಯಿತು. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ನಿಂಗರಾಜ್ ಕೆ.ವೈ. ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading
Advertisement
Randeep Surjewala
ಕರ್ನಾಟಕ18 mins ago

Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್;‌ ಕೆರಳಿ ಕೆಂಡವಾದ ಬಿಜೆಪಿ!

Murder case in dharwad
ಕ್ರೈಂ25 mins ago

Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

miss universe Buenos Aires
ವಿದೇಶ29 mins ago

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Gurucharan Singh Taarak Mehta Ka Ooltah Chashmah actor missing
ಕಿರುತೆರೆ43 mins ago

Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ

snake bite
ಬೆಂಗಳೂರು ಗ್ರಾಮಾಂತರ53 mins ago

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

MDH, Everest Spices
ದೇಶ1 hour ago

MDH, Everest Spices: ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಪತ್ತೆ

Neha Murder Case neha And fayas
ಹುಬ್ಬಳ್ಳಿ1 hour ago

Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

Lok Sabha Election-2024
Lok Sabha Election 20241 hour ago

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

gold rate today beauty
ಚಿನ್ನದ ದರ1 hour ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Drought Relief
ಕರ್ನಾಟಕ1 hour ago

Drought Relief: 3,454 ಕೋಟಿ ರೂ. ಬರ ಪರಿಹಾರ; ‘ಅರೆಕಾಸಿನ ಮಜ್ಜಿಗೆ’ ಎಂದ ಸಿದ್ದರಾಮಯ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

road Accident in kolar evm
ಕೋಲಾರ2 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ9 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಟ್ರೆಂಡಿಂಗ್‌