Site icon Vistara News

Shivamogga News: ಶಿವಮೊಗ್ಗದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಾಟೆ

shivamogga tank mohalla ganesh

ಶಿವಮೊಗ್ಗ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಎರಡು ಕೋಮುಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವಾರಣ ಉಂಟಾದ ಘಟನೆ ಶಿವಮೊಗ್ಗದಲ್ಲಿ (Shivamogga News) ನಡೆದಿದೆ.

ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ಮಸೀದಿ ಬಳಿ ಘಟನೆ ನಡೆದಿದೆ. ಟ್ಯಾಂಕ್ ಮೊಹಲ್ಲಾದ ಕೇಸರಿ ಪಡೆ ಕೂರಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಹೊಡೆಯುವ ವಿಚಾರವಾಗಿ ಮಾತಿನ ಚಕಮಕಿ ಉಂಟಾಗಿದೆ. ಎರಡು ಕೋಮಿನ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಚಕಮಕಿ ಉಂಟಾಗಿತ್ತು.

ಘಟನಾ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ದೌಡಾಯಿಸಿದ್ದು, ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಘಟನೆ ಕುರಿತು ಹಾಗೂ ಕಿಡಿಗೇಡಿಗಳ ಕುರಿತು ಸ್ಥಳದಲ್ಲಿದ್ದ ಪೂಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಸ್ಥಳದಲ್ಲಿ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಪೊಲೀಸ್‌ ಭದ್ರತೆಯ ನಡುವೆ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು.

ನಟೋರಿಯಸ್ ರೌಡಿಯನ್ನು ಬೆತ್ತಲೆಗೊಳಿಸಿ ಹಲ್ಲೆ

ಶಿವಮೊಗ್ಗ: ರೌಡಿಯೊಬ್ಬನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಈತನನ್ನು ಎದುರಾಳಿ ಗುಂಪು ಮೂರು ದಿನ ಕಿಡ್ನಾಪ್‌ ಮಾಡಿದ್ದುದು ಗೊತ್ತಾಗಿದೆ.

ಕುಡಿದ ಮತ್ತಿನಲ್ಲಿ ಎದುರಾಳಿ ಗ್ಯಾಂಗ್‌ಗೆ ಪಂಥಾಹ್ವಾನ ನೀಡಿದ್ದ ರೌಡಿಯ ಪಂಥಾಹ್ವಾನವನ್ನು ಎದುರಾಳಿ ಗ್ಯಾಂಗ್ ಸ್ವೀಕರಿಸಿತ್ತು. ಆದರೆ ಎದುರಾಳಿ ಗ್ಯಾಂಗ್ ಬರುವ ಮುನ್ನವೇ ಕಾಲ್ಕಿತ್ತಿದ್ದ ರೌಡಿಯ ಸ್ನೇಹಿತನನ್ನು ಗ್ಯಾಂಗ್‌ ಹಿಗ್ಗಾಮುಗ್ಗಾ ಥಳಿಸಿತ್ತು. ಸ್ನೇಹಿತ ಆಸ್ಪತ್ರೆಗೆ ದಾಖಲಾದಾಗ ರೌಡಿಗಾಗಿ ಕಾದು ನಿಂತಿತ್ತು.

ಅಂದುಕೊಂಡಂತೆ ಆಸ್ಪತ್ರೆಗೆ ಬಂದ ರೌಡಿಯನ್ನು ಕಿಡ್ನಾಪ್ ಮಾಡಿದ ಗ್ಯಾಂಗ್, ವಾಹನದಲ್ಲಿ ಕರೆದೊಯ್ದು ಮೂರು ದಿನ ಖಾಸಗಿ ಲೇಔಟ್‌ನಲ್ಲಿ ಬಂಧಿಸಿಟ್ಟು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿತ್ತು. ಇದರ ವಿಡಿಯೋ ಮಾಡಿ ವೈರಲ್ ಮಾಡಿದೆ.

ಇದನ್ನೂ ಓದಿ: Karwar News: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣ; ವಿಡಿಯೊ ಮಾಡಿದ ಯುವಕ‌ನ ಮೇಲೆ ಹಲ್ಲೆ

Exit mobile version