ಶಿವಮೊಗ್ಗ: ಭಾನುವಾರ ಈದ್ ಮಿಲಾದ್ ಮೆರವಣಿಗೆಯ (Eid Milad Procession) ವೇಳೆ ಉಂಟಾದ ಗಲಭೆಯ (Shivamogga Violence) ಸಂದರ್ಭದಲ್ಲಿ ಕೆಲವೊಂದು ಮುಸ್ಲಿಂ ಯುವಕರು (Muslim Youths) ವಸ್ತುಶಃ ರಾಕ್ಷಸರಂತೆಯೇ ಅಟ್ಟಹಾಸ ಮೆರೆದಿರುವುದನ್ನು ಅಲ್ಲಿನ ಮನೆಯವರು ಕಣ್ಣೀರು ಹಾಕುತ್ತಾರೆ ವಿವರಿಸುತ್ತಿದ್ದಾರೆ. ಇವರು ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಪೊಲೀಸರಿಗೂ ಆವಾಜ್ (Threatening to Police) ಹಾಕಿರುವ ದೃಶ್ಯಗಳು ಲಭ್ಯವಾಗಿದ್ದು ಆತಂಕ ಹುಟ್ಟಿಸುವಂತಿವೆ.
ಕಳೆದ ಭಾನುವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು ಎಂಬ ನೆಪ ಇಟ್ಟುಕೊಂಡು ಒಮ್ಮಿಂದೊಮ್ಮೆಗೆ ಹಿಂದುಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಹಾನಿ ಮಾಡಲಾಗಿತ್ತು. ಈ ಹಂತದಲ್ಲಿ ತಡೆಯಲು ಬಂದ ಪೊಲೀಸರ ಮೇಲೂ ದಾಳಿ ಮಾಡಲಾಗಿತ್ತು. ಬಳಿಕ ಪೊಲೀಸರು ಗಲಭೆ ನಿಯಂತ್ರಣಕ್ಕಾಗಿ ಲಾಠಿ ಚಾರ್ಚ್ ನಡೆಸಿದಾಗಲೇ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ತಹಬದಿಗೆ ಬಂದಿತ್ತು.
ಕೆಲವು ಮುಸ್ಲಿಂ ಹುಡುಗರ ಆಕ್ರೋಶ ಯಾವ ಮಟ್ಟಿಗಿತ್ತು ಎಂದರೆ ಅವರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಮುನ್ನುಗಿದ್ದರೆ, ಕೆಲವರು ದೊಡ್ಡ ದೊಡ್ಡ ಕಲ್ಲುಗಳನ್ನೂ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ರೀತಿ ಮುನ್ನುಗ್ಗುವ ವೇಳೆ ಅಲ್ಲಿ ಹೆಣ್ಣುಮಕ್ಕಳೂ ಇದ್ದರು.
ಗಲಾಟೆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲು ತೂರಾಟ ಮಾಡಿದ್ದು ಮಾತ್ರವಲ್ಲ, ಪೊಲೀಸರ ಎದುರು ನಿಂತೇ ಆವಾಜ್ ಹಾಕಿದ ಘಟನೆಯೂ ನಡೆದಿವೆ. ಇಲ್ಲಿನ ಇನ್ಸ್‌ಪೆಕ್ಟರ್ ಹರೀಶ್ ಎಂಬವರನ್ನು ಎದುರು ನಿಲ್ಲಿಸಿಕೊಂಡು ಖಲೀಂ ಎಂಬ ಯುವಕ ವಸ್ತುಶಃ ಬೆದರಿಕೆ ಹಾಕಿರುವ ವಿಡಿಯೊಗಳು ಲಭ್ಯವಾಗಿವೆ.
ನಾವು ಸಾಯ್ಬೇಕು ಇಲ್ದಿದ್ರೆ ಅವ್ರ್ ಸಾಯ್ಬೇಕು
ʻʻನಿಮ್ಮ ಮಾತಿಗೆ ಬೆಲೆ ಕೊಟ್ಟು ನಾವೇನು ಮಾಡಿಲ್ಲ.. ಗಣಪತಿ ಹಬ್ಬಕ್ಕೂ ಏನೂ ಮಾಡಿಲ್ಲ. ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ಬೆಂಕಿ ಹಾಕಿ ಬಿಡ್ತಿದ್ವಿ. ನಿಮಗೆ ಗೊತ್ತಲ್ವಾ ನಾವು ಎಂಥ ನನ್ನ ಮಕ್ಕಳು ಅಂತ. ನಾವು ಸಾಯಬೇಕು ಇಲ್ದಿದ್ರೆ ಅವ್ರ್ ಸಾಯ್ಬೇಕು” ಎಂದು ಖಲೀಂ ಇನ್ಸ್‌ಪೆಕ್ಟರ್ ಹರೀಶ್ ಅವರಿಗೆ ಧಮಕಿ ಹಾಕಿದ್ದಾನೆ. ಆದರೆ, ಇನ್ಸ್‌ಪೆಕ್ಟರ್ ಅವರು ಪರಿಸ್ಥಿತಿ ಸುಧಾರಿಸಲಿ ನೋಡಿಕೊಳ್ಳೋಣ ಎಂದು ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಸುಮ್ಮನಿದ್ದರು.
ಖತರ್ನಾಕ್ ಖಲೀಂ ಅಂದರ್
ಇನ್ಸ್‌ಪೆಕ್ಟರ್ ಹರೀಶ್ ಅವರ ಮುಂದೆಯೇ ಇಷ್ಟೊಂದು ನಿರ್ಭಯವಾಗಿ ಬೆದರಿಕೆ ಹಾಕಿದ ಖಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ʻʻಅವ್ರು ಸಾಯಬೇಕು, ಇಲ್ಲ ನಾವು ಸಾಯಬೇಕುʼʼ ಎಂದಿದ್ದ ಕಿಡಿಗೇಡಿ ಸಲೀಂ ರಾಗಿಗುಡ್ಡ ನಿವಾಸಿಯಾಗಿದ್ದು, ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಾನೆ.
ಇನ್ನೇನು ಸಾಕ್ಷಿ ಬೇಕು ಗೃಹ ಸಚಿವರೇ?
ಈ ನಡುವೆ, ಶಿವಮೊಗ್ಗದಲ್ಲಿ ನಡೆದಿರುವುದು ಸಣ್ಣ ಘಟನೆ ಎಂದು ಹೇಳಿದ ಗೃಹ ಸಚಿವ ಜಿ. ಪರಮೇಶ್ವರ್ ಅವರ ವಿರುದ್ಧ ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋವನ್ನು ನೋಡಿದ ಬಳಿಕವೂ ಅವರು ಇದೊಂದು ಸಣ್ಣ ಘಟನೆ ಎನ್ನುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಪುಂಡರು ರಾಗಿ ಗುಡ್ಡದ ಹಲವು ಮನೆಗಳಿಗೆ ನುಗ್ಗಿ ಕಿಟಕಿ ಗಾಜು ಒಡೆದಿದ್ದರು. ಸ್ಥಳದಲ್ಲಿ ಪೊಲೀಸರು ಇದ್ದರೂ ಕ್ಯಾರೇ ಎನ್ನದೆ ಕಲ್ಲು ಎಸೆದಿದ್ದರು. ಪೊಲೀಸರ ಮೇಲೆಯೇ ದಾಳಿ ಮಾಡಿದ್ದಾರೆ. ಅಷ್ಟಾದರೂ ಇದು ಸಣ್ಣ ಘಟನೆ ಎಂದು ಹೇಳುವ ದಾರ್ಷ್ಟ್ಯ ತೋರಿದ ಸಚಿವರ ವಿರುದ್ಧ ಆಕ್ರೋಶ ಜೋರಾಗಿದೆ.
ಇದು ಪಾಕಿಸ್ತಾನ ಸರ್ಕಾರವಾ ಎಂದು ಕೇಳಿದ ಬಿಜೆಪಿ
“ರಾಜ್ಯಕ್ಕೆ ಬೆಂಕಿ ಹಾಕ್ತೀವಿ!,
— BJP Karnataka (@BJP4Karnataka) October 3, 2023
ಅವ್ರು ಸಾಯ್ಬೇಕು ಇಲ್ಲ ನಾವ್ ಸಾಯ್ಬೇಕು!!”
ಇಷ್ಟು ರಾಜಾರೋಷವಾಗಿ ಪೊಲೀಸರಿಗೇ ಧಮ್ಕಿ ಹಾಕುತ್ತಿರುವ ಈ ಗೃಹ ಸಚಿವರ ಲೆಕ್ಕದಲ್ಲಿನ ಅಮಾಯಕ, ಉಸ್ತುವಾರಿ ಸಚಿವರ ಲೆಕ್ಕದಲ್ಲಿನ ಮಾನಸಿಕ ಅಸ್ವಸ್ಥ, ಉಪಮುಖ್ಯಮಂತ್ರಿಗಳ ಬ್ರದರ್ ಮತ್ತವನ ಬಳಗವನ್ನು ಬಂಧಿಸದೆ, ಗೌರವಾತಿಥ್ಯ ಕೊಡುತ್ತಿರುವ ನಮ್ಮ ದುರ್ಬಲ ರಾಜ್ಯ… pic.twitter.com/7S70tGcV5g
ಈ ನಡುವೆ, ಯುವಕ ಖಲೀಂ ಪೊಲೀಸರಿಗೇ ಬೆದರಿಕೆ ಹಾಕುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “ಇಷ್ಟು ರಾಜಾರೋಷವಾಗಿ ಪೊಲೀಸರಿಗೇ ಧಮ್ಕಿ ಹಾಕುತ್ತಿರುವ ಈ ಗೃಹ ಸಚಿವರ ಲೆಕ್ಕದಲ್ಲಿನ ಅಮಾಯಕ, ಉಸ್ತುವಾರಿ ಸಚಿವರ ಲೆಕ್ಕದಲ್ಲಿನ ಮಾನಸಿಕ ಅಸ್ವಸ್ಥ, ಉಪಮುಖ್ಯಮಂತ್ರಿಗಳ ಬ್ರದರ್ ಮತ್ತವನ ಬಳಗವನ್ನು ಬಂಧಿಸದೆ, ಗೌರವಾತಿಥ್ಯ ಕೊಡುತ್ತಿರುವ ನಮ್ಮ ದುರ್ಬಲ ರಾಜ್ಯ ಸರ್ಕಾರಕ್ಕೂ ಭಯೋತ್ಪಾದಕರ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ಥಾನ ಸರ್ಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲ!” ಎಂದು ಹೇಳಿದೆ.
ಇದನ್ನೂ ಓದಿ: Shivamogga Violence : ಎನ್‌ಕೌಂಟರ್ ಸುದ್ದಿ ಸುಶಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್ ಎಂದ ಎಸ್ಪಿ
ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ, ತಾಲಿಬಾನ್ ಸರ್ಕಾರವೋ?
ಇದೇ ವೇಳೆ ಬಿಜೆಪಿಯು ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ, ತಾಲಿಬಾನ್ ಸರ್ಕಾರವೋ? ಎಂಬ ಪ್ರಶ್ನೆಯನ್ನೂ ಕೇಳಿದೆ.
1. ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವೋ? ತಾಲಿಬಾನ್ ಸರ್ಕಾರವೋ..? ಪೊಲೀಸರ ಮೇಲೆ ಕಲ್ಲು ತೂರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಕೋಮುಗಲಭೆ ನಡೆಸಿದ ತನ್ನ ಜಿಹಾದಿ ಬ್ರದರ್ಸ್‌ಗಳನ್ನು ಬಿಡುಗಡೆ ಮಾಡುವಂತೆ ಖುದ್ದು ಡಿಸಿಎಂ ಡಿಕೆ. ಶಿವಕುಮಾರ್ ಅವರು ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕರೆಂದು ತನ್ವೀರ್ ಸೇಠ್ ಸರ್ಟಿಫಿಕೇಟ್ ಕೊಟ್ಟಿದ್ದರು.
2. ಉಗ್ರಗಾಮಿಗಳ ಬಂಧನವಾಗುತ್ತಿದ್ದಂತೆ ಕ್ಲೀನ್ ಚಿಟ್ ಕೊಡಲು ಉತ್ಸುಕರಾಗಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರಿರುವಾಗ ದಂಗೆಕೋರರನ್ನು ಬಿಟ್ಟು ಕಳಿಸುವುದು ಕಾಂಗ್ರೆಸ್‌ಗೆ ತುಂಬಾ ಸಲೀಸು. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡಿದ ಪರಿಣಾಮವೇ ಇಂದು ಶಿವಮೊಗ್ಗ ಕೋಮುಗಲಭೆಯಿಂದ ಹೊತ್ತಿ ಉರಿಯುತ್ತಿದೆ.
3. ಸಿದ್ದರಾಮಯ್ಯ ಅವರ ಸರ್ಕಾರ ತುಷ್ಟೀಕರಣಕ್ಕಾಗಿ ಜಿಹಾದಿಗಳ ಮೇಲಿನ ಪ್ರಕರಣ ಕೈಬಿಡುತ್ತಿರುವುದರಿಂದ ಕರ್ನಾಟಕದಲ್ಲಿ ಇಂದು ಐಸಿಸ್ ಕ್ಯಾಂಪ್‌ಗಳು ಸಕ್ರಿಯವಾಗುತ್ತಿವೆ- ಎಂದು ಬಿಜೆಪಿ ಹೇಳಿದೆ.