ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.
ಇದನ್ನೂ ಓದಿ: IPL 2024 : ಐಪಿಎಲ್ ಮಧ್ಯದಲ್ಲಿಯೇ ಕೆಕೆಆರ್ ತಂಡ ತೊರೆದ ಆರಂಭಿಕ ಆಟಗಾರ
ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.