ಶಿವಮೊಗ್ಗ : ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ(ರಿ)ವು (Shivamogga News) ಪದಾಧಿಕಾರಿಗಳನ್ನು ಪುನರ್ ನವೀಕರಿಸಿದೆ. ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಸಿಂಹ ಸಂಪಾದಕ ಜಿ. ಚಂದ್ರಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತುಂಗಾತರಂಗ ದಿನಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Shivamogga News: ಶಿವಮೊಗ್ಗ ಲೋಕೋಪಯೋಗಿ ಭವನ ಉದ್ಘಾಟಿಸಿದ ಬಿ.ಎಸ್. ಯಡಿಯೂರಪ್ಪ
ಶಿವಮೊಗ್ಗ ಸೂರ್ಯ ಕಂಫರ್ಟ್ಸ್ ಎಡಿಟರ್ಸ್ ಕ್ಲಬ್‌ನಲ್ಲಿ ನಡೆದ ಸಂಪಾದಕರ ಸಂಘದ ಸಭೆಯಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಗಿದೆ. ಸಂಘದ ಖಜಾಂಚಿಯಾಗಿ ರಘುರಾಜ್ ಹೆಚ್.ಕೆ. ಅವರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ವಾಯ್ಸ್ ಆಫ್ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ಅವರನ್ನು, ಸಂಘದ ಉಪಾಧ್ಯಕ್ಷರುಗಳಾಗಿ ಈ ಪತ್ರಿಕೆಯ ನಾಗೇಶ್ ನಾಯ್ಕ್, ಉಷಾಮಹಿ ಪತ್ರಿಕೆಯ ಕಣ್ಣಪ್ಪ ಅವರನ್ನು ನೇಮಿಸಲಾಗಿದೆ. ಸಹ ಕಾರ್ಯದರ್ಶಿಯಾಗಿ ಕ್ಷಿತಿಜ ಪತ್ರಿಕೆಯ ಕೃಷ್ಣ ಬನಾರಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಹ್ಯಾದ್ರಿ ಪತ್ರಿಕೆಯ ಎನ್.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ನಿರ್ದೇಶಕರುಗಳಾಗಿ ಛಲದಂಕಲ್ಲ ದಿನಪತ್ರಿಕೆಯ ಜಿ.ಪದ್ಮನಾಬ್, ಕಂಠೀರವ ಪತ್ರಿಕೆಯ ಎನ್.ಎಂ.ಶಶಿಕುಮಾರ್, ಅಜೇಯ ಪತ್ರಿಕೆಯ ಶ್ರೀನಿವಾಸನ್, ನಾವಿಕ ಪತ್ರಿಕೆಯ ರಂಜಿತ್, ಮಲೆನಾಡು ಎಕ್ಸ್‌ಪ್ರೆಸ್‌ನ ಶಿ.ಜು.ಪಾಶಾ, ರಾಜರುಷಿಯಾ ಎ. ಭರತೇಶ್, ಸೂರ್ಯ ಗಗನದ ಗಾ.ರಾ.ಶ್ರೀನಿವಾಸ್, ನುಡಿ ಗಿಡಪತ್ರಿಕೆಯ ಹೆಚ್.ಎನ್.ಮಂಜುನಾಥ್, ಬೆಳಗಿನ ಛಲಗಾರದ ಜಿ.ನಿಶಾಂತ್, ಭದ್ರಾವಾಹಿನಿಯ ಸುಭಾಷ್ ರಾವ್ ಸಿಂದ್ಯಾ, ಜೈ ಕರುನಾಡು ಪತ್ರಿಕೆಯ ನಾಗರಾಜ್ ಕಲ್ಲುಕೊಪ್ಪ, ಹೊಸ ವಿಚಾರ ಪತ್ರಿಕೆಯ ಹಾಲೇಶ್ ಆರ್., ಆಜ್ ಕಾ ಇನ್ ಕ್ಯೂಲ್ಯಾಬ್ ಪತ್ರಿಕೆಯ ಲಿಯಾಖತ್, ಸತ್ಯ ಸಂಗತಿ ಪತ್ರಿಕೆಯ ಎಸ್.ಎಲ್.ವಿನೋದ್, ಭುವನವಾರ್ತೆಯ ಕೆ.ಎ.ಪ್ರಶಾಂತ್, ಶಿವಮೊಗ್ಗ ಸಂಚಲನದ ಆನಂದ್ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: Karnataka Elections : ಎಂಎಲ್ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ, ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧೆ ಖಚಿತ
ಪತ್ರಿಕಾ ಸಂಪಾದಕರ ಹಿತಾಕಾಂಕ್ಷೆಗಾಗಿ ರೂಪಿತವಾಗಿರುವ ಈ ಸಂಸ್ಥೆ ರಾಜ್ಯ ವ್ಯಾಪಿ ಸ್ಥಳೀಯ ಪತ್ರಿಕೆಗಳ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ಸಂಘಟನಾತ್ಮಕವಾದ ಧ್ವನಿ ಎತ್ತಲು, ಸಂಪಾದಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲು ಹಾಗೂ ಸಮಾಜಮುಖಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಘದ ಕಾರ್ಯ ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.