Site icon Vistara News

Shivamogga News: ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲೇಬೇಕು! ಅಮರೇಶ್ವರ ಶ್ರೀ

Maasika Shivanubhava programme at soraba

ಸೊರಬ: ಮನುಷ್ಯ ಜನ್ಮ ಬಹು ಅಮೂಲ್ಯವಾದದು. ಈ ಜನ್ಮವನ್ನು ಪಡೆಯುವುದಕ್ಕಾಗಿ ಹಿಂದಿನ ಜನ್ಮದಲ್ಲಿ ಬಹಳ ಕಷ್ಟ ಪಟ್ಟಿದ್ದೇವೆ. ಲಕ್ಷಾಂತರ ಜನ್ಮಗಳಲ್ಲಿ ಕ್ರಿಮಿ, ಕೀಟಾದಿಗಳಾಗಿ, ಜಂತು ಜೀವವಾಗಿ ಜನಿಸಿ ಆ ಜನ್ಮದ ಸುಖ ದುಃಖವನ್ನು ಅನುಭವಿಸಿ, ಆ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಈಗ ಮನುಷ್ಯ ಜನ್ಮ ಸಿಕ್ಕಿದೆ. ಆದ್ದರಿಂದ ಇಂತಹ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಡೆ ಬಂಕಸಾಣ ಸಮಾಧಾನ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ (Shivamogga News) ಹೇಳಿದರು.

ತಾಲೂಕಿನ ಜಡೆ ಸಮೀಪದ ಬಂಕಸಾಣದ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ನಿಸರ್ಗ ಬಹು ಅಪರೂಪವಾದದು. ಬಚ್ಚಲ ರೊಚ್ಚಿಯ ನೀರು ಹೋಗುವಲ್ಲಿ ಒಂದು ತೆಂಗಿನ ಸಸಿ ನೆಟ್ಟರೆ ಅದು ರುಚಿ ರುಚಿಯಾದ ಎಳೆನೀರನ್ನು ಕೊಡುತ್ತದೆ. ಸ್ವಾದಿಷ್ಟಕರವಾದ ತರಕಾರಿಗಳನ್ನು ನೀಡುತ್ತದೆ. ಇದು ನಿಸರ್ಗದ ನಿಯಮ. ಆದರೆ ಮನುಷ್ಯ ಈ ನಿಸರ್ಗವನ್ನು ಬಳಸಿ, ಅದನ್ನು ವಿರೂಪಗೋಳಿಸುತ್ತಾನೆ. ನಿಸರ್ಗವನ್ನು ಬಳಸಲು ಮನುಷ್ಯನಿಗೆ ಹಕ್ಕಿದೆಯೇ ಹೊರತು ವಿರೂಪಗೊಳಿಸಲು ಅಲ್ಲ. ಎಲ್ಲರೂ ಈ ಬದುಕನ್ನು ಅಂದಗೊಳಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರಿಯದರ್ಶಿನಿ ಜಂಬೂರುಮಠ ಮಾತನಾಡಿ, ಮನುಷ್ಯನಿಗೆ ಸಂಬಂಧಗಳು ಮುಖ್ಯ. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ಸಂಬಂಧಗಳ ಬಗ್ಗೆ ತಿಳಿ ಹೇಳಬೇಕು ಎಂದರು.

ಸಾಗರದ ವೀರಶೈವ ಸಮಾಜದ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗೇಶ್ವರ ಮಾತನಾಡಿದರು.

ಇದನ್ನೂ ಓದಿ: Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

ಕಾರ್ಯಕ್ರಮದಲ್ಲಿ ಮಾತೋಶ್ರೀ ಸುಶೀಲಮ್ಮ ಚನ್ನಬಸವಯ್ಯನವರ ಶ್ರದ್ಧಾಂಜಲಿ ನಡೆಯಿತು. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮಿ, ರೇಣುಕಯ್ಯ ಸ್ವಾಮಿ, ಬಂಗಾರಸ್ವಾಮಿ, ತಾರಕೇಶ್ವರ, ಸಿದ್ಧಲಿಂಗಯ್ಯ, ಸುಪ್ರಸನ್ ಶಾಸ್ತ್ರಿ, ಪಂಚಾಕ್ಷರಿ, ಗಂಗಣ್ಣ, ಹೊಳೆಬಸಯ್ಯನವರು, ಮಹೇಶಯ್ಯ, ಮಧುಮತಿ ವರ್ಷಭೇಂದ್ರ ಗೌಡ, ಹೇಮಲತಾ, ಸುಮಂಗಳಾ, ಶಿವಲೀಲಾ, ಇರಾಜಮ್ಮ ಹಾಗೂ ಇತರರು ಉಪಸ್ಥಿತರಿದ್ದರು. ನಿಶ್ಚಿಂತ ಪ್ರಾರ್ಥಿಸಿದರು. ಸನ್ಮತಿ ನಿರೂಪಿಸಿದರು.

Exit mobile version