ರಿಪ್ಪನ್‌ಪೇಟೆ: ಇಸ್ಪೀಟ್ ಜೂಜಾಟದ (Gambling) ಅಡ್ಡೆ ಮೇಲೆ ರಿಪ್ಪನ್‌ಪೇಟೆ ಠಾಣಾ ಪೊಲೀಸರು ದಾಳಿ ನಡೆಸಿ, 8 ಜನ ಆರೋಪಿಗಳನ್ನು (Accused) ಬಂಧಿಸಿ, ನಗದು ಹಣ ವಶಪಡಿಸಿಕೊಂಡಿರುವ ಘಟನೆ ಪಟ್ಟಣದ ಗವಟೂರು ಗ್ರಾಮದ ಖಾಸಗಿ ಕಟ್ಟಡದ ಹಿಂಭಾಗದಲ್ಲಿ ಜರುಗಿದೆ.
ಖಚಿತ ಮಾಹಿತಿಯ ಮೇರೆಗೆ ಗವಟೂರು ಗ್ರಾಮದ ಖಾಸಗಿ ವಸತಿ ಗೃಹವೊಂದರ ಹಿಂಭಾಗದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಎಸ್.ಪಿ. ಹಾಗೂ ಸಿಬ್ಬಂದಿ ದಾಳಿ ನಡೆಸಿ, 14,700 ರೂ ಹಣವನ್ನು ವಶಪಡಿಸಿಕೊಂಡು 8 ಜನ ಆರೋಪಿಗಳ ಬಂಧಿಸಿದ್ದಾರೆ.
ಆರೋಪಿಗಳಾದ ಉಜ್ಜಪ್ಪಗೌಡ, ವಿಜಯ್ ಕುಮಾರ್, ಚಂದ್ರಚಾರ್ಯ, ರಮೇಶ್, ಮಂಜುನಾಥ, ನವೀನ್ ಹಾಗೂ ಸೋಮಶೇಖರ್ ವಿರುದ್ದ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಅಬ್ಬಾ ಲಾಟರಿ; 1,200 ನೌಕರರನ್ನು ಜಪಾನ್ ಟ್ರಿಪ್‌ಗೆ ಕಳುಹಿಸಿದ ಅಮೆರಿಕ ಕಂಪನಿ ಬಾಸ್!
ಜಿಲ್ಲಾ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ., ಎಎಸ್‌ಪಿ ಅನಿಲ್ ಕುಮಾರ್, ಎನ್ ಬೂಮರೆಡ್ಡಿ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಗಜಾನನ ಎಂ ಸುತಾರ, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್. ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಎಸ್.ಪಿ., ಸಿಬ್ಬಂದಿಗಳಾದ ಉಮೇಶ್, ಶಿವಕುಮಾರ್, ಮಧುಸೂಧನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.